ಕೊಪ್ಪಳ/ಕುಷ್ಟಗಿ: ಪಂಚಮಸಾಲಿ ಸಮುದಾಯದ ಮತ್ತು ವೀರಶೈವ ಲಿಂಗಾಯತ, ಹಿಂದೂ ಪರ ಮುಂಚೂಣಿ ನಾಯಕ ಹಾಗೂ ಎಲ್ಲಾ ಸಮಾಜದ ಪರವಾಗಿ ಮಾತನಾಡುವ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಉಚ್ಛಾಟಿಸಿರುವದನ್ನು ಖಂಡಿಸಿ
ಅಖಂಡ ಪಂಚಮಸಾಲಿ ಸಮುದಾಯ ಕುಷ್ಟಗಿ ವತಿಯಿಂದ ವಿರೋಧ ವ್ಯಕ್ತಪಡಿಸಲಾಯಿತು.
ನಮ್ಮ ಪಂಚಮಸಾಲಿ ಸಮುದಾಯದ ಹಾಗೂ ವೀರಶೈವ ಲಿಂಗಾಯತ ಹಾಗೂ ವಿಧಾನಸೌಧದಲ್ಲಿ ಎಲ್ಲ ಸಮಾಜದ ಪರವಾಗಿ ಮಾತನಾಡುವ ಮುಂಚೂಣಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿರುವುದನ್ನು ಕುಷ್ಟಗಿ ತಾಲೂಕಿನ ಸಮಸ್ತ ಪಂಚಮಸಾಲಿಗಳ ಪರವಾಗಿ ಸಮಾಜದ ಮುಖಂಡರು ಸೇರಿ ಉಚ್ಚಾಟನೆ ಕ್ರಮವನ್ನು ಖಂಡಿಸಿ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ದೇವೇಂದ್ರಪ್ಪ ಬಳೂಟಗಿ ಮಾತನಾಡಿ ಬಸನಗೌಡ ಪಾಟೀಲರು ಯತ್ನಾಳ ಅವರು ನಮ್ಮ ಸಮಾಜ ಪರವಾಗಿ ಮತ್ತು ಹಿಂದೂ ಹೋರಾಟಗಾರನಾಗಿರುವುದಕ್ಕೆ ಹೆಮ್ಮೆ ಇದೆ ಮತ್ತು ಯತ್ನಾಳ ಅವರು ನಿಷ್ಟುರತೆ ಮತ್ತು ನೇರವಾಗಿ ಮಾತಾಡಿ ಸತ್ಯಕ್ಕೆ ಹತ್ತಿರವಾದವರು ಅಂಥವರನ್ನು ಪಕ್ಷ ಉಚ್ಚಾಟನೆ ಮಾಡಿರುವುದು ದೊಡ್ಡ ಆಘಾತವಾಗಿದೆ ಇಂತಹ ಘಟನೆಯನ್ನು ಸಮಾಜ ಎಂದಿಗೂ ಸಹಿಸುವುದಿಲ್ಲ ಇದನ್ನು ಖಂಡಿಸಿ ವಿರೋಧ ವ್ಯಕ್ತಪಡಿಸುತ್ತೇವೆ ಮತ್ತು ನಮ್ಮ ಸಮಾಜ ಯಾವಾಗಲೂ ಯತ್ನಾಳ ಜೊತೆಗೆ ಬೆಂಬಲವಾಗಿ ಇರುತ್ತೇವೆ ಎಂಬ ಅಭಿಪ್ರಾಯ ಹೇಳಿದರು. ಬಸರಾಜ ಹಳ್ಳೂರ್ ಅವರು ಮಾತನಾಡುತ್ತಾ ಯತ್ನಾಳ ಅವರು ಎಲ್ಲಾ ಸಮಾಜದ ಪರವಾಗಿ ಮಾತನಾಡುವ ಒಬ್ಬ ಧೀಮಂತ ನಾಯಕನಿಗೆ ಹಾಗೂ ಹಿಂದೂ ಹೋರಾಟಗಾರನಿಗೆ ಈ ರೀತಿ ನಡೆದುಕೊಳ್ಳಬಾರದಿತ್ತು ಇದರಿಂದ ಪಕ್ಷಕ್ಕೆ ದೊಡ್ಡ ನಷ್ಟವಾಗುತ್ತದೆ ಎಂಬ ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ನಿಂಗಪ್ಪ ಮಂಗಳೂರು, ಈರಣ್ಣ ಬಳಿಗಾರ, ವೀರೇಶ್ ತುರಕಾಣಿ, ಶಂಕರಗೌಡ್ರು, ಬಸವರಾಜ್ ಹೊರಪ್ಯಾಟಿ, ಶಿವಪ್ಪ ಗೆಜ್ಜಲಗಟ್ಟಿ, ,ಸಿದ್ದರಾಮಪ್ಪ ಕೌದಿ, ಚನ್ನಬಸಪ್ಪ ನಾಯಕವಾಡಿ, ಬಸವರಾಜು ಬುಡಕುಂಟಿ ಹಾಗೂ ವಕೀಲ ಸಂಘದಿಂದ ಸಂಗನಗೌಡ ಪಾಟೀಲ್, ಯುವ ಘಟಕದಿಂದ , ಸಂಗಮೇಶ ಕಂದಗಲ್, ಸುರೇಶ ಕೌದಿ, ಶಿವು ಸೂಡಿ, ಎಸ್. ಎನ್. ಕಂಚಿ, ಅಮರೇಶ ನಿರೋಳಿ, ಪ್ರಕಾಶ ಇಟಗಿ, ಮಲ್ಲನಗೌಡ ಅಗಸಿಮುಂದಿನ, ಶರಣಪ್ಪ ಹೊಸೂರು,
ಸತೀಶ್ ಬ್ಯಾಳಿ ಮತ್ತಿತರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಉಚ್ಚಾಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವರದಿ ವಿಜಯಮಹಾಂತೇಶ ಬಳಿಗಾರ
