ವಿಜಯನಗರ: ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ಅಂಚಿನಲ್ಲಿರುವ, ಸಾಮೂಹಿಕ ಪ್ರಾರ್ಥನಾ ಮಂದಿರದಲ್ಲಿ. ಶಾಸಕ ಡಾ॥ಎನ್.ಟಿ.ಶ್ರೀನಿವಾಸ್ ರವರು, ಸಮಾಜದ ಬಾಂಧವರ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಮೌಲಾನಾ ಅಖಿಲ್ ಮೌಲಾನಾರವರ ನೇತೃತ್ವದಲ್ಲಿ ರಂಜಾನ್ ಸಾಮೂಹಿಕ ಪ್ರಾರ್ಥನೆ ಜರುಗಿತು, ಮೌಲಾನಾರವರು ರಂಜಾನ್ ಹಬ್ಬದ ಮಹತ್ವವನ್ನು ವಿವರಿಸಿದರು. ಸರ್ವರೂ ಪಾಲಿಸಬೇಕಾಗಿರುವ ಮಾನವೀಯ ಮೌಲ್ಯಗಳ ಕುರಿತು, ಹಾಗೂ ಧರ್ಮಗ್ರಂಥ ಖುರಾನ್ ನಲ್ಲಿ ತಿಳಿಸಿರುವ ಮಹತ್ವ ಪೂರ್ಣ ಸಂದೇಶಗಳನ್ನು ಪ್ರಸ್ತಾಪಿಸಿದರು. ಅಲ್ಹಾನು ಸರ್ವಾಂತರ್ಯಾಮಿ ಆತನು ನಾವು ಮಾಡುವ ಪ್ರತಿಯೊಂದನ್ನು ಲೆಕ್ಕ ಹಾಕುತ್ತಾನೆ, ಸರ್ವರನ್ನೂ ಗೌರವದಿಂದ ಕಾಣಬೇಕು ಸೇವಾನೋಭಾವ ಹೊಂದಬೇಕು ದಾನ ಧರ್ಮ ಅನುಸರಿಸಬೇಕು. ಅಸಹಾಯಕರಿಗೆ ಶಕ್ತಿಯಾನುಸಾರ ನೆರವು ನೀಡಬೇಕು, ಇತರೆ ಧರ್ಮದವರೊಂದಿಗೆ ಸೌಹಾರ್ಧತೆ ಪಾಲಿಸಬೇಕು. ಧರ್ಮ ಶ್ರದ್ದೆ ಹೆತ್ತವರಲ್ಲಿ ಗುರು ಹಿರಿಯರಲ್ಲಿ ಗೌರವ ಪ್ರೀತಿ ಹೊಂದಬೇಕು, ಕುರಾನ್ ನಲ್ಲಿ ತಿಳಿಸಿರುವ ಎಲ್ಲವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಸಕಲ ಜೀವರಾಶಿಗಳಿಗೆ ಲೇಸನ್ನ ಆಶಿಸಿ ಜಗತ್ತಿನ ಶ್ರೇಯಸ್ಸಿಗಾಗಿ, ಸಕಾಲಕ್ಕೆ ಅಗತ್ಯವಿರುವಷ್ಟು ಮಳೆ ಬಂದು, ಸಾಕಷ್ಟು ಬೆಳೆ ಬರಲಿ. ಜಗತ್ತಿನಲ್ಲಿ ರೋಗ ಋಜನಗಳು ಸಂಪೂರ್ಣ ನಿರ್ನಾಮವಾಗಿ, ಸಕಲ ಜೀವರಾಶಿಗಳು ಸುಖ ನೆಮ್ಮದಿಯ ಜೀವನ ನಡೆಸುವಂತಾಗಲಿ. ಸಕಲರು ಸುಖ ಶಾಂತಿ ನೆಮ್ಮದಿ ಹೊಂದಲಿ, ಸಮಾಜದ ಶಾಂತಿಗಾಗಿ ಸರ್ವರ ಹಿತಕ್ಕಾಗಿ ಎಲ್ಲರೂ ಪ್ರಾರ್ಥಿಸೋಣ ಎಂದು ಕರೆ ನೀಡಿದರು. ಶೀಘ್ರದಲ್ಲಿಯೇ ಶಾದಿಮಹಲ್ ನಿರ್ಮಾಣ-ಶಾಸಕ ಡಾ॥ಎನ್.ಟಿ.ಶ್ರೀನಿವಾಸ್ ಭರವಸೆ- ಶಾಸಕರಾದ ಡಾ॥ಎನ್.ಟಿ.ಶ್ರೀನಿವಾಸ್ ರವರು ಸರ್ವರಿಗೆ ಹಬ್ಬದ ಶುಭಾಶಯ ತಿಳಿಸಿ ಮಾತನಾಡಿದರು, ತ್ಯಾಗ ಸೌಹಾರ್ಧತೆ ತ್ಯಾಗ ಸೇವಾ ಮನೋಭಾವ ಹೊಂದಿರುವ ಪ್ರಮುಖ ಧರ್ಮಗಳಲ್ಲಿ. ಇಸ್ಲಾಂ ಧರ್ಮವೂ ಒಂದಾಗಿದೆ, ಧರ್ಮದ ಪ್ರಮುಖ ಹಬ್ಬವಾಗಿರುವ ರಂಜಾನ್ ಹಬ್ಬದಲ್ಲಿ. ತಾಳ್ಮೆ ಸಹನೆ ಧರ್ಮ ಶ್ರದ್ಧೆಯನ್ನ ಮೈಗೂಡಿಸಿಕೊಂಡು, ಜಗತ್ತಿನ ಲೇಸಿಗಾಗಿ ಸಮಾಜದ ಶ್ರೇಯಸ್ಸಿಗಾಗಿ ರಂಜಾನ್ ನಲ್ಲಿ ಉಪವಾಸ ವ್ರತ ಆಚರಿಸುತ್ತಿದ್ದು. ಈ ಸಂದರ್ಭದಲ್ಲಿ ಎಲ್ಲರಿಗೂ ತಾವು ಸರ್ವರಿಗೂ, ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತಿರುವುದಾಗಿ ನುಡಿದರು. ಕೂಡ್ಲಿಗಿ ಪಟ್ಟಣದಲ್ಲಿ ಉಸ್ತುವಾರಿ ಸಚಿವಾರದ ಬಿ.ಜೆಡ್. ಜಮೀರ್ ಅಹಮದ್ ರವರ ನೇತೃತ್ವದಲ್ಲಿ, ಶಾದಿ ಮಹಾಲ್ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗಿದೆ. ಅತ್ಯಂತ ಶೀಘ್ರದಲ್ಲಿ ಶಾದಿ ಮಹಲ್ ನಿರ್ಮಾಣ ಕಾರ್ಯಕ್ಕೆ, ಸಚಿವರಾದ ಜಮೀರ್ ಅಹಮದ್ ರವರ ನೇತೃತ್ವದಲ್ಲಿ ಚಾಲನೆ ದೊರಕಲಿದೆ. ಮತ್ತು ಸಮಾಜದ ಪ್ರಮುಖ ಬೇಡಿಕೆಗಳನ್ನು , ಹಂತ ಹಂತವಾಗಿ ಅಧ್ಯತೆಯ ಮೇರೆಗೆ ಈಡೇರಿಸಲಾಗುವುದೆಂದು ತಿಳಿಸಿದರು. ಅಖಿಲ್ ಮೌಲಾನಾರವರ ನೇತೃತ್ವದಲ್ಲಿ ಸಮಾಜದ ವತಿಯಿಂದ, ಶಾಸಕ ಡಾ॥ಎನ್.ಟಿ.ಶ್ರೀನಿವಾಸ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.ನಂತರ ಜರುಗಿದ, ಸಾಮೂಹಿಕ ಪ್ರಾರ್ಥನೆಯಲ್ಲಿ ಪಟ್ಟಣದ ಅಸಂಖ್ಯಾತ ಧಾರ್ಮಿಕ ಶ್ರದ್ಧಾವಂತರು ಭಾಗಿಯಾಗಿದ್ದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ಸೇರಿದಂತೆ, ವಿವಿದ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಸಮಾಜದ ಬಾಲಕರಾದಿಯಾಗಿ ಯುವಕರು ವೃದ್ಧರು, ವಿಕಲ ಚೇತನರು ತುಂಬಾ ಉತ್ಸುಕತೆಯಿಂದ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ DYSP ಮಲ್ಲೇಶ ದೊಡ್ಮನೆ ನಿರ್ದೇಶನದಂತೆ, CPI ಪ್ರಹ್ಲಾದ್ ಆರ್.ಚನ್ನಗಿರಿ ರವರ ನೇತೃತ್ವದಲ್ಲಿ. PSI ಸಿ.ಪ್ರಕಾಶ ರವರು ಅಗತ್ಯ ಸಿಬ್ಬಂದಿ ನಿಯೋಜಿಸಿ, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸೂಕ್ತ ಕ್ರಮ ಜರುಗಿಸಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
