ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಜ್ಞಾನ ವಿಹಾರ ಉಚಿತ ಬೇಸಿಗೆ ಶಿಬಿರ ಮಿನಿ ನಾವಿನ್ಯತೆ ಚಟುವಟಿಕಾ ಕೇಂದ್ರ ಗುರುಮಠಕಲ್

ಗುರುಮಠಕಲ್ /ಯಾದಗಿರಿ: ಸರ್ಕಾರಿ ಪ್ರೌಢಶಾಲೆ ಅನಪುರದಲ್ಲಿ ವಿಜ್ಞಾನ ವಿಹಾರ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ವಿಜೃಂಭಣೆಯಿಂದ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯ ಗುರುಗಳು ರಮೇಶ್ ಅವರು ಅಧ್ಯಕ್ಷತೆಯ ಸ್ಥಾನವನ್ನು ವಹಿಸಿದ್ದರು ಹಾಗೂ ಅತಿಥಿ ಸ್ಥಾನವನ್ನು ಗಣಿತ ಶಿಕ್ಷಕಿ ಶ್ರೀಮತಿ ರಜಿನಿ ಹಾಗೂ ಮಿನಿ ವಿಜ್ಞಾನ ಕೇಂದ್ರದ ಸಂಯೋಜಕರು ನಾಗೇಶ್ ಡಿ ಮತ್ತು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗವು ಭಾಗವಹಿಸಿದ್ದರು.

ವಿಜ್ಞಾನ ವಿಹಾರ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಮಿನಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ನಾಗೇಶ್ ಡಿ ಅವರು ಮಾತನಾಡಿ, “ವಿಜ್ಞಾನ ವಿಹಾರ ಬೇಸಿಗೆ ಶಿಬಿರವು ರಜಾ ದಿನಗಳಲ್ಲಿ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಆತ್ಮಸ್ಥೈರ್ಯವನ್ನು ಬೆಳೆಸಲು ಸಹಾಯಕವಾಗಿದೆ. ಈ ಚಟುವಟಿಕೆಗಳು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಉಂಟುಮಾಡಲು ಹಾಗೂ ಅವರಲ್ಲಿ ನಾಯಕರ ಗುಣಗಳನ್ನು ಬೆಳೆಸಲು ಸಹಾಯಕವಾಗಿವೆ.
ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನವನ್ನು ಶ್ರೀ ರಾಮ್ ಜಿ ರಾಘವನ್ ಅವರು 1999ರಲ್ಲಿ ಸ್ಥಾಪಿಸಿದ್ದರು. ಅವರು ಗ್ರಾಮೀಣ ಪ್ರದೇಶದ ಅಭಾಗದ ಮಕ್ಕಳಲ್ಲಿ ಸೃಜನಶೀಲತೆ, ಆತ್ಮಸ್ಥೈರ್ಯ ಮತ್ತು ನಾಯಕತ್ವವನ್ನು ಬೆಳೆಸಲು ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಮಿನಿ ವಿಜ್ಞಾನ ಕೇಂದ್ರವು ಗುರುಮಠಕಲ್ ನಲ್ಲಿ ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.”

ಅತಿಥಿ ಗಣಿತ ಶಿಕ್ಷಕಿ ಶ್ರೀಮತಿ ರಜಿನಿ ಅವರು ಮಾತನಾಡಿ “ಈ ಬೇಸಿಗೆ ಶಿಬಿರವು ಮಕ್ಕಳಿಗೆ ಉಚಿತವಾಗಿ ಸೃಜನಶೀಲತೆ ಹಾಗೂ ಕ್ರಿಯಾಶೀಲತೆ ಬೆಳೆಸಲು ಅತ್ಯುತ್ತಮ ಅವಕಾಶವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬೇಕು ಮತ್ತು ಹೊಸತಾದ ಜ್ಞಾನವನ್ನು ಗಳಿಸಬೇಕು” ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅಧ್ಯಕ್ಷರು ರಮೇಶ್ ಅವರು ತಮ್ಮ ಮಾತನಾಡುವ ಮೂಲಕ, “ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನವು ನಮ್ಮ ಶಾಲೆಗೆ ಈ ಅಮೂಲ್ಯ ಅವಕಾಶವನ್ನು ನೀಡಿದೆ. ವಿಜ್ಞಾನವು ಕೇವಲ ಪುಸ್ತಕದಲ್ಲಿ ಸೀಮಿತವಲ್ಲ; ಅದು ಪ್ರತಿದಿನದ ಜೀವನದಲ್ಲಿ ಪ್ರಯೋಗಗಳ ಮೂಲಕ ಬೆಳೆಯುತ್ತದೆ. ಈ ರಜಾ ದಿನಗಳಲ್ಲಿ ಮಕ್ಕಳಿಗೆ ವೈಜ್ಞಾನಿಕ ಚಟುವಟಿಕೆಗಳನ್ನು ಕಲಿಸುವ ಮೂಲಕ, ನಾವು ನಮ್ಮ ಶಾಲೆಗೆ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿರುವೆವು” ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಈ ಬೇಸಿಗೆ ಶಿಬಿರವು 2025ರ ಏಪ್ರಿಲ್ 1ರಿಂದ 30ರವರೆಗೆ ನಡೆಯಲಿದೆ, ಮತ್ತು ಎಲ್ಲಾ ಶಾಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸದಸ್ಯರು ಈ ಶಿಬಿರದಲ್ಲಿ ಭಾಗವಹಿಸಿ, ಯಶಸ್ವಿಯಾಗಿ ಪೂರ್ಣಗೊಳಿಸಿದರು.

ವರದಿ: ಜಗದೀಶಕುಮಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ