ಯಾದಗಿರಿ /ಸುರಪುರ : ತಾಲೂಕಿನ ಸದಬ ಇದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಒಂದು ತಿಂಗಳ ಕಾಲ ಶ್ರದಾ ಭಕ್ತಿಯಿಂದ ರಂಜಾನ್ ಹಬ್ಬದ ಉಪವಾಸ ಆಚರಿಸಿದ ಮುಸ್ಲಿಂ ಬಾಂಧವರು ಹಿಂದೂ ಬಾಂಧವರಿಗೆ ಸಿಹಿ ಪಾಯಸ ಹಣ್ಣುಗಳನ್ನು ಹಂಚುವುದರ ಜೊತೆಗೆ ಶುಭಾಶಯ ಕೋರಿದರು. ಅದೇ ರೀತಿಯಾಗಿ ಸುರಪುರ ತಾಲೂಕಿನ ಸದಬ ಗ್ರಾಮದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ನಬಿಪಟೇಲ ಅವರು ಮಾಧ್ಯಮದವರ ಜೊತೆ ಮಾತನಾಡಿ ಭಾರತ ದೇಶವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ ವೇಷ, ಭಾಷೆ ಹಲವಾದರೂ ನಾವೆಲ್ಲರೂ ಭಾರತೀಯರು ಎಂಬುದು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾಗಿದೆ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಹಬ್ಬವೇ ರಂಜಾನ ಹಬ್ಬವಾಗಿದೆ ಹಬ್ಬಗಳ ಆಚರಣೆಯಲ್ಲಿ ನಮ್ಮೆಲ್ಲರನ್ನೂ ಒಂದುಗೂಡಿಸುವ ಶಕ್ತಿ ರಾಷ್ಟ್ರೀಯ ಭಾವೈಕ್ಯತೆಯ ಅರಿವು ಮೂಡಿಸುವ ಶಕ್ತಿ ಈ ಹಬ್ಬಗಳಲ್ಲಿ ಅಡಕವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ನಬಿ ಪಟೇಲ್ ಸದಬ ಅವರು ಈ ಸಂದರ್ಭದಲ್ಲಿ ತಿಳಿಸಿದರು.
- ಕರುನಾಡ ಕಂದ
