
ಬಾಗಲಕೋಟೆ/ ಬಾದಾಮಿ : ನರಸಾಪುರ ಗ್ರಾಮದ
ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.
ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಗಮಿಸಿದ್ದರು. ರಥೋತ್ಸವದ ನಂತರ ಅನ್ನ ಪ್ರಸಾದ ಸೇವೆ, ರಾತ್ರಿ 10.30 ಕ್ಕೆ ನಾಟಕ ಪ್ರದರ್ಶನ ನೆರವೇರಿತು. ರಥೋತ್ಸವದ ಉದ್ಘಾಟನೆಯನ್ನು ಶ್ರೀ ಮರುಳ ಸಿದ್ದಲಿಂಗ ಮಹಾಸ್ವಾಮಿಗಳು ನರಸಾಪುರ
ಗುರುಹಿರಿಯರು ನೆರವೇರಿಸಿಕೊಟ್ಟರು. ಸಂದರ್ಭದಲ್ಲಿ ಗ್ರಾ.ಪ ಸದಸ್ಯರಾದ ಆನಂದಗೌಡ ಪಾಟೀಲ್, ಶರಣಪ್ಪ ನಡಗಡ್ಡಿ ಮತ್ತು ಊರಿನ ಗುರುಹಿರಿಯರಾದ ಎಚ್ .ಜೀ.ಖಾನಾಪುರ (ನಿವೃತ್ತ ಶಿಕ್ಷಕರು) ಸುರೇಶ ಯೋಗಪ್ಪನವರ, ಪಿ.ಎಸ್.ಕಲಾದಗಿ ಎ.ಬಿ.ಪಾಟೀಲ್ .ಹಾಗೂ ಮಹಾಂತೇಶ್ ಹಟ್ಟಿ ಕೆ.ಪಿ.ಸಿ.ಸಿ.ವಕ್ತರಾರು ,ಪೊಲೀಸ್ ಸಿಬ್ಬಂದಿ ಮತ್ತು ಹಿರಿಯರು ಯುವಕರು ಕರವೇ.ಕಾರ್ಯಕರ್ತರು ಆಟೋ ಚಾಲಕರು,ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ನಿಂಬಯ್ಯ ಕುಲಕರ್ಣಿ
