ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಡ್ದಹಳ್ಳಿಯಲ್ಲಿ ಶ್ರೀ ದೇವರ ದಾಸಿಮಯ್ಯನವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇಡೀ ಮಾನವ ಕುಲಕ್ಕೆ ಬೆಳಕಾಗಿ ವಸ್ತ್ರ ನೀಡಿರುವಂತಹ, ಶ್ರೀ ದೇವರ ದಾಸಿಮಯ್ಯನವರು 11ನೇ ಶತಮಾನದ ಶರಣರು ಆಗಿದ್ದಾರೆ ಪ್ರಥಮ ವಚನಕಾರರಾಗಿ ಇವರು ಬರೆದಂತ ವಚನಗಳು ಇಡೀ ಸಮಾಜದ ಅಭಿವೃದ್ಧಿಗೆ ದಾರಿ ದೀಪವಾಗಿದೆ. 175 ಕ್ಕಿಂತ ಹೆಚ್ಚು ವಚನಗಳು ಬರೆದಿದ್ದಾರೆ. ಇವರ ಜೀವನ, ಬೆಳೆದ ಬಂದ ದಾರಿ, ಇವರ ಚಿಂತನೆ ಅದ್ಭುತವಾಗಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ದೇಶಿಸಿ ಶ್ರೀಮಂತ ಗಂಜಿ ಮುಖ್ಯ ಗುರುಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಡ್ದಹಳ್ಳಿರವರು ಮಾತನಾಡಿದರು.
ಶ್ರೀ ದೇವರ ದಾಸಿಮಯ್ಯ ಜಯಂತಿ ಆಚರಣೆ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ರಮೇಶ್ ದೇವನ್ಕರ್ ಹಾಗೂ ಊರಿನ ಹಿರಿಯ ವ್ಯಕ್ತಿ ನಾಗಣ್ಣ ಶಿವುದೇ, ಶಾಲೆಯ ಶ್ರೀಮಂತ ಗಂಜಿ ಮುಖ್ಯ ಶಿಕ್ಷಕರು ಹಾಗೂ ಶಂಕರ ಕಣ್ಣಿ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಯವರು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ವರದಿ: ಚಂದ್ರಶೇಖರ್ ಆರ್ ಪಾಟೀಲ್
