ವಿಜಯಪುರ :ಆಲಮೇಲ ಪಟ್ಟಣದ ಪ್ರತಿಭಾವಂತ ತನ್ನ ವೃತ್ತಿಯ ಮೂಲಕ ಉನ್ನತ ಮಟ್ಟದ ಹೆಸರು ಮಾಡಿರುವ ಶ್ರೀ ಶರಣಬಸು ಕೊಳಾರಿ ಅವರಿಗೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಸಹಾಯಕ ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಿಸಿದ್ದಕ್ಕೆ ಮುಖ್ಯಮಂತ್ರಿಗಳಿಂದ ಇಂದು ಕೊಡಮಾಡುವ ಉತ್ತಮ ಪೊಲೀಸ್ ಅಧಿಕಾರಿಯ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಪ್ರತಿಷ್ಠಿತ ಕೊಳಾರಿ ಮನೆತನದ ಶ್ರೀ ಮಹದೇವಪ್ಪ ಕೊಳಾರಿ ಅವರ ಮಗನಾದ ಶರಣಬಸು ಕೊಳಾರಿ ತಮ್ಮ ಕಷ್ಟದ ಜೀವನದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಇಂದು ರಾಜ್ಯದಲ್ಲಿ ಆಲಮೇಲ ತಾಲೂಕಿನ ಹೆಸರು ಬರುವಂತೆ ಮಾಡಿದ್ದಾರೆ. ಸದ್ಯ ಕಲಬುರ್ಗಿಯ ಕೆ ಎಸ್ ಆರ್ ಪಿ. ಯಲ್ಲಿ ಸೇವೆ ಸಲ್ಲಿಸುತ್ತಿರುವ ಶರಣಬಸು ಅವರಿಗೆ ಶುಭವಾಗಲಿ ಹೀಗೆ ಮುಂದಿನ ದಿನಗಳಲ್ಲಿ ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಮುಡಿಗೇರಲಿ ಎಂದು ಕೊಳಾರಿ ಕುಟುಂಬಸ್ಥರಾಧ ಶ್ರೀ ಅಶೋಕ್ ಕೋಳಾರಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಅಲ್ಮೆಲ್, ಶ್ರೀದಯಾನಂದ ಕೋಳಾರಿ, ಸ್ನೇಹಿತರಾದ ಶ್ರೀ ರಮೇಶ್ ಬಂಟನೂರ್, ಶ್ರೀ ಪ್ರಭು ವಾಲಿಕರ್, ಶ್ರೀ ಸುರೇಶ್ ಹಳ್ಳೂರ್, ಶ್ರೀ ರಾಕೇಶ ಬಿರಾದಾರ, ಪಿಎಸ್ಐ, ಶ್ರೀ ಸುರೇಂದ್ರಕುಮಾರ ಮದಗುಣಕಿ, ಶ್ರೀ ಸಿದ್ರಾಮ ಯಾದವಾಡ, ಕಡಣಿಗ್ರಾಮದ ಶ್ರೀ ಸಂತೋಷ್ ಕತ್ತಿ, ಶ್ರೀ ಬಸವರಾಜ್ ಪಡಶೆಟ್ಟಿ, ಶ್ರೀ ಬಸವರಾಜ್ ವಾಲಿಕಾರ ಶುಭ ಹಾರೈಸಿ ಹರುಷ ವ್ಯಕ್ತಪಡಿಸಿದರು.
ವರದಿ : ಹಣಮಂತ ಚ. ಕಟಬರ್
