ಯಾದಗಿರಿ/ ಗುರುಮಠಕಲ್ : ಇಂದು ದೇವರ ದಾಸಿಮಯ್ಯ ಜಯಂತಿಯನ್ನು ಗುರುಮಠಕಲ್ ಪುರಸಭೆಯಲ್ಲಿ ಮುಖ್ಯಾಧಿಕಾರಿಗಳಾದ ಶ್ರೀಮತಿ ಭಾರತೀ ದಂಡೋತಿಯವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರೊಂದಿಗೆ ಪುರಸಭೆ ಕಾರ್ಯಾಲಯದಲ್ಲಿ ಅಚರಿಸಲಾಯಿತು, ಅನಂತರ ಮಾತನಾಡಿ , ದೇವರ/ಜೇಡರ ದಾಸಿಮಯ್ಯ 11 ನೇಯ ಶತಮಾನದ ಶೇಷ್ಠ ವಚನಗಾರರು ಮೂಲತ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಮುದನೂರು ಗ್ರಾಮದವರು, ಜಾತಿಗಿಂತ ವ್ಯಕ್ತಿತ್ವ ಶ್ರೇಷ್ಠ ಎಂದು ದೇವರ ದಾಸಿಮಯ್ಯನವರು ಹೇಳಿದ್ದಾರೆ, ತಮ್ಮ ಜೀವಿತ ಕಾಲದಲ್ಲಿ ಅನ್ನದಾಸೋಹದ ಮೂಲಕ ಸಮಾಜಕ್ಕೆ ಸಮಾನತೆಯನ್ನು ಸಾರಿದ ಮಹಾನ ಪುರುಷರು ಎಂದು ತಿಳಿಸಿದರು.
ಜಯಂತಿ ಆಚರಣೆಯಲ್ಲಿ ಪುರಸಭೆ ಕಾರ್ಯಾಲಯದ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ ಎಸ್, ಹಾಗೂ ಸಿಬ್ಬಂದಿಗಳಾದ ರಾಮುಲು,ಅಶೋಕ್,ವಿನೋದ, ಶ್ರೀಮತಿ ನೀಲಮ್ಮ,ಶ್ರೀಮತಿ ಮಾಳಮ್ಮ, ಶ್ರೀಮತಿ ಮಲ್ಲಮ್ಮ, ಬಾಬಾ, ರಾಕೇಶ್,ಅಂಜಪ್ಪ ಸೋಯಾಲ್, ಭೀಮಶಂಕರ, ನರೇಶ್, ಸುಜವುದ್ದೀನ ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್
