ರಾಯಚೂರು/ ಸಿಂಧನೂರು: ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಏಪ್ರಿಲ್ ಪೂಲ್ ಬದಲಿಗೆ ಏಪ್ರಿಲ್ ಕೂಲ್ ಆಚರಣೆ ಮೂಲಕ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಉದ್ಘಾಟನೆ ಕಾರ್ಯಕ್ರಮವನ್ನು ವನಸಿರಿ ಫೌಂಡೇಷನ್ (ರಿ.)ರಾಜ್ಯ ಘಟಕ ರಾಯಚೂರು ವತಿಯಿಂದ ಸಿಂಧನೂರಿನ ನಟರಾಜ ಕಾಲೋನಿಯ ರಾಜೇಂದ್ರ ಕುಮಾರ ಮೆಮೋರಿಯಲ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವನಸಿರಿ ಫೌಂಡೇಶನ್ ರಾಜ್ಯ ಸಾಮಾಜಿಕ ಜಾಲತಾಣದ ಅಧ್ಯಕ್ಷ ಚನ್ನಪ್ಪ ಕೆ. ಹೊಸಹಳ್ಳಿ ಅವರು ವನಸಿರಿ ಕಾರ್ಯಾಲಯದಲ್ಲಿ ತಿಳಿಸಿದರು.
ಇದೇ ಏಪ್ರೀಲ್ 1ರಂದು ಬೆಳಗ್ಗೆ 10-30 ಕ್ಕೆ ಸಿಂಧನೂರಿನ ನಟರಾಜ ಕಾಲೋನಿಯ ರಾಜೇಂದ್ರ ಕುಮಾರ ಮೆಮೋರಿಯಲ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ನೇತೃತ್ವದಲ್ಲಿ ಬೆಳಗ್ಗೆ 10:30 ಕ್ಕೆ
ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 118 ಜಯಂತಿ, ವಿಶೇಷ ಪೂಜೆ, ಹಾಗೂ ಅನ್ನ ದಾಸೋಹ ಕಾರ್ಯಕ್ರಮ ಜೊತೆಗೆ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ದಾಹ ತೀರಿಸಲು ಮಣ್ಣಿನ ಮಡಿಕೆ ಕಟ್ಟಿ ನೀರುಣಿಸಲಾಗುವುದು. ಯುವಕ ಯುವತಿಯರಿಗೆ ಪರಿಸರ ಜಾಗೃತಿ ಮೂಡಿಸಲು ಏಪ್ರೀಲ್ ಪೂಲ್ ಬದಲಿಗೆ ಏಪ್ರೀಲ್ ಕೂಲ್ ವಿನೂತನವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಜಿಲ್ಲೆಯ ವಿವಿಧ ಪರಮ ಪೂಜ್ಯರು ವಹಿಸಲಿದ್ದಾರೆ. ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ವಿವಿಧ ಗಣ್ಯರು, ಶ್ರೀ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು, ಜಿಲ್ಲೆಯ ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಕ್ಷಿ ಸಂಕುಲ ಉಳುವಿಗೆ ಸಹಕರಿಸುವ ಮೂಲಕ ಶ್ರೀ ಸಿದ್ದಗಂಗಾ ಶ್ರೀಗಳ ಕೃಪೆಗೆ ಪಾತ್ರರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವನಸಿರಿ ಫೌಂಡೇಶನ್ ರಾಜ್ಯ ಸಾಮಾಜಿಕ ಜಾಲತಾಣದ ಅಧ್ಯಕ್ಷ ಚನ್ನಪ್ಪ ಕೆ.ಹೊಸಹಳ್ಳಿ ಅವರು ಮನವಿ ಮಾಡಿದರು.
- ಕರುನಾಡ ಕಂದ
