ಯಾದಗಿರಿ/ ಸುರಪುರ : ದಿ. 4.4. 2025 ರಂದು ಬೆಳಿಗ್ಗೆ 9:30ಕ್ಕೆ. ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಆರ್ ಸಿ ನಾಯಕ ಜನಸೇವಾ ಶೈಕ್ಷಣಿಕ ಟ್ರಸ್ಟ್ (ರಿ.) ವತಿಯಿಂದ ಉಚಿತ ಬೇಸಿಗೆ ಶಿಬಿರ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದ ಜಯಲಾಲ ಮೊಹಲ್ಲಾದಲ್ಲಿ ಇರುವ ಸ್ವಾಮಿ ಪರಂಕುಶ ಮಠದಲ್ಲಿ ದಿ. 4-4-2025ರಿಂದ 25- 5- 2025 ರವರೆಗೆ ಉಚಿತ ಬೇಸಿಗೆ ಶೈಕ್ಷಣಿಕ ತರಬೇತಿ ಆರಂಭಿಸಲಾಗುವುದು ಇಲ್ಲಿ ಕೂಲಿ ಕಾರ್ಮಿಕರ ಮಕ್ಕಳು ಹಾಗೂ ಬಡತನದ ರೇಖೆಗಿಂತಲೂ ಕಡಿಮೆ ಇರುವ ಮಕ್ಕಳಿಗೆ ಉಚಿತವಾಗಿ ಶೈಕ್ಷಣಿಕ ಶಿಬಿರವನ್ನು ಆಯೋಜಿಸಲಾಗಿದೆ, ಶಿಬಿರದಲ್ಲಿ ಪಾಠದ ಜೊತೆಗೆ ಯೋಗ, ಧ್ಯಾನ, ದೇಶ ಪ್ರೇಮ ಹೇಗೆ ಪಠ್ಯೇತರ ಚಟುವಟಿಕೆಗಳು ನಡೆಸಲಾಗುವುದು, ನಮ್ಮ ಟ್ರಸ್ಟ್ ವತಿಯಿಂದ ಇದೆ ಮೊದಲ ಬಾರಿಗೆ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಶಿಬಿರಕ್ಕೆ ಶಾಲೆಯಿಂದ ಹೊರ ಉಳಿದ ಮಕ್ಕಳು, ಬಡ ಕುಟುಂಬದ ಮಕ್ಕಳನ್ನು ಈ ಶಿಬಿರದ ಉಪಯೋಗ ಪಡೆದುಕೊಳ್ಳಬೇಕೆಂದು ಟ್ರಸ್ಟಿನ ಅಧ್ಯಕ್ಷರಾದ ಆರ್ ಸಿ ನಾಯಕ್ ಅವರು ತಿಳಿಸಿದರು.
ವರದಿ ಹನುಮಂತಪ್ಪ ನಾಯಕ
