ಕೊಪ್ಪಳ: ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯವರ ಕಛೇರಿ ಮುಂಭಾಗದಲ್ಲಿ ೨ ತಿಂಗಳ ನಿರಂತವಾಗಿ ಟಿಪಿಜೆಪಿ ಸಂಘಟನೆಯಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಯ ಅಧ್ಯಕ್ಷರು ಹಾಗೂ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ರೈತ ಮುಖಂಡರು, ವಿವಿಧ ಜನಪರ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಅನಿರ್ದಿಷ್ಟ ಹೋರಾಟವನ್ನು ಮಾಡುವುದರ ಜೊತೆಗೆ ನಿರಂತವಾಗಿ ನಮ್ಮ ಸಂಘಟನೆ ೨ ವರ್ಷಗಳಿಂದ ಹೋರಾಟದ ಹಾದಿಯಲ್ಲಿ ಸಾಗಿ ಬಂದಿದೆ ಬಡವರಿಗೆ ಹಣ ಕೊಡಿಸುವುದೆ ನಮ್ಮ ಗುರಿ ಎಂದು ಟಿಪಿಜೆಪಿ ಸಂಘಟನೆಯ ರಾಜ್ಯ ಅಧ್ಯಕ್ಷ ಅಪ್ಪಾಸಾಹೇಬ ಬುಗಡೆ ಅವರು ಮಾ. ೨೭ ರಂದು ಕೊಪ್ಪಳದ ಈಶ್ವರ ಪಾರ್ಕ್‌ನಲ್ಲಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಂದಿನ ತಿಂಗಳ ಎಪ್ರಿಲ್ ೯ ರಂದು ಬುಧವಾರ ಪವರ ಟಿವಿ ಏರ್ಪಡಿಸಿದ ಬೃಹತ್ ಸಮಾವೇಶದಲ್ಲಿ ೫ ಲಕ್ಷ ಗ್ರಾಹಕರು ಭಾಗವಹಿಸಿ ಸರ್ಕಾರದ ಗಮನ ಸೆಳೆದು ಹಣ ಪಡೆಯುವ ಬಗ್ಗೆ ತಿಳಿಸಿದರು. ಬಡವರಿಗೆ ೧೦ ವರ್ಷ ಕಳೆದರೂ ಹಣ ಇದುವರೆಗೂ ಮರುಪಾವತಿಯಾಗಿಲ್ಲ ಆದ್ದರಿಂದ ಪರ್ಲ್ಸ್, ಸಮೃದ್ದ ಜೀವನ, ಗ್ರೀನ್ ಬಡ್ಸ್ , ವ್ಹೀ ತ್ರೀ, ಗುರುಟೀಕ್ ಹೀಗೆ ವಿವಿಧ ಕಂಪನಿಗಳಲ್ಲಿ ಏಜೆಂಟರು, ಗ್ರಾಹಕರು ಮೋಸ ಹೋಗಿದ್ದಾರೆ ನಾವೆಲ್ಲರೂ ಹೋರಾಟದ ಮೂಲಕ ನಮ್ಮ ನಮ್ಮ ಸಮಸ್ಯೆಯ ಪರಿಹಾರಕ್ಕೆ ಹಗಲು ರಾತ್ರಿ ಚಿಂತನೆ ಮಾಡುತ್ತಿದ್ದೇವೆ ಗ್ರಾಹಕರ ಹಣ ಮರು ಪಾವತಿಗಾಗಿ ನಾವೆಲ್ಲರೂ ನಮ್ಮ ಸಂಕಲ್ಪದೊಂದಿಗೆ ಹೋರಾಡುತ್ತಿದ್ದೇವೆ, ನಮಗೆಲ್ಲರಿಗೂ ನಿರುದ್ಯೋಗ ಸಮಸ್ಯೆಯಿದ್ದರೂ ಹೋರಾಟದ ಹಾದಿಯನ್ನು ಬಿಟ್ಟಿಲ್ಲ ಕೆಲವು ಏಜೆಂಟರು ಗ್ರಾಹಕರನ್ನು ನಡು ನಿರಿನಲ್ಲಿ ಬಿಟ್ಟು ಹೋಗಿದ್ದಾರೆ ಈ ರೀತಿ ಮಾಡುವುದು ಸಮಂಜಸವಾದುದಲ್ಲ, ಬಡ ಗ್ರಾಹಕರು ಯಾವುದೇ ಕಂಪನಿಗಳ ಎಂ.ಡಿ ಮುಖವನ್ನು ನೋಡಿ ಹಣ ಕಟ್ಟಿಲ್ಲ ,ನಮ್ಮನ್ನು ನೋಡಿ ಹಣ ಕಟ್ಟಿದ್ದಾರೆ ಆದ್ದರಿಂದ ಏಜೆಂಟರಾದವರು ಗ್ರಾಹಕರ ಋಣ ತೀರಿಸಬೇಕಾದರೆ ಹೋರಾಟದ ಹಾದಿಯಲ್ಲಿ ಸಾಗಿದಾಗ ಪ್ರತಿಫಲ ಸಿಕ್ಕೇ ಸಿಗುತ್ತದೆ. ಒಗ್ಗಟ್ಟಿನಿಂದ ಪ್ರತಿಯೊಬ್ಬರೂ ಹೋರಾಟದಲ್ಲಿ ಕೈಜೋಡಿಸಿದರೆ ಮಾತ್ರ ಯಶಸ್ಸು ಹಾಗೂ ಹಣ ಮರುಪಾವತಿ ಮಾಡಿಸಲು ಸಾಧ್ಯ ಎಂದು ಸಂಘಟನೆಯ ಮುಖಂಡ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ವಾಸುದೇವ ಮೇಟಿ ಬಣದ ಯಲಬುರ್ಗಾ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಮಾತನಾಡಿದರು. ೨೦೨೫ ಏಪ್ರಿಲ್ ೯ ರಂದು ಬುಧವಾರ ದಿವಸ ಗ್ರಾಹಕರು ತಮ್ಮ ದಾಖಲೆ ಸಮೇತ ಬಂದು ತಮ್ಮ ದಾಖಲೆಗಳನ್ನು ಹುಬ್ಬಳ್ಳಿಯಲ್ಲಿ ಜರುಗುವ ಸಮಾವೇಶದಲ್ಲಿ ಒದಗಿಸಬೇಕು ಎಂದು ಟಿಪಿಜೆಪಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಹನುಮೇಶ ಕಲ್ಮಂಗಿ ಅವರು ಮಾತನಾಡಿದರು.
ಸಮಾವೇಶದಲ್ಲಿ ಭಾಗವಹಿಸಿದ ಗ್ರಾಹಕರು ತಮ್ಮ ಕಂಪನಿಗಳ ಕೌಂಟರ್ ತೆರೆಯಲಾಗುತ್ತದೆ ಆದ್ದರಿಂದ ದಾಖಲೆ ತೆಗೆದುಕೊಂಡು ನೋಂದಾಯಿಸಬೇಕು ಎಂದು ಟಿಪಿಜೆಪಿ ಸಂಘಟನೆಯ ಮುಖಂಡ ಅಂದಪ್ಪ ಸಂಗನಾಳ ಮಾತನಾಡಿ ತಮ್ಮ ದಾಖಲೆಗಳು ನೇರವಾಗಿ ಸಿ.ಎಂ. ಅವರ ಸರಕಾರಕ್ಕೆ ಕಳಿಸಲಾಗುವುದು ಎಂದರು.
ಈ ವೇಳೆ ಟಿಪಿಜೆಪಿ ಸಂಘಟನೆಯ ಮುಖಂಡರಾದ ಗವಿಸಿದ್ದಪ್ಪ ಪಲ್ಲೇದ, ಪ್ರಭರಾಜ ಅಂಗಡಿ, ಶಿವಯ್ಯ ರಾವಣಕಿಮಠ, ಕೆ. ಸಂಗಮೇಶ, ರಮೇಶಗೌಡ ಹಾಲಕೇರು, ಶಿವಕುಮಾರ ಮೇಟಿ, ಶರಭಯ್ಯ ಶಿರೂರಮಠ, ಬಸವರಾಜ ಗೌರಿಮಠ, ಮಹೇಶ. ಎಂ. ಬನ್ನಿಕೊಪ್ಪ, ಈಶ್ವರ ಮಂಡಲಗೇರಿ, ಗಂಗಮ್ಮ ಕುಂಬಾರ, ಮಿನಾಕ್ಷಿ ಬಿ ಹಾಗೂ ಮೋಸ ಹೋಗಿರುವ ವಿವಿಧ ಕಂಪನಿಗಳ ಪ್ರತಿನಿಧಿಗಳು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗ್ರಾಹಕರ ಹಣ ಕೊಡಿಸಿ ಪ್ರಾಣ ಉಳಿಸಿ ಎಂದು ಘೋಷಣೆ ಕೂಗಿದರು.
- ಕರುನಾಡ ಕಂದ
