ಬೆಂಗಳೂರು: ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶರು ಮಾನ್ಯ ಸಂತೋಷ ಹೆಗೆಡೆ ಯವರನ್ನು ಬೆಂಗಳೂರಿನ ಅವರ ನಿವಾಸಕ್ಕೆ ತೆರಳಿ ದಿ.:-24/05/2025 ರಂದು ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕಾನಿಪ ಧ್ವನಿ ಸಂಘಟನೆಯಿಂದ ನಡೆಯುವ 3 ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕೆಂಬ ಮನವಿ ಪತ್ರವನ್ನು ನೀಡಿದಂತ ಸಂದರ್ಭದಲ್ಲಿ ಮನಪೂರ್ವಕವಾಗಿ ಒಪ್ಪಿ ಅಂದಿನ ಕಾರ್ಯಕ್ರಮದಲ್ಲಿ ಸಂಜೆ ನಾಲ್ಕು ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಅಂದರೆ ಕಾರ್ಯಕ್ರಮದ ಮುಕ್ತಾಯ ಹಂತದವರೆಗೂ ಸಮಸ್ತ ರಾಜ್ಯದ ಪತ್ರಕರ್ತರೊಂದಿಗೆ ಸಂತೋಷದಿಂದ ಕಳೆಯುವೆ ಎಂದು ಮಾತು ನೀಡಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಶ್ರೀ ಬಂಗ್ಲೆ ಮಲ್ಲಿಕಾರ್ಜುನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ
