ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“ವಿಶೇಷ ಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಣಾ ಅಭಿಯಾನ”

ಬೆಳಗಾವಿ :ಗ್ರಾಮೀಣ ಬಡ ಕುಟುಂಬಗಳ ಮಹತ್ವಾಕಾಂಕ್ಷಿ ಯೋಜನೆಯಾದ ಮನರೇಗಾ ಯೋಜನೆಯು ದುಡಿಯುವ ಕೈಗಳಿಗೆ ಕೆಲಸವನ್ನು ಕಳೆದ 25 ವರ್ಷಗಳಿಂದ ನೀಡುತ್ತಾ ಬಂದಿದೆ. ಪ್ರತಿ ಅರ್ಹ ಕುಟುಂಬಕ್ಕೆ ಒಂದು ಜಾಬ್ ಕಾರ್ಡ್ ದಿಂದ 100 ದಿವಸ ಮಾನವ ದಿನಗಳನ್ನು ಪೂರೈಸುತ್ತಿದೆ ಇದೇ ಎಪ್ರೀಲ್‌ 01 ರಿಂದ ಕೇಂದ್ರ ಸರ್ಕಾರವು ಪ್ರತಿ ಮಾನವ ದಿನಕ್ಕೆ ರೂ 370/- ಎಂದು ನಿಗದಿಪಡಿಸಿದೆ ಆದ್ದರಿಂದ ಪ್ರತಿ 100 ದಿನಕ್ಕೆ 37000/- ರೂಗಳನ್ನು ಪಡೆಯುವುದರ ಮೂಲಕ ಆರ್ಥಿಕವಾಗಿ ಸದೃಡತೆಯನ್ನು ಪ್ರತಿ ಕುಟುಂಬದಲ್ಲಿ ಕಾಣಬಹುದು ಎಂದು ವಿಶೇಷ ಚೇತನರಿಗೆ ವಿಶೇಷ ಜಾಬ್ ಕಾರ್ಡ ವಿತರಣಾ ಅಭಿಯಾನ ಕಾರ್ಯಕ್ರಮ ಗ್ರಾ.ಪಂ. ಅನಿಗೋಳದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಕಿರಣ ಘೋರ್ಪಡೆ ಕರೆ ನೀಡಿದರು.
ನರೇಗಾ ಯೋಜನೆಯಲ್ಲಿ ವಿಶೇಷ ಚೇತರನರು ಅಂದರೆ (ಅಂಗವೈಕಲ್ಯತೆ)ಯುಳ್ಳವರನ್ನು UDID ಕಾರ್ಡನ್ನು ಪರಿಗಣಿಸಿಕೊಂಡು ಅವರಿಗೆ ಪ್ರತೇಕವಾದ ಜಾಬ್ ಕಾರ್ಡ ನೀಡುವ ಮೂಲಕ ಅವರನ್ನು ಸ್ವಾವಲಂಬಿ ಜೀವನ ನಡೆಸುವಂತೆ ಈ ಯೋಜನೆ ಮಾಡುತ್ತಿದೆ ಈಗಾಗಲೇ ಜಾಬ್ ಕಾರ್ಡಗಳನ್ನು ಕೆಲವು ವಿಶೇಷ ಚೇತನರು ಪಡೆದುಕೊಂಡು ಕಳೆದ ಸಾಲಿನಲ್ಲಿ ಸನ್‌ 2024-25 ರಲ್ಲಿ ತಾಲೂಕಿನಲ್ಲಿ ಒಟ್ಟು 1042 ವಿಶೇಷ ಚೇತನರು ದಾಖಲಾಗಿ 307 ಜನರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸವನ್ನು ಮಾಡುವ ಮೂಲಕ ಒಟ್ಟು 10300 ಮಾನವ ದಿನಗಳನ್ನು ವಿಶೇಷ ಚೇತನರು ಸೃಜನೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ಕಿರಣ ಘೋರ್ಪಡೆ ತಿಳಿಸಿದರು.
ಮುಂದುವರೆದು ತಾಪಂ ಸಹಾಯಕ ನಿರ್ದೇಶಕ (ಗ್ರಾ.ಉ) ವಿಜಯ ಪಾಟೀಲ ಮಾತನಾಡಿ ತಾಲೂಕಿನಲ್ಲಿ ಒಟ್ಟು 3872 ವಿಶೇಷ ಚೇತನರಿದ್ದು ಅದರಲ್ಲಿ 18 ವರ್ಷಕ್ಕಿಂತ ಕಡಿಮೆ ಇರುವವರ ಸಂಖ್ಯೆ 503 ಇದ್ದು ಮತ್ತು ಕೆಲಸ ಮಾಡಲು ಸಾಧ್ಯವಾಗದಿರುವವರು 1414 ಇದ್ದು ಬಾಕಿ 898 ಚೇತನರಿಗೆ ಹಾಗೂ ಕುಟುಂಬದೊಂದಿಗೆ ಜಂಟಿಯಾಗಿರುವವರನ್ನು ಬೇರ್ಪಡಿಸಿ ಅವರಿಗೆಲ್ಲರಿಗೂ ವಿಶೇಷ ಜಾಬ್ ಕಾರ್ಡ್ ನೀಡುವ ಅಭಿಯಾನವನ್ನು ತಾಲೂಕಿನಾದ್ಯಂತ ಹಮ್ಮಿಕೊಂಡು ಚಾಲನೆ ನೀಡಿರುತ್ತೇವೆ ಅದರಂತೆ ಇದೇ ಎಪ್ರೀಲ್‌ 15 ರೊಳಗಾಗಿ ಎಲ್ಲಾ ವಿಶೇಷ ಚೇತನರಿಗೆ ನರೇಗಾ ಯೋಜನೆಯಲ್ಲಿ ಜಾಬ್ ಕಾರ್ಡ ನೀಡುವ ಮೂಲಕ ಚೇತನರಿಗೆ ಭದ್ರತೆಯನ್ನು ಒದಗಿಸುವಂತಾಗುತ್ತದೆ ಎಂದು ತಿಳಿಸಿದರು.
ಚೇತನರ ಅಭಿಯಾನ ಕಾರ್ಯಕ್ರಮವನ್ನು ಇದೇ ಎಪ್ರೀಲ್‌ 15 -2026 ರವರೆಗೆ ಇದ್ದು ಎಲ್ಲಾ ಅರ್ಹ ವಿಶೇಷ ಚೇತನರಿಗೆ ನರೇಗಾ ಯೋಜನೆಯಲ್ಲಿ ವಿಶೇಷ ಜಾಬ್ ಕಾರ್ಡ ನೀಡಿ ಅವರಿಗೆ ಉದ್ಯೋಗವನ್ನು ಕಲ್ಪಿಸಿಕೊಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ವಿಜಯ ಪಾಟೀಲ ತಿಳಿಸಿದರು ತದ ನಂತರ ಗ್ರಾಪಂ ಅಮಟೂರ ಮತ್ತು ದೇವಲಾಪೂರದಲ್ಲಿಯೂ ಸಹ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕಾವೇರಿ ಬಡಿಗೇರ, ಶಶಿಕಲಾ ಅನಿಗೋಳ ಮತ್ತು ದೊಡ್ಡನಾಯ್ಕ ರಾಯನಾಯ್ಕರ ತಾ.ಪಂ. ಐಇಸಿ ಸಂಯೋಜಕ ಎಸ್‌ ವ್ಹಿ ಹಿರೇಮಠ ಗ್ರಾಪಂ ಸಿಬ್ಬಂದಿಗಳು ಅಡಿವೆಪ್ಪ ಕಾಡಣ್ಣವರ, ಮಕ್ತುಮಸಾಬ ಮಲಕನ್ನವರ ಚಂದ್ರಪ್ಪ ಕಾಗಿಹಳ್ಳಿ ಹಾಗೂ ಗ್ರಾಪಂ ವ್ಯಾಪ್ತಿಯ ವಿಶೇಷ ಚೇತನರು (ಅಂಗವಿಕಲರು) ಹಾಜರಿದ್ದರು.

ವರದಿ : ಭೀಮಸೇನ ಕಮ್ಮಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ