
ಬಳ್ಳಾರಿ / ಕಂಪ್ಲಿ : ಇಲ್ಲಿನ ಬಣ್ಣದ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಾಂಗ ಸಮಾಜದಿಂದ ತಹಶೀಲ್ದಾರ್ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ ಆದ್ಯ ವಚನಕಾರ ದೇವರ ದಾಸಿಮಯ್ಯನವರ 1048ನೇ ಜಯಂತೋತ್ಸವ ಕಾರ್ಯಕ್ರಮ ಬುಧವಾರ ನಡೆಯಿತು.
ತಹಶೀಲ್ದಾರ್ ಎಸ್. ಶಿವರಾಜ್ ಮಾತನಾಡಿ ದೇವರ ದಾಸಿಮಯ್ಯನವರು ಆದ್ಯ ವಚನಕಾರರಾಗಿದ್ದು ವಚನ ಸಾಹಿತ್ಯ ಆರಂಭಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ದೇವರ ದಾಸಿಮಯ್ಯನವರ ತತ್ವ ಆದರ್ಶಗಳನ್ನು ಸರ್ವರು ಅಳವಡಿಸಿಕೊಳ್ಳಬೇಕಿದೆ ಹಾಗೂ ಇಡೀ ಮಾನವ ಕುಲಕ್ಕೆ ಸನ್ಮಾರ್ಗವನ್ನು ತಮ್ಮ ವಚನಗಳ ಮೂಲಕ ತೋರಿಸಿದ ಆದ್ಯ ವಚನಕಾರ ದೇವರ ದಾಸಿಮಯ್ಯ ಸರ್ವ ಸಮುದಾಯಗಳಿಗೆ ಮಾದರಿಯಾಗಿದ್ದಾರೆ. ಬಸವಾದಿ ಶರಣರ ವಚನಗಳು ಸಕಾರಾತ್ಮಕ ಬದಲಾವಣೆಗೆ ರಾಜಮಾರ್ಗ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದರು.
ದೇವಾಂಗ ಸಮಾಜದ ಮಾಜಿ ಕಾರ್ಯದರ್ಶಿ ಭಂಗಿ ದೊಡ್ಡ ಮಂಜುನಾಥ್ ದೇವರ ದಾಸಿಮಯ್ಯ ಕುರಿತು ಉಪನ್ಯಾಸ ನೀಡಿ 10ನೇ ಶತಮಾನದಲ್ಲಿ ಸಮ ಸಮಾಜ ನಿರ್ಮಾಣಕ್ಕಾಗಿ ಜನರಲ್ಲಿ ಲಿಂಗ ಸಮಾನತೆ ವೃತ್ತಿ ಜಾತಿ ಸಮಾನತೆಯನ್ನು ಭಕ್ತಿ ಮತ್ತು ಕಾಯಕದ ಶ್ರೇಷ್ಠತೆಯನ್ನು ಜಾಗೃತಿಗೊಳಿಸಲು ಸಾಕಷ್ಟು ಶ್ರಮಿಸಿದವರು. ವಚನ ರಚನೆ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ್ದಾರೆ ವಚನ ಸಾಹಿತ್ಯ ಪರಂಪರೆಗೆ ಭದ್ರಬುನಾದಿ ಹಾಕಿ ಕೊಟ್ಟಿದ್ದಾರೆ ಎಂದರು. ಎರಡನೇ ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳಿಸಿದ ಸ್ಮೃತಿ ಧೂಪದ ಹಾಗೂ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳಿಸಿದ ಬಂಗಿ ದೊಡ್ಡ ಮಂಜುನಾಥ್ ರನ್ನು ದೇವಾಂಗ ಸಮಾಜ ಹಾಗೂ ನೇಕಾರ ಸಮುದಾಯ ಒಕ್ಕೂಟದಿಂದ ಗೌರವಿಸಲಾಯಿತು. ದೇವಾಂಗ ಮಠದ ಮಂಜುನಾಥ ಸ್ವಾಮಿ, ದೇವಾಂಗ ಸಮಾಜದ ಅಧ್ಯಕ್ಷ ಸಪ್ಪರದ ರಾಘವೇಂದ್ರ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಪಿ. ಬ್ರಹ್ಮಯ್ಯ, ಪ್ರಮುಖರಾದ ಮೆಟ್ಟಿ ಶಂಕರ, ಜಿ. ಸುಧಾಕರ್, ಗದ್ದಿ ವಿರೂಪಾಕ್ಷಿ, ಮಾಗನೂರು ರಾಜೇಶವರ್ಮಾ, ಧೂಪದ ಸುಭಾಷ್ ಚಂದ್ರ, ಧೂಪದ ಪ್ರಶಾಂತ, ಮಾ. ಶ್ರೀನಿವಾಸ, ವಣಕಿ ಶಂಕರ, ತುಳಸಿ ರಾಮಚಂದ್ರ, ಬಂಗಿ ಮಂಜುನಾಥ, ಮಹೇಶ್ ಎಸ್. ಸುಬ್ಬಣ್ಣ, ಪಿ. ಸಿ. ಅಂಜಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ದೇವಾಂಗ ಸಮಾಜದವರು ಭಾಗವಹಿಸಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
