
ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ದೇವಾಂಗ ಸಮಾಜ ವತಿಯಿಂದ ಶ್ರೀ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸಲಾಯಿತು. ಶಿವ ಜಗತ್ತಿನ ವ್ಯಾಪಿಸಿಕೊಂಡಂತೆ ಜಗತ್ತು ಶಿವನ ರೂಪ ಎಂಬ ನಿಲುವಿನೊಂದಿಗೆ ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ, ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬ ರಾಮನಾಥ, ಎಲ್ಲವೂ ನಿಮ್ಮ ದಾನವೆಂದು ದಾಸಿಮಯ್ಯನವರು ಹೇಳಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದುನೂರಿನಲ್ಲಿ ಚೈತ್ರ ಶುದ್ಧ ಪಂಚಮಿ ದಿನದಂದು ನೇಕಾರ ಕುಟುಂಬದಲ್ಲಿ ದಾಸಿಮಯ್ಯನವರು ಜನಿಸಿದರು. ತಂದೆ ರಾಮಯ್ಯ ತಾಯಿ ಶಂಕರಿ ಇವರ ವೃತ್ತಿ ನೇಕಾರಿಕೆ, ದಾಸಿಮಯ್ಯನವರು ಪ್ರಥಮ ವಚನಕಾರರೆಂದು ಹೇಳಲಾಗುತ್ತದೆ. 170ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಕೋಡ್ಲಿಯ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶ್ರೀ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ದೇವಾಂಗ ಸಮಾಜದ ಅಧ್ಯಕ್ಷರಾದ ಹಣಮಂತರಾವ ಆರ್. ಹಳ್ಳಿ ಮತ್ತು ಉಪಾಧ್ಯಕ್ಷರಾದ ರಾಮಣ್ಣ ಎಚ್ ಪಾಟೀಲ್ ಇವರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಬಟ್ಟೆ ದಾನ ಮಾಡುವುದರ ಮೂಲಕ ವಿಶೇಷವಾಗಿ, ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಲಾಯಿತು.
ನಂತರ ಕೋಡ್ಲಿಯ ಗ್ರಾಮ ಪಂಚಾಯತ್ ಕಾರ್ಯಲಯದಲ್ಲಿ ಗ್ರಾಮ ಅಭಿವೃದ್ಧಿ ಅಧಿಕಾರಿಗಳಾದ ದೇವೇಂದ್ರಪ್ಪ ಸರ್ ಮತ್ತು ಶ್ರೀಮತಿ ಗೀತಾ ಪ್ರೇಮ್ ಕುಮಾರ್ ಎಲ್ಮಡಗಿ ಅಧ್ಯಕ್ಷರು ಗ್ರಾಮ ಪಂಚಾಯತ್ ಕೋಡ್ಲಿ ಇವರ ಸಮ್ಮುಖದಲ್ಲಿ ಶ್ರೀ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಜಯಂತಿಯ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಕೋಡ್ಲಿಯ ಸರ್ವ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿರಿದ್ದರು.
ಈ ಜಯಂತಿಯ ಕಾರ್ಯಕ್ರಮದಲ್ಲಿ ಹಣಮಂತ ಆರ್. ಹಳ್ಳಿ ಅಧ್ಯಕ್ಷರು ದೇವಾಂಗ ಸಮಾಜ ಕೋಡ್ಲಿ, ರಾಮಣ್ಣ ಎಚ್ ಪಾಟೀಲ್ ಉಪಾಧ್ಯಕ್ಷರು ದೇ. ಸ. ಕೋಡ್ಲಿ, ರಾಚಪ್ಪ ಎನ್ ಪಾಟೀಲ, ಸಿದ್ರಾಮಪ್ಪ ಹಳ್ಳಿ ವಿಠಲ ಅಡಕಿ,ಮಲ್ಲಿಕಾರ್ಜುನ ಹಳ್ಳಿ ಸುನಿಲ್ ಕೋಟಿ, ರಮೇಶ್ ಕಣ್ಣಿ , ಗುರಪ್ಪ ಹಳ್ಳಿ ಬಂಡಪ್ಪ ಕಿಟ್ಟದ, ಶಂಕರ ಹಳ್ಳಿ, ರಮೇಶ್ ಮುಚ್ಚಟ್ಟಿ, ಆನಂದ ಆಡಕಿ ವಿಷ್ಣು ಪಾಟೀಲ್, ನಾಗರಾಜ್ ಆಡಕಿ, ಸಂಕೇತ್ ಗಂಜಿ, ಸಿದ್ದು ಹಳ್ಳಿ, ದಶರಥ್ ಮುಚ್ಚಟ್ಟಿ, ವೀರೇಶ್ ಕಣ್ಣಿ, ಜಯಶ್ರೀ ಹಳ್ಳಿ, ಆರತಿಹಳ್ಳಿ, ದೀಪ ಹಳ್ಳಿ, ಸಂಗೀತ ಹಳ್ಳಿ, ಸಾನ್ವಿ ಪಾಟೀಲ್, ಶರಣಮ್ಮ ಗೋಟೂರ್, ದೇವಾಂಗ ಸರ್ವ ಸದಸ್ಯರು ಶ್ರೀ, ದೇವರ ದಾಸೀಮಯ್ಯನವರ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಚಂದ್ರಶೇಖರ್ ಆರ್ ಪಾಟೀಲ್
