ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಸೋಮವಾರರಂದು ರಂಜಾನ ಹಬ್ಬವನ್ನುಆಚರಣೆ ಮಾಡಲಾಗಿತ್ತು. 30 ದಿನದ ಉಪವಾಸ ವ್ರತ ಇಂದು ಆಚರಣೆ ಮಾಡುವ ಮೂಲಕ ಮುಕ್ತಾಯಗೊಂಡಿದೆ. ಈದ್ ಉಲ್-ಫಿತರ್ ದಿನದಂದು, ಬೆಳಗಿನ ಪ್ರಾರ್ಥನೆಯ ನಂತರ ಪರಸ್ಪರ ಅಪ್ಪಿಕೊಳ್ಳುವ ಮೂಲಕ ಶುಭಾಶಯವನ್ನು ಕೋರಿ ಹಬ್ಬದ ಸ್ವಾಗತವನ್ನು ಆಚರಿಸುತ್ತಾರೆ. ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಇದರ ಹೊರತಾಗಿ, ಸಿಹಿ ತಿನಿಸುಗಳನ್ನು ಸೇವಿಸುತ್ತಾರೆ. ಜನರು ಈದ್ ಪ್ರಾರ್ಥನೆಗಾಗಿ ಈದ್ ದಿನದಂದು ಜನರು ಹೊಸ ಬಟ್ಟೆಗಳನ್ನು ಧರಿಸಿ ಸಿಹಿತಿಂಡಿಗಳನ್ನು ವಿತರಿಸುತ್ತಾರೆ. ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ಮುಸ್ಲಿಮರು ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಶಾಕಿರ ಆಫೀಸಾಹೀಬ ಮುಲ್ಲಾ ಅಬ್ದುಲಸಾಬ, ಲಕ್ಕುಂಡಿ ಮೇರಾಸಾಬ ನದಾಫ ಹುಸೇನಸಾಬ ಕಿಲ್ಲೆದಾರ ಮೈಬೂಬ ಕಿಲ್ಲೆದಾರ
ರಾಜೇಶಸಾಹೇಬ ಮುರಗಿ ದಿಲಾವರ ಮುರಗಿ
ರಫೀಕಸಾಹೇಬ ನದಾಫ ದಶಗಿರ ಸಾಹೇಬ ಸೈಯದ
ಅಕ್ಬರಸಾಬ ನದಾಫ ಹಾಗೂ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.
ವರದಿ: ಭೀಮಸೇನ ಕಮ್ಮಾರ
