ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಶ್ರೀ ಚಾಮುಂಡೇಶ್ವರಿ ಹಿ.ಪ್ರಾ. ಶಾಲೆ ಹಾಗೂ ಪ್ರೌಢ ಶಾಲೆ ಕಾಳಗಿ ಶಾಲೆ ವತಿಯಿಂದ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ತುಮಕೂರಿನ ಸಿದ್ದಗಂಗಾ ಮಠದ ಲಿಂಗೈಕ್ಯ ಡಾll ಶಿವಕುಮಾರ್ ಮಹಾಸ್ವಾಮೀಜಿಯವರ ಜಯಂತಿಯ ಹಿನ್ನೆಲೆಯಲ್ಲಿ ಕಾಳಗಿಯ ಕಾಳೇಶ್ವರ ದೇವಸ್ಥಾನದಲ್ಲಿ ಶ್ರೀ ಶಿವಕುಮಾರ್ ಸ್ವಾಮಿಗಳ ಅವರ ಭಾವಚಿತ್ರಕ್ಕೆ ಪಂಕಜ ಮೇಡಂ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳಿಂದ ಪೂಜೆ ಸಲ್ಲಿಸಲಾಯಿತು. ಅನ್ನದಾನ ಮತ್ತು ವಿದ್ಯದಾನವು ಇವರ ಮುಖ್ಯ ಗುರಿಯಾಗಿದೆ. ಹಸಿವು ಮುಕ್ತ ಸಮಾಜದೊಂದಿಗೆ ಜ್ಞಾನ ಸಂಪಾದನೆ ಇವರ ಧ್ಯೇಯವಾಗಿದೆ. ಅನ್ನ, ಅಕ್ಷರ, ದಾಸೋಹ ಪ್ರತಿನಿತ್ಯ ನಡೆಸಿಕೊಂಡು ಬಂದ ಮಹಾ ಅನುಭಾವರು ಶ್ರೀ ಶಿವಕುಮಾರ್ ಮಹಾಸ್ವಾಮಿಗಳವರು ಶ್ರೀ ಶಿವಕುಮಾರ ಮಹಾಸ್ವಾಮಿಗಳರ ವರ ಜಯಂತಿಯ ಹಿನ್ನೆಲೆಯಲ್ಲಿ ಶ್ರೀ ಚಾಮುಂಡೇಶ್ವರಿ ಹಿ. ಪ್ರಾ. ಹಾಗೂ ಪ್ರೌಢ ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಅನ್ನದಾಸೋಹ ವ್ಯವಸ್ಥೆಯನ್ನು ತನು ಮನ ಧನದಿಂದ ಶ್ರೀ ಕಾಳೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ವಿತರಿಸುವ ಮೂಲಕ ಅರ್ಥಪೂರ್ಣವಾಗಿ, ವಿಶೇಷವಾಗಿ ಜಯಂತಿಯನ್ನು ಆಚರಿಸಲಾಯಿತು.
ಈ ಜಯಂತಿಯ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳು ಪಂಕಜ ಮೇಡಂ, ರಾಜೇಶ್ ಗುತ್ತೇದಾರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ರಾಘವೇಂದ್ರ ಗುತ್ತೇದಾರ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ವೇದಾಪ್ರಕಾಶ್ ಮೋಟಗಿ, ಸಂತೋಷ ಪತಂಗೆ, ಸಂತೋಷ ನರನಾಳ, ಶಾಮರಾವ್ ಕಡಬುರ, ಗೌರಿಶಂಕರ ವನಮಾಲಿ, ವಿಜಯಕುಮಾರ್ ಪಾಟೀಲ್ ಮತ್ತು ಶ್ರೀ ಚಾಮುಂಡೇಶ್ವರಿ ಶಾಲೆಯ ಮುಖ್ಯ ಗುರುಗಳಾದ ರಮೇಶ ನಾಮಧಾರ ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ : ಶ್ರೀ ಚಂದ್ರಶೇಖರ್ ಆರ್. ಪಾಟೀಲ್
