ಗುರುಮಠಕಲ್/ನಜರಾಪುರ: ಗುರುಮಠಕಲ್ ನಗರದಿಂದ ಕೇವಲ 6 ಕಿ. ಮಿ ದೂರದಲ್ಲಿರುವ ನಜರಾಪುರ ಪ್ರಕೃತಿಯ ರಮಣೀಯ ಪ್ರೇಕ್ಷಣಿಯ ಸ್ಥಳಗಳನ್ನು ಹೊಂದಿದ್ದು, ದಬ್ ದಬಿ ಜಲಪಾತ ಮತ್ತು ಹಳ್ಳದ ಪಕ್ಕದಲ್ಲಿರುವ ಶ್ರೀ ಚನ್ನಕೇಶ್ವರ ದೇವಸ್ಥಾನಕ್ಕೆ ಹೆಸರುವಾಸಿ, ಶ್ರೀ ಚೆನ್ನಕೇಶವ ಸ್ವಾಮಿ ರಥೋತ್ಸವವು ಭಕ್ತರ ಜೈಕಾರದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಿನ್ನೆ ರಾತ್ರಿ ಜರುಗಿತು. ದಿನಾಂಕ:29/03/2025 ರಿಂದ ಪ್ರಾರಂಭವಾಗಿರುವ ಜಾತ್ರಾ ಮಹೋತ್ಸವ, ವಿಶೇಷ ಪೂಜೆ, ಪಲ್ಲಕ್ಕಿ ಸೇವೆ ಮತ್ತು ಛತ್ರಪತಿ ಶಿವಾಜಿ ಯುವಕರ ಪಡೆಯಿಂದ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಕಬ್ಬಡಿ ಪಂದ್ಯ ಸಹಸ್ರಾರು ಭಕ್ತ ಸಮೂಹಕ್ಕೆ ಮುದ ನೀಡಿದೆ.
ಇಂದು ಕೈ ಕುಸ್ತಿ ಕಾರ್ಯಕ್ರಮ ಜರುಗುವುದು ಎಂದು ದೇವಸ್ಥಾನದ ವ್ಯವಸ್ಥಾಪಕರು ಶ್ರೀ ಚೆನ್ನಕೇಶ್ವರ ದೇವಸ್ಥಾನ ಕಮಿಟಿ ಹಾಗೂ ಪದ್ದತ್ತ ಭಜನ ಮಂಡಳಿ ಸದಸ್ಯರು ತಿಳಿಸಿದರು, ಜಾತ್ರಾ ಮಹೋತ್ಸವದಲ್ಲಿ ಮೋಹನರೆಡ್ಡಿ, ಸದಾ ಶಿವರೆಡ್ಡಿ, ರಘುನಾಥ ರೆಡ್ಡಿ, ನರಸ ರೆಡ್ಡಿ ಪೋ. ಪಾಟೀಲ ಗಡ್ಡೆಸುಗೂರು, ಸೋಮಶೇಖರ ರೆಡ್ಡಿ, ಲಕ್ಷ್ಮೀ ರೆಡ್ಡಿ, ಭೀಮ ರೆಡ್ಡಿ, ಮಲ್ಲಿಕಾರ್ಜುನ ಅಡ್ಕಿ ಹಾಗೂ ಸಮಸ್ಥ ನಜರಾಪುರ ಗ್ರಾಮಸ್ಥರು, ಸುತ್ತ ಮುತ್ತಲಿನ ಶ್ರೀ ಚೆನ್ನಕೇಶವ ಸ್ವಾಮಿ ಅಪಾರ ಭಕ್ತರು ಭಾಗವಹಿಸಿದ್ದರು.
ವರದಿ: ಜಗದೀಶ್ ಕುಮಾರ್
