
ಬಳ್ಳಾರಿ / ಕಂಪ್ಲಿ : ‘ಇಬ್ಬರು ಪರಸ್ಪರ ಹಸ್ತಲಾಘವ ಮಾಡಿದಾಗ ಮರದಿಂದ ಎಲೆಗಳು ಉದುರಿದಂತೆ ಪಾಪಗಳು ಕಳೆಯುತ್ತವೆ’ ಎನ್ನುವ ಪ್ರವಾದಿ ಮುಹಮ್ಮದರ ಮಾತು ‘ಈದ್ ಉಲ್ ಫಿತ್ರ್’ ಆಚರಣೆ ಹಿಂದಿನ ಉದ್ದೇಶವನ್ನು ಸಾರುತ್ತದೆ ಎಂದು ಮುಸ್ಲಿಂ ಧರ್ಮ ಗುರುಗಳಾದ ಸೈಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರಫ್ ಆಜಂ ಪಾಷಾ ಖಾದ್ರಿ ಸಾಹೇಬ್ ತಿಳಿಸಿದರು. ಅವರು ಹೊಸ ಬಸ್ ನಿಲ್ದಾಣದ ಹತ್ತಿರ ಇರುವ ಮುದ್ದಾಪುರ ರಸ್ತೆಯಲ್ಲಿ ಇರುವ ಖದಿಂ ಸುನ್ನಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ವೇಳೆ ಮಾತನಾಡಿ ಪ್ರವಾದಿ ಮಹಮ್ಮದ್ ಅವರು ಮೆಕ್ಕಾವನ್ನು ತೊರೆದ ನಂತರ ಮದೀನಾದಲ್ಲಿ ಈದ್ ಅಲ್-ಫಿತರ್ ಹಬ್ಬವನ್ನು ಮೊದಲ ಬಾರಿಗೆ ಪ್ರಾರಂಭಿಸಿದರು. ಇಸ್ಲಾಮಿಕ್ ಇತಿಹಾಸದ ಪ್ರಕಾರ ಪ್ರವಾದಿ ಮಹಮ್ಮದ್ ರು ಮದೀನಾಕ್ಕೆ ವಲಸೆ ಬಂದ ನಂತರ ಕ್ರಿ.ಶ. 622 ರಲ್ಲಿ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದರು. ಸಹೋದರತೆ, ಉದಾರತೆ, ಮಾನವೀಯತೆ, ಸಮರ್ಪಣಾ ಮನೋಭಾವ ಮುಂತಾವುದಗಳೇ ಈ ಹಬ್ಬದ ತತ್ವವಾಗಿದೆ. ಹಬ್ಬದ ಸಂದೇಶ ಸಾರಿ, ದಾನ – ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಸೈಯ್ಯದ್ ಷಾಹ್ ಅಬ್ದುಲ್ ಖಾದರ್ ಖಾದ್ರಿ ಉರ್ಪ್ ಮುಕ್ತಿಯರ್ ಸಾಹಿಬ್, ಸೈಯ್ಯದ್ ಉಮೇಶ್ ಸಾಹೇಬ್ ಖಾದ್ರಿ, ಮಸೀದಿಗಳ ಪೇಶ ಇಮ್ಮಮ್ ರುಗಳು ಖದೀಮ ಸುನ್ನಿ ಈದ್ಗಾ ಮೈದಾನದ ಅಧ್ಯಕ್ಷರಾದ ಬಿ. ಗೌಸ ಪಾಷಾ, ಪದಾಧಿಕಾರಿಗಳಾದ ಕೋಟೆ ಗನಿಸಾಬ್, ಎಂ. ಸರ್ಮಾಸ್ ಸಾಬ್, ಸಿ. ಅಕ್ಕಾನಿ, ಕಂಪ್ಲಿಯ ಖದೀಮ್ ಜಾಮಿಯಾ ಮಸೀದಿಯ ಅಧ್ಯಕ್ಷರಾದ ಎಂ. ಅರ್ಷದ್, ಕೋಟೆಯ ಜಾಮಿಯ ಮಸೀದಿಯ ಅಧ್ಯಕ್ಷರಾದ ಲಡ್ಡು ಹೊನ್ನೂರವಲಿ. ಮುಖಂಡರಾದ ಗೆಜ್ಜಳಿ ಭಾಷಾ ಸಾಬ್, ಎಂ ಮೆಹಮೂದ್ ಸಾಬ್, ಕೆ. ವಾಹಿದ. ಎಂ. ಶಬ್ಬೀರ, ಸೈಯದ್ ಉಸ್ಮಾನ್, ಬಿ. ಜಾಫರ್, ಎಂ.ಇಸ್ಮಾಯಿಲ್ ಬೇಗ್, ಮೆಹಬೂಬ್ ಸಾಬ್, ಬಡಿಗೇರ್ ಅಜೀಜ್ ಸಾಬ್, ಗೌಸ್ ಸಾಬ್ ಸೇರಿದಂತೆ ಮುಸ್ಲಿಂ ಸಮಾಜದ ಹಿರಿಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್.
