
ಬಳ್ಳಾರಿ/ ಕಂಪ್ಲಿ : ಕಂಪ್ಲಿ ತಾಲ್ಲೂಕಿನ ಹೊನ್ನಳಿ ಗ್ರಾಮದಲ್ಲಿ ದಂಪತಿ ಮಧ್ಯ ನಡೆದ ಗಲಾಟೆಯು ದುರಂತದಲ್ಲಿ ಅಂತ್ಯವಾಗಿದ್ದು ರೊಚ್ಚಿಗೆದ್ದ ಪತಿಯು ತನ್ನ ಪತ್ನಿಯನ್ನು ಮನೆಯಲ್ಲಿ ನೇಣು ಬಿಗಿದು ಸಾಯಿಸಿ, ತಾನೂ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಹಲಿಮಾ (42) ಕರೀಂಸಾಬ್ (45) ಸಾವನ್ನಪ್ಪಿರುವ ದಂಪತಿ. ವೈಯಕ್ತಿಕ ವಿಚಾರಗಳಿಗಾಗಿ ದಂಪತಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು, ಬುಧವಾರ ತಡರಾತ್ರಿ ಇಬ್ಬರ ಮಧ್ಯೆ ಗಲಾಟೆ ನಡೆದು ಗುರುವಾರ ಬೆಳಗಿನ ಜಾವ ಪತ್ನಿಯನ್ನು ನೇಣಿಗೆ ಹಾಕಿ ಕೊಂದು ತಾನು ನೇಣು ಹಾಕಿಕೊಂಡು ಮೃತಪಟ್ಟಿರಬಹುದು. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಕುಡುತಿನಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯ ಸಂಬಂಧಿಕರು ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಸ್ಥಳಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಶೋಭರಾಣಿ ಡಿ ವೈ ಎಸ್ ಪಿ ಪ್ರಸಾದ್ ಗೋಖಲೆ ಸಿಪಿಐ ವಿಶ್ವನಾಥ ಈರೇಗೌಡ ಭೇಟಿ ನೀಡಿ ಪರಿಶೀಲಿಸಿದರು.
ವರದಿ : ಜಿಲಾನ್ ಸಾಬ್ ಬಡಿಗೇರ.
