ಕೊಪ್ಪಳ/ ಗಂಗಾವತಿ : ನಗರಸಭೆಯ 15 ತಿಂಗಳ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಅಧಿಕಾರ ಇಬ್ಬರಿಗೆ ಹಂಚಿಕೆ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ ಮೌಲಾಸಾಬ್ ಮತ್ತು ಉಪಾಧ್ಯಕ್ಷೆ ಪಾರ್ವತಮ್ಮ ದೊಡ್ಡನಿ ಏ. 3 ರಂದು ರಾಜಿನಾಮೆ ಸಲ್ಲಿಸಿದ್ದಾರೆ.
ನಗರಸಭೆಯ ಕೊನೆಯ ಅಧಿಕಾರಾವಧಿ 15 ತಿಂಗಳು ಇರುವುದರಿಂದ ಮೊದಲ ಏಳೂವರೆ ತಿಂಗಳ ಅವಧಿಯ ಅಧಿಕಾರವನ್ನು ಮೌಲಾಸಾಬ್ ಅಧ್ಯಕ್ಷರಾಗಿ, ಪಾರ್ವತಮ್ಮ ದೊಡ್ಡನಿ ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿದ್ದರು. ಈಗ ಅವಧಿ ಮುಗಿದಿದ್ದರಿಂದ ಅನಿವಾರ್ಯವಾಗಿ ರಾಜಿನಾಮೆ ನೀಡುವ ಪ್ರಸಂಗ ಎದುರಾಗಿದೆ.
ಈ ಹಿಂದೆ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಾ ಬಂದಿತ್ತು. ನಂತರ ಶಾಸಕ ಗಾಲಿ ಜನಾರ್ದನ ರೆಡ್ಡಿ ತಮ್ಮ ಪ್ರಭಾವ ಬೀರಿ ನಗರಸಭೆಯ ಹಲವು ಕಾಂಗ್ರೆಸ್ ಸದಸ್ಯರನ್ನು ಆಪರೇಷನ್ ಮೂಲಕ ತಮ್ಮ ತೆಕ್ಕೆಗೆ ತೆಗೆದುಕೊಂಡು ನಗರಸಭೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದ ರೆಡ್ಡಿ, ಬಿಜೆಪಿ ಅಡಿಯಲ್ಲಿ ಆಡಳಿತಕ್ಕೆ ತೆಗೆದುಕೊಂಡಿದ್ದರು.
ಮೀಸಲಾತಿಯಿಂದಾಗಿ ಅಧ್ಯಕ್ಷ ಸ್ಥಾನ ಒಬಿಸಿ-ಬಿಗೆ ಪಾಲಾಗಿತ್ತು, ಈಗ 14 ತಿಂಗಳ ಅವಧಿಯ 7 ತಿಂಗಳ ಅವಧಿಯ ಅಧಿಕಾರ ಮುಕ್ತಾಯಗೊಂಡಿದ್ದು ಮತ್ತೆ ಇನ್ನೋರ್ವ ಬಿಜೆಪಿ ಸದಸ್ಯರಿಗೆ ಅಧಿಕಾರ ಕೊಡಲು ಮುಂದಾಗಿದ್ದಾರೆ.
ಪರಶುರಾಮ ಮಡ್ಡೇರ್ ಅಧ್ಯಕ್ಷ ಖಚಿತ.!
ಆಪರೇಷನ್ ಮೂಲಕ ಕಾಂಗ್ರೆಸ್ ಸದಸ್ಯರನ್ನು ಸೆಳೆದು ಬಿಜೆಪಿ ಬಾವುಟ ಹಾರಿಸಿ ಅಲ್ಪಸಂಖ್ಯಾತರಿಗೆ ಅಧ್ಯಕ್ಷ ಸ್ಥಾನ ಕೊಟ್ಟು ವಲಸೆ ಬಂದವರಿಗೆ ಸಮಾಧಾನ ಪಡಿಸಿದ್ದರು. ಈಗ ಅವಧಿ ಮುಗಿದ ಹಿನ್ನೆಲೆ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದ್ದು ಅದಕ್ಕೆ ಮಡ್ಡೇರ್ ಸೂಕ್ತ ಎಂದು ಮಾಜಿ ಶಾಸಕ ಮನವಳ್ಳಿ ಮತ್ತು ಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷ ಸಿಂಗನಾಳ ಮಾಜಿ ಸಂಸದ ಶಿವರಾಮೇಗೌಡ, ಗಿರೇಗೌಡ, ತಿಪ್ಪೇರುದ್ರಸ್ವಾಮಿ, ನಗರ ಮತ್ತು ಗ್ರಾಮೀಣ ಭಾಗದ ಅಧ್ಯಕ್ಷರು ಸೇರಿದಂತೆ ಅನೇಕರ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಮಡ್ಡೇರ್ ಅಧ್ಯಕ್ಷ ಬಹುತೇಕ ಖಚಿತ ಎನ್ನಲಾಗುತ್ತಿದೆ.
ಉಪಾಧ್ಯಕ್ಷ ಸ್ಥಾನ ಮುಂದೊರೆಯುವ ಸಾಧ್ಯತೆ ಹೆಚ್ಚಿದೆ, ನಗರಸಭೆಯ 13 ನೇ ವಾರ್ಡ್ನ ಸದಸ್ಯೆ ಪಾರ್ವತೆಮ್ಮ ದುರುಗೇಶಪ್ಪ ದೊಡ್ಡಮನಿ ತಮ್ಮ ಅವಧಿಯ ಉಪಾಧ್ಯಕ್ಷ ಸ್ಥಾನ ಸೂಕ್ತವಾಗಿ ನಿಭಾಹಿಸಿದ್ದು ಎಲ್ಲಾ ಸದಸ್ಯರೊಂದಿಗೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದು ಉಪಾಧ್ಯಕ್ಷರಾಗಿ ಮುಂದೊರೆಯಲಿ ಎನ್ನುವುದು ಕೆಲ ಸದಸ್ಯರ ಮಾತಾಗಿದೆ, ಒಟ್ಟಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಡ್ಡೇರ್ ಖಚಿತವಾಗಿದ್ದು ಮುಂದೇನಾಗುತ್ತೆ ಕಾದು ನೋಡ ಬೇಕಿದೆ.!?
ವರದಿ : ಜಿಲಾನ್ ಸಾಬ್ ಬಡಿಗೇರ.
