ವಿಜಯಪುರ ಜಿಲ್ಲೆಯ ಇಂಡಿ ನಗರದಲ್ಲಿ ದಿನಾಂಕ 31/03/2025 ರಂದು ಪತ್ರಿಕಾ ಗೋಷ್ಠಿ ನಡೆಸಿದ ಇಂಡಿ ತಾಲೂಕಾ ಕ. ರ .ವೇ ಅಧ್ಯಕ್ಷ ಬಾಳು ಮುಳಜಿಯವರು ಇಂಡಿ ತಾಲೂಕಿನಾದ್ಯಂತ ತೊಗರಿ ಬೆಳೆಯು ರೋಗದಿಂದ ಸಂಪೂರ್ಣ ಹಾಳಾಗಿದ್ದು , ಕೂಡಲೇ ಸರ್ಕಾರವು ಪ್ರತಿ ಎಕರೆಗೆ 25 ಸಾವಿರ ರೂಪಾಯಿಗಳು ಪರಿಹಾರ ಘೋಷಿಸಬೇಕು ಹಾಗೂ ಬೆಳೆ ವಿಮಾ ಕಂಪನಿಗಳು ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಬೇಸಿಗೆಯಲ್ಲಿ ನೀರಿನ ಅಭಾವ ಇರುವುದರಿಂದ ಶಾಖಾ ಕಾಲುವೆಗಳಿಗೆ ನೀರು ಹರಿಸಬೇಕೆಂದು ಸರ್ಕಾರಕ್ಕೇ ಆಗ್ರಹಿಸಿದರು.
ಕೆ ಬಿ ಜೆ ಏನ್ ಎಲ್ ಅಧಿಕಾರಿಗಳು ನಿದ್ರೆಗೆ ಜಾರಿದ್ದರಾ ಎಂದು ರೈತರು ಕೇಳುತ್ತಿದ್ದಾರೆ. ಯಾಕೆಂದರೆ ಎಷ್ಟೋ ಕಾಲುವೆಗಳು 15 ರಿಂದ 20 ವರ್ಷ ಆಯಿತು ಇನ್ನೂ ನೀರೆ ಕಂಡಿಲ್ಲ, ಅಗರಖೇಡ ಗ್ರಾಮದ ಕಡೆ ಬರುವ ಕಾಲುವೆ ಸಂಖ್ಯೆ 14 15 16 17 ಜಾಲಿ ಕಂಠಿ , ಗಿಡಗಳು ಬೆಳೆದು ಮಣ್ಣು ತುಂಬಿಕೊಂಡಿವೆ, ಅಧಿಕಾರಿಗಳು ಅಲ್ಲಿ ಏನೇ ಸಮಸ್ಯೆ ಇದ್ದರೂ ಅದನ್ನು ಬಗೆ ಹರಿಸಿ ನೀರು ಹರಿಸಲು ಇಷ್ಟು ವರ್ಷಗಳಾದರೂ ಸಾಧ್ಯವಾಗಿಲ್ಲ ಅಂದರೆ ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಹಾಗಿದ್ದರೆ ಆಯಾ ಕಾಲುವೆಗಳಿಗೆ ಹೂಳೆತ್ತಲು ಇಲ್ಲಿಯವರೆಗೂ ಅನುದಾನವೆ ಬಂದಿಲ್ಲವೇ? ಒಂದು ವೇಳೆ ಬಂದಿದ್ದರೆ ಆ ಅನುದಾನ ಏನಾಯಿತು ಎಂದು ರೈತರು ಕೇಳುವ ಮುಂಚೆ ಅಧಿಕಾರಿಗಳು ಎಚ್ಚೆತ್ತುಕೊಂಡು ಆ ಕಾಲುವೆಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು. ರೈತರು ನಮ್ಮ ದೇಶದ ಬೆನ್ನೆಲುಬು ಎಂದು ಬರೀ ಭಾಷಣ ಮಾಡಿದರೆ ಸಾಲದು, ನೀವು ಅಧಿಕಾರಿ ಆಗಿ ಆ ಸ್ಥಾನದಲ್ಲಿ ಇರೋದು ರೈತರ ಸಮಸ್ಯೆ ಬಗೆಹರಿಸಲು ಹಾಗೂ ರೈತರ ಸೇವೆಯನ್ನು ಮಾಡಲು ಎಂದು ತಿಳಿದು ಕೆಲಸ ಮಾಡಿ ಆವಾಗ ರೈತನ ಸಮಸ್ಯೆಯೂ ಬಗೆ ಹರಿಯುತ್ತೆ ನಿಮಗೂ ಕೆಲಸ ಮಾಡಿದ ಆತ್ಮ ತೃಪ್ತಿಯೂ ಇರುತ್ತೆ.
ಒಂದು ವೇಳೆ ಸರ್ಕಾರವು ಇದಕ್ಕೆ ಸ್ಪಂದಿಸದೆ ಇದ್ದರೆ ದಿನಾಂಕ:07/04/2025 ರಂದು ಇಂಡಿ ನಗರದ ಬಸವೇಶ್ವರ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಹಾಗೂ ಹಂತ ಹಂತವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು. ಟ್ರ್ಯಾಕ್ಟರ್ ಗಳೊಂದಿಗೆ ರಾಷ್ಟೀಯ ಹೆದ್ದಾರಿ ತಡೆ, ಮಿನಿ ವಿಧಾನಸೌಧ ಮುತ್ತಿಗೆ, ರಸ್ತೆ ತಡೆ ಹೀಗೆ ಬ್ರಹತ್ತ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು. ರೈತರಿಗೆ ಕೂಡಲೇ ಸರ್ಕಾರವು ನ್ಯಾಯ ದೊರಕಿಸಿ ಕೊಡಬೇಕು ,ಇಂಡಿ ತಾಲ್ಲೂಕಿನಲ್ಲಿ ಈ ವರ್ಷ ಸುಮಾರು 1 ಲಕ್ಷ ಹೆಕ್ಟರನಸ್ಟು ತೊಗರಿ ರೋಗಕ್ಕೆ ಹಾಗೂ ಅತಿ ವೃಷ್ಟಿ, ಅನಾವೃಷ್ಟಿ ಯಿಂದ ಹಾಳಾಗಿದ್ದು ಅದಕ್ಕಾಗಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ವರದಿ ಮನೋಜ್ ನಿಂಬಾಳ
