ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಬ್ಬರು ದಲಿತ ಯುವತಿಯರ ಸಾವಿನ FSL ವರದಿಗಾಗಿ ಕಾದು ಕುಳಿತಿರುವ ಸಂತ್ರಸ್ತೆ ಕುಟುಂಬ

ಯಾದಗಿರಿ/ ಗುರುಮಠಕಲ್ ಅಲೆಮಾರಿ ಬುಡಗ ಜನಾಂಗದ ದಲಿತ ಇಬ್ಬರು ದಲಿತ ಯುವತಿಯರ ಅನುಮಾನಾಸ್ಪದ ಸಾವು ಕಳೆದ ಫೆಬ್ರವರಿ 12 ರಂದು ಜರುಗಿದ್ದು, ಸಾವಿನ ನಿಜಾಂಶ FSL ವರದಿ ಬಂದಾಗ ಮಾತ್ರ ಗೊತ್ತಾಗುವದು.
ಪ್ರಕರಣ ಬಗ್ಗೆ ಸೂಕ್ಷ್ಮವಾಗಿ ನೋಡುವುದಾದಾದರೆ,
ಅಲೆಮಾರಿ ಬುಡಗ ಜಂಗಮ ಜಾತಿಯ ಶ್ಯಾಮಮ್ಮ ಗಂ. ಹುಸೇನಪ್ಪ ಸಿರಿಗಿರಿ, ವಯಸ್ಸು: 20 ವರ್ಷ, ಸಾಯಮ್ಮ ತಂ. ಭೀಮಪ್ಪ ಸಿರಿಗಿರಿ, ವಯಸ್ಸು: 15 ವರ್ಷ, ವಾರ್ಡ ನಂ: 12, ಇಂದಿರಾನಗರ, ಗುರುಮಿಠಕಲ್
ತಾ: ಗುರುಮಠಕಲ್ ಜಿ: ಯಾದಗಿರಿ,
ಈ ಇಬ್ಬರು ದಿನ ನಿತ್ಯ ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ಅಂದು ಸಹ ಚಿಂದಿ ಆಯುವ ಕೆಲಸದ ನಿಮಿತ್ತ ಗುರುಮಠಕಲ್ ಮನೆಯಿಂದ ಚಿಂದಿ ಆಯಲು ಗುರುಮಠಕಲ್ ಮತಕ್ಷೇತ್ರದ ನೀಲಹಳ್ಳಿ ಹೋಗಿರುತ್ತಾರೆ, ಆದರೆ ವಾಪಸ್ ಮರಳಿ ಬಾರದ ಕಾರಣ ಹುಡುಕಿದಾಗ ಕೆರೆಯಲ್ಲಿ ಇಬ್ಬರ ಶವವು ಸಿಕ್ಕಿರುತ್ತದೆ. ಇಬ್ಬರ ಸಾವು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಈ ಕುರಿತಾಗಿ ಸೈದಾಪೂರ ಠಾಣೆಯಲ್ಲಿ ಎಫ್.ಐ.ಆ‌ರ್. ದಾಖಲಾಗಿದೆ, ಇಬ್ಬರು ದಲಿತ ಬಾಲಕಿಯರ ಸಾವಿನ ಪ್ರಾಥಮಿಕ ಮರಣೋತ್ತರ ಪರೀಕ್ಷೆಯಲ್ಲಿ ಯಾವುದೇ ಅಂಶ ಕಂಡು ಬಂದಿರುವುದಿಲ್ಲ ಹಾಗಾಗಿ FSL ವರದಿ ಮೊರೆ ಹೋಗಿರುವ ಪೊಲೀಸ್ ಇಲಾಖೆ, FSL ವರದಿ ಅಧಾರದ ಮೇಲೆ ಹೆಚ್ಚಿನ ತನಿಖೆ ನಡೆಸಲು ನಿರ್ಧರಿಸಿದೆ.
ಬಾಲಕಿಯರ ಪೋಷಕರಿಗೆ ಕರ್ನಾಟಕ ಪ.ಜಾತಿ, ಪ. ಪಂ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷರು ಪಲ್ಲವಿ ಜೀ, ಕರ್ನಾಟಕ ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಕೆ.ನೀಲಾ, ಗುರುಮಠಕಲ್ ಜನಪ್ರಿಯ ಶಾಸಕರಾದ ಶ್ರೀ ಶರಣುಗೌಡ ಕಂದುಕೂರು ಭೇಟಿ ನೀಡಿ ಸಾಂತ್ವನ ಹೇಳಿ ಯುವತಿಯರ ಅನುಮಾನಾಸ್ಪದ ಸಾವಿನ ಕುರಿತು ಪ್ರಾಮಾಣಿಕ ತನಿಖೆಗೆ ಒತ್ತಾಯಿಸಿದ್ದರು,
ಸಾವಿನ ಬಗ್ಗೆ ಸಾಕಷ್ಟು ಅನುಮಾನ ಇರುವುದರಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿ ತಿಂಗಳುಗಳು ಕಳೆದಿದೆ ಎಂದು ತಾಲೂಕಾಧ್ಯಕ್ಷರು ಶ್ರೀ ಅಶೋಕ್. ಎಸ್ ತಿಳಿಸಿದರು.
ಮಾರ್ಚ್ 27 ರಂದು FSL ವರದಿ ಬರುವುದಾಗಿ ತಿಳಿಸಿದ್ದರು, ಇನ್ನೂ ವರದಿ ಬಂದಿಲ್ಲ ಈ ವಾರದ ಕೊನೆಯವರೆಗೆ ವರದಿ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಇನ್ನುಳಿದಂತೆ ಬೆಂಗಳೂರು, ಯಾದಗಿರಿ,ಕಲಬುರಗಿ, ಹಾವೇರಿ, ಗುರುಮಠಕಲ ಸೇರಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿಯವರು, ವಿವಿಧ ದಲಿತ ಸಂಘಟನೆಗಳು, ವಿಶ್ವ ಹಿಂದೂ ಪರಿಷತ್, ಭಜರಂಗದಳ ಗುರುಮಠಕಲ್ ಸಹ ತನಿಖೆ ನಡೆಸಿ, ಅವರ ಸಾವಿಗೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಿ, ಇವರ ಸಾವಿಗೆ ಕಾರಣರಾದವರ ಮೇಲೆ ನಿಷ್ಪಕ್ಷಪಾತವಾಗಿ ತ್ವರಿತ ಗತಿಯಲ್ಲಿ ಕಾನೂನು ಕ್ರಮ ಜರುಗಿಸಲು ಮನವಿ ನೀಡಿದ್ದಾರೆ, ಪ್ರಕರಣ ಕಳೆದು 48 ದಿನ ಕಳೆದರು FSL ವರದಿ ಬಂದಿಲ್ಲ, FSL ವರದಿ ಬಳಿಕವೇ ಯುವತಿಯರ ಅತ್ಯಾಚಾರ ಕೊಲೆಯೋ ಅಥವಾ ಬೇರೆ ಕಾರಣನೋ ಈ ವಾರದ ಕೊನೆಯಲ್ಲಿ ಗೊತ್ತಾಗುತ್ತದೆ…

ವರದಿ: ಜಗದೀಶ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ