ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾಲೇಜಿನಲ್ಲಿ ಜಾನಪದ ಉತ್ಸವದ ಸಂಭ್ರಮ

ಜಾನಪದದಲ್ಲಿದೆ ಸಂಸ್ಕೃತಿ-ಸಂಸ್ಕಾರದ ಸಾರ: ಜಾನಪದ ಬಾಲಾಜಿ

  • ಜಾನಪದ ಹಾಡು-ನೃತ್ಯ-ಆಟಗಳ ಸಡಗರ
  • ಎಲ್ಲೆಡೆ ಜಾನಪದ ಬ್ರಿಗೇಡ್ ಕಟ್ಟುವ ಆಕಾಂಕ್ಷಿಗಿರಲಿ ಸಹಕಾರ

ಕೊಪ್ಪಳ: ಇವತ್ತಿಗೂ ಹಲವು ಬುಡಕಟ್ಟು ಜನಾಂಗ, ಗ್ರಾಮೀಣ ಪ್ರದೇಶದಲ್ಲಿ ಜಾನಪದ ಹಿನ್ನೆಲೆಯ ಸಂಪ್ರದಾಯ ಆಚರಣೆಗಳು ಬಳಕೆಯಲ್ಲಿವೆ. ಜಾನಪದದಲ್ಲಿ ಸಂಸ್ಕೃತಿ-ಸಂಸ್ಕಾರದ ಸಾರವಿದೆ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಸಣ್ಣದಲ್ಲ. ತುಂಬಾ ದೊಡ್ಡದು. ನಮ್ಮ ಇಡೀ ಬದುಕೇ ಜಾನಪದ. ಗರ್ಭದಲ್ಲಿ ಇರುವ ಮಗುವಿನ‌ ಹಂತದಲ್ಲೇ ಕುಬುಸದ ಕಾರಣ ಹೆಸರಿನಲ್ಲೇ ಜಾನಪದ ಆರಂಭಗೊಳ್ಳುತ್ತದೆ. ಬದುಕಿನುದ್ದಕ್ಕೂ ಅದು ಜೀವಂತವಾಗಿರುತ್ತದೆ. ಬರುವ ದಿನಗಳಲ್ಲಿ ಬೆಂಗಳೂರಿನಂತೆ ಎಲ್ಲೆಡೆ ಜಾನಪದ ಬ್ರಿಗೇಡ್ ಕಟ್ಟುವ ಆಕಾಂಕ್ಷೆ ಇದೆ. ಎಲ್ಲರ ಸಹಕಾರ ಮುಖ್ಯ ಎಂದು ಅವರು ಕೋರಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಎಚ್.ನಾಯ್ಕ ಮಾತನಾಡಿ, ಇಂದಿನ ಮೊಬೈಲ್ ಯುಗದಲ್ಲಿ ಜಾನಪದ ಹಿನ್ನಲೆಯ ಆಟೋಪಚಾರಗಳು ಕ್ಷೀಣಿಸುತ್ತಿವೆ. ಜಾನಪದ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಮುನ್ನಡೆಯುವ ಹೊಣೆ ಇಙದಿನ ಯುವಜನತೆ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರು, ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಡಾ.ಭಾಗ್ಯಜ್ಯೋತಿ ಜಾನಪದ ಉತ್ಸವ ಕಾರ್ಯಕ್ರಮ ಆಚರಣೆಯ ಉದ್ದೇಶ, ಪ್ರಯೋಜನಗಳನ್ನು ವಿವರಿಸಿದರು.

ವೇದಿಕೆಯಲ್ಲಿ ಬೋಧಕರಾದ ವೈ.ಬಿ.ಅಂಗಡಿ, ಡಾ.ಟಿ.ವಿ.ವಾರುಣಿ, ಶಿವಣ್ಣ ಎಂ. ಇದ್ದರು. ಡಾ.ಮಹಾಂತೇಶ ನೆಲಾಗಣಿ ನಿರೂಪಿಸಿದರು. ಡಾ.ತುಕಾರಾಮ ನಾಯ್ಕ ವಂದಿಸಿದರು. ಡಾ.ವೀರಣ್ಣ ಸಜ್ಜನರ್ ಜಾನಪದ ಆಟೋಟಗಳ ವಿಜೇತರಿಗೆ ಬಹುಮಾನ ವಿತರಣೆಯ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರಂಭದಲ್ಲಿ ಡಾ.ಜಾನಪದ ಬಾಲಾಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಜಾನಪದ ಗೀತ ಗಾಯನ, ನೃತ್ಯ ಮತ್ತಿತರ ಮನರಂಜನಾ ಕಾರ್ಯಕ್ರಮಗಳು ನಡೆದವು.

ಮೊಳಗಿದ ಆರ್‌ಸಿಬಿ ಘೋಷಣೆ:

ಜಾನಪದ ಉತ್ಸವ ಕಾರ್ಯಕ್ರಮದ ನಿಮಿತ್ತ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಸಂಭ್ರಮಿಸಿದರು. ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ವೇಳೆ ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ… ಎನ್ನುವ ಸಂತೋಷದ ಘೋಷಣೆ ಜೋರಾಗಿ ಮೊಳಗಿತು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ