
ರಾಯಚೂರು : ಇದೇ ಮಂಗಳವಾರ ಮಹತ್ವದ ತೀರ್ಪು ಸುಪ್ರೀಂ ಕೋರ್ಟ್ ನಿಂದ ಹೊರಬಂದಿದೆ. “ಹೆಚ್ಚಿನ ಸಂಖ್ಯೆಯ ಮರಗಳನ್ನು ಕಡಿಯುವುದು ಮನುಷ್ಯರನ್ನು ಕೊಂದಂತೆ” ಅಥವಾ “ಮನುಷ್ಯನ ಕೊಲ್ಲುವುದಕ್ಕಿಂತಲೂ ದೊಡ್ಡ ಅಪರಾಧ ಮರಗಳನ್ನು ಕಡಿಯುವುದು” ಮರಗಳನ್ನು ಕಡಿದವರಿಗೆ 1ಲಕ್ಷ ದಂಡ ವಿಧಿಸಿರುವ ಸುಪ್ರೀಂ ಕೋರ್ಟ್ ನ ಆದೇಶ ಸ್ವಾಗತರ್ಹ ಎಂದು ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ, ವನಸಿರಿ ಫೌಂಡೇಷನ್ ರಾಜ್ಯಾಧ್ಯಕ್ಷ ಅಮರೇಗೌಡ ಮಲ್ಲಾಪುರ ತಿಳಿಸಿದರು.
ಸಿಂಧನೂರಿನ ವನಸಿರಿ ಫೌಂಡೇಷನ್ ಕಾರ್ಯಾಲಯದಲ್ಲಿ ಮಾತನಾಡಿದ ಅವರು ಒಂದು ದೊಡ್ಡ ಮರವನ್ನು ಬೆಳಸಬೇಕಾದರೆ ಸಾವಿರಾರು ವರ್ಷಗಳು ಬೇಕಾಗುತ್ತದೆ. ಅದೇ ಒಂದು ದೊಡ್ಡ ಮರವನ್ನು ಕಡಿಯಬೇಕಾದರೆ ಒಂದೇ ದಿನದಲ್ಲಿ ಕಡಿಯಬಹುದು ಆದರೆ ಆ ಮರವನ್ನು ಬೆಳಸಬೇಕಾದರೆ ಮನುಷ್ಯ ತನ್ನ ಜೀವನವನ್ನು ಒತ್ತೆ ಇಟ್ಟು, ಅದಕ್ಕೆ ಎಲ್ಲಿಂದಲೋ ತಂದು ನೀರು ಹಾಕಿ ಅದು ಕೊಡುವ ಶುದ್ಧವಾದ ಗಾಳಿಯನ್ನು ತೆಗೆದುಕೊಂಡು ಅದರಡಿಯಲ್ಲಿ ವಿಶ್ರಾಂತಿ ಪಡೆದು ನಿದ್ರೆಗೆ ಜಾರುತ್ತಾನೆ. ಅದನ್ನು ದಿನನಿತ್ಯ ಪೂಜಿಸುತ್ತಾನೆ.ಇದು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಇತ್ತೀಚಿನ ದಿನಗಳಲ್ಲಿ ಮನುಷ್ಯ ಆಧುನಿಕತೆಗೆ ಮಾರುಹೋಗಿ ಮರಗಳನ್ನು ಕಡಿಯುತ್ತಿರುವುದು ಹೆಚ್ಚಾಗಿದೆ. ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಅಧಿಕಾರಿಗಳ ಗಮನಕ್ಕೆ ತರದೇ ಕಡಿಯುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ಇದರಿಂದ ಬಿಸಿಲನಾಡು ಕಲ್ಯಾಣ ಕರ್ನಾಟಕವಾಗಿದೆ. ಇಂತಹ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮರಗಳನ್ನು ಕಡಿಯುವುದು ಮನುಷ್ಯನನ್ನು ಕೊಲ್ಲುವುದಕ್ಕಿಂತಲೂ ದೊಡ್ಡ ಅಪರಾಧ. ಪರಿಸರಕ್ಕೆ ಹಾನಿ ಮಾಡುವವರ ವಿರುದ್ಧ ಯಾವುದೇ ದಯೆ ,ಕರುಣೆ ತೋರುವ ಅಗತ್ಯವಿಲ್ಲ, ದೊಡ್ಡ ಸಂಖ್ಯೆಯಲ್ಲಿ ಮರಗಳನ್ನು ಕಡಿದವರಿಗೆ 1ಲಕ್ಷ ರೂ. ದಂಡ ವಿಧಿಸಿರುವುದು ಸ್ವಾಗತಾರ್ಹ. ಇಂತಹ ಘಟನೆ ಮತ್ತೆ ಮತ್ತೆ ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸವಂತಾಗಬೇಕು ಎಂದರು.
- ಕರುನಾಡ ಕಂದ
