ಬೀದರ್/ ಬಸವಕಲ್ಯಾಣ: ಶ್ರೀ ಜಗದ್ಗುರು ಘನಲಿಂಗ ರುದ್ರಮನಿ ಶಿವಾಚಾರ್ಯ ಗವಿಮಠದಿಂದ ಕೊಡಮಾಡುವ 2025 ರ ” ಅಭಿನವ ಘನಲಿಂಗ ಶ್ರೀ ” ಪ್ರಶಸ್ತಿ ಗೆ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರಾದ ಶ್ರೀ ಬಸವರಾಜ ರಾಮಲಿಂಗಯ್ಯಾ ಸ್ವಾಮಿ ಅವರಿಗೆ, ಧರ್ಮಾಭಿಮಾನಿಗಳಾದ ಶ್ರೀ ದೇವಿಂದ್ರ ಮಹಾರುದ್ರಪ್ಪಾ ಕೊರಾಳೆ ತಾಂಬೋಳ, ಪುಣ್ಯಕೋಟಿ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಪ್ರೊ. ಸೂರ್ಯಕಾಂತ ಶೀಲವಂತ, ರೆಡ್ಡಿ ಸಮಾಜದ ಅಧ್ಯಕ್ಷರಾಗಿರುವ ವಿಜಯ ಕುಮಾರ ರೆಡ್ಡಿ, ಧರ್ಮದ ಸೇವೆಯನ್ನು ಮಾಡುತ್ತಿರುವ ಶ್ರೀ ವಿಜಯಕುಮಾರ ಮಾಣಿಕಪ್ಪಾ ಮುಚಳಂಬೆ ತ್ರಿಪುರಾಂತ ಒಟ್ಟು ಐವರನ್ನು ಆಯ್ಕೆ ಮಾಡಲಾಗಿದೆ ಎಂದು ನಗರದ ಸಂಸ್ಥಾನ ಗವಿಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ತಿಳಿಸಿದ್ದಾರೆ. ಸಂಸ್ಥಾನ ಗವಿಮಠದಲ್ಲಿ ಎಪ್ರಿಲ್ 10ರಂದು ಬೆಳಿಗ್ಗೆ 10:00ಗೆ ಜರಗುವ ಶ್ರೀ ಘನಲಿಂಗ ರುದ್ರಮುನಿ ಜಾತ್ರಾ ಮಹೋತ್ಸವ ಹಾಗೂ ರಾಜ್ಯಮಟ್ಟದ 13ನೆಯ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಸಮಾರಂಭದಲ್ಲಿ ” ಅಭಿನವ ಘನಲಿಂಗ ಶ್ರೀ ” ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾನಿಧ್ಯ ಪೂಜ್ಯ ಶ್ರೀ ಷ. ಬ್ರ. ವಿಶ್ವಾರಾಧ್ಯ ಮಳೆಂದ್ರ ಶಿವಾಚಾರ್ಯರು ಹಿರೇಮಠ ಅಫಜಲಪುರ, ನೇತೃತ್ವ ಶ್ರೀ ಷ.ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಗವಿಮಠ ಬಸವಕಲ್ಯಾಣ, ಚು.ಸಾ.ಪ. ಸರ್ವಾಧ್ಯಕ್ಷರಾದ ಶ್ರೀ ಷ.ಬ್ರ ಡಾ.ರೇವಣಸಿದ್ದ ಶಿವಾಚಾರ್ಯರು ಹಿರೇಮಠ ಶ್ರೀನಿವಾಸ ಸರಡಗಿ, ಅಧ್ಯಕ್ಷತೆ ಶ್ರೀ ಶರಣಪ್ಪ ಬಿರಾದಾರ ಕಾರ್ಯಾಧ್ಯಕ್ಷರು ಗವಿಮಠ ಟ್ರಸ್ಟ ತ್ರಿಪೂರಾಂತ ಬಸವಕಲ್ಯಾಣ ವಿಶೇಷವಾಗಿ ಬಸವಕಲ್ಯಾಣ ಗವಿಮಠ ಮಹಿಮೆ ಭಕ್ತಿ ಗೀತೆ ಹಾಗೂ ತತ್ವಪದಗಳು ಗ್ರಂಥ ಲೋಕಾರ್ಪಣೆ ಮಾಡಲಾಗುವುದು ಆದ್ದರಿಂದ ಸಕಲ ಸದ್ಭಕ್ತರು ಆಗಮಿಸಿ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಯೋಗಿಗಳ ದರ್ಶನ ಆಶೀರ್ವಾದ ಪಡೆದು ಮಹಾಪ್ರಸಾದ ಸ್ವೀಕರಿಸಿ ಪುನೀತರಾಗಬೇಕೆಂದು ಶ್ರೀಮಠದ ವತಿಯಿಂದ ಕೋರಲಾಗಿದೆ.
ವರದಿ : ಶ್ರೀನಿವಾಸ ಬಿರಾದಾರ
