
ಬಳ್ಳಾರಿ / ಕಂಪ್ಲಿ : ಯುವಕರು ಕ್ರೀಡೆಯಲ್ಲಿ ತೊಡಗುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹಾಗೂ ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಸಾಂಸ್ಕೃತಿಕ ಬಾಂಧವ್ಯ ವೃದ್ಧಿಗೊಳ್ಳುತ್ತದೆ ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಎನ್. ಗಣೇಶ ಹೇಳಿದರು.
ಅವರು ಕಂಪ್ಲಿಯ ಪ್ರಥಮ ದರ್ಜೆ ಕಾಲೇಜ್ (ಡಿಗ್ರಿ ಕಾಲೇಜ್) ಪಕ್ಕದ ಮೈದಾನದಲ್ಲಿ ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ ಕಂಪ್ಲಿ ರಂಜಾನ್ ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಕೇಕನ್ನು ಕತ್ತರಿಸಿ ಮಾತನಾಡಿದ ಅವರು ರಂಜಾನ್ ಹಬ್ಬ ಆಚರಣೆ ಬಳಿಕ ನಗರದಲ್ಲಿ ಕ್ರಿಕೆಟ್ ಆಯೋಜನೆ ಮಾಡುವುದರಿಂದ ಅಕ್ಕ ಪಕ್ಕದ ಗ್ರಾಮದವರು ಹಾಗೂ ತಾಲ್ಲೂಕಿನಲ್ಲಿ ಯುವಕರ ಸ್ನೇಹ ಬಾಂಧವ್ಯಕ್ಕೆ ಅನುಕೂಲವಾಗುತ್ತದೆ’ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಭಟ್ಟ ಪ್ರಸಾದ್, ಎಪಿಎಂಸಿ ಅಧ್ಯಕ್ಷ ಹಬಿಬ್ ರಹಮಾನ್, ಪುರಸಭಾ ಸದಸ್ಯ ಸಿ ಆರ್ ಹನುಮಂತ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಷಣ್ಮುಖಪ್ಪ, ಮುಖಂಡರಾದ ನಾರಾಯಣಪ್ಪ, ಪುರಸಭೆ ಸದಸ್ಯ ಲಡ್ಡು ಹೊನ್ನೂರವಲಿ, ಖಿದ್ಮತೆ ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಮಸ್ತಾನವಲಿ ಕಡಪ, ಯು. ಜಹೀರುದ್ದಿನ, ಖಬರಸ್ತಾನ ಕಮಿಟಿಯ ಅಧ್ಯಕ್ಷ ಫಾರೂಕ್, ಮುಖಂಡರಾದ ಎಂ. ಮೆಹಮೂದ ಸಾಬ್, ಕೆ. ವಹೀದಾ ಸಾಬ್, ಹಾಜಿ ಇಂತಿಯಾಜ್ S.K. ಕಂಪ್ಲಿ ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷ ರಿಯಾಜ್ ಅಹ್ಮದ್, ಯು. ಕಾಜವಲಿ, ಅತೀಪ್ ಕಪಾಲಿ, ನೂರ್ ಮುಕ್ತಿಯರ್, ಮೌಲಾ, ತಬ್ರೇಜ್, ಶಾಕಿರ್, ರೆಹಮಾನ್ ನೂರ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್.
