ಹೊಸ ವರುಷ ಮರಳಿ ಬಂದಿತು
ಯುಗಾದಿ ಹಬ್ಬ ಖುಷಿಯ ತಂದಿತು
ಮನಕೆ ಹೊಸತನದ ಮುದ ನೀಡಿತು
ವರ್ಷದ ಹೊಸ ಸಂವತ್ಸರಕ್ಕೆ ಕಾಲಿಟ್ಟಿತು.!
ಹೊಸ ವರುಷದ ದಿನವು
ಹೊಸ ಋತುವಿನ ಚೆಲುವು
ಮನಕೆ ಮೋಹಕತೆಯ ಆನಂದವು
ಬೇವು ಮಾವುಗಳ ಘಮವು.!
ಹೊಸ ವರ್ಷಕ್ಕೆ ಶ್ರೀಕಾರ
ಮರಿ ದುಂಬಿಗಳ ಝಂಕಾರ
ರೈತರಿಗೆ ಮಳೆ ಬೆಳೆಗಳ ಲೆಕ್ಕಾಚಾರ
ಬೇವು ಬೆಲ್ಲಗಳ ಸ್ವೀಕಾರ.!
ಕಷ್ಟ ಸುಖಗಳ ಹಂಚಿಕೊಳ್ಳುತ್ತ
ಮನದಲ್ಲಿ ಹೊಸ ಆಸೆ ಬೆಳೆಸುತ್ತ
ಗುರಿಯ ಕಡೆ ಭರವಸೆ ನೀಡುತ್ತ
ನವ ಕನಸುಗಳನ್ನು ಚಿಗುರಿಸುತ್ತ.!
ಪ್ರಕೃತಿ ದೇವತೆಗೆ ನಮಿಸೋಣ
ಹೊಸತನವನ್ನು ಸ್ವಾಗತಿಸೋಣ
ಸಂತಸದಿ ಎಲ್ಲರೊಂದಿಗೆ ನಲಿಯೋಣ
ಸಂಭ್ರಮದಿ ಯುಗಾದಿ ಆಚರಿಸೋಣ.!
✍️ಮುಡಿಯಪ್ಪ ಹಣಮಂತ ಹುಡೇದ
