ಬಳ್ಳಾರಿ / ಕಂಪ್ಲಿ : ತಾಲೂಕು ಸಮೀಪದ ಗಾದಿಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಎನ್. ಪಾರ್ವತಿ ಶಂಕ್ರಪ್ಪ ನಾಯಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಇಂದಿನ ಅಧ್ಯಕ್ಷ ಚೌಡಕಿ ಚಂದ್ರಪ್ಪ ಅವರ ರಾಜೀನಾಮೆಯಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಸಾಮಾನ್ಯ ಮಹಿಳೆ ಮೀಸಲಾತಿಯ ಚುನಾವಣೆಗೆ ಎನ್. ಪಾರ್ವತಿ ಶಂಕ್ರಪ್ಪ ನಾಯಕ್ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ತಹಶಿಲ್ದಾರ್ ಶ್ರುತಿ ಎಂ.ಎಂ. ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅಭಿರೋಧ ಆಯ್ಕೆ ಪ್ರಕಟಿಸಿ ಎನ್. ಪಾರ್ವತಿ ಶಂಕ್ರಪ್ಪ ಅವರಿಗೆ ಅಧಿಕಾರ ವಹಿಸಿಕೊಟ್ಟರು.
ಪ್ರಕ್ರಿಯೆ ವೇಳೆ ಪಿಡಿಓ ಟಿ. ಮಲ್ಲಿಕಾರ್ಜುನ ಉಪಾಧ್ಯಕ್ಷ ಜಾನಕಮ್ಮ ಹರಿಜನ, ಸದಸ್ಯರಾದ ದೊಡ್ಡನಗೌಡ ಕುಡುತಿನಿ, ಕನಕಪ್ಪ, ಕೆ. ಗಾದಲಿಂಗಪ್ಪ, ಹರಿಜನ ಗಂಗಾಧರ, ಎಸ್. ಸಣ್ಣ ಧರ್ಮಪ್ಪ, ಬಸಪ್ಪ ಕಂತಿ, ಕೋರಿ ಮಲ್ಲಮ್ಮ, ಮಲ್ಲಮ್ಮ ಹರಿಜನ, ಎನ್. ಗೀತಾ, ಕೊರವರ ಯಂಕಮ್ಮ, ಎಂ. ವನಜಾಕ್ಷಿ, ಈರಮ್ಮ ನಾಯಕ್, ಕುರುಬರ ಕಮಲಾಕ್ಷಿ, ಉಮಾದೇವಿ ಕುರುಬರ, ನಾಯಕರ ಶಿವಲಕ್ಷ್ಮಿ , ಜಿ. ಶ್ರೀದೇವಿ, ಇದ್ದರು. ನೂತನ ಅಧ್ಯಕ್ಷ ಎನ್. ಪಾರ್ವತಿ ಶಂಕ್ರಪ್ಪ ಮಾತನಾಡಿ ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಗ್ರಾಮ ಪಂಚಾಯಿತಿ ಮಟ್ಟದ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಪಿಡಿಒ ಟಿ. ಮಲ್ಲಿಕಾರ್ಜುನ ಮಾತನಾಡಿ ಸದಸ್ಯರು ಮತ್ತು ಅಧ್ಯಕ್ಷರು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಿದರೆ ಸಾಕಷ್ಟು ಅಭಿವೃದ್ಧಿ ಸಾಧಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸಬಹುದು ಅಭಿವೃದ್ಧಿ ವಿಚಾರಗಳಿಗೆ ರಾಜಕೀಯವನ್ನು ಬೆರೆಸಬಾರದು ಎಂದು ಸಲಹೆ ನೀಡಿದರು ನಂತರ ನೂತನ ಅಧ್ಯಕ್ಷರಿಗೆ ಗ್ರಾಮ ಪಂಚಾಯಿತಿ ಅಧಿಕಾರಿ ಮುಖಂಡರು ಮಾಲರ್ಪಣೆ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೆ. ಎಸ್. ಬಸವರಾಜ್ ಎನ್. ಶಂಕ್ರಪ್ಪ ಕೆ. ಶಿವರಾಮಪ್ಪ, ಎಚ್. ಮಲ್ಲಿಕಾರ್ಜುನ, ಕೆ.ಬಿ. ಗಾದಿಲಿಂಗಪ್ಪ, ಎಂ. ಗೋವಿಂದಪ್ಪ , ಎಂ. ಗಾಳಪ್ಪ, ಎಚ್. ಶರಣ ಕುಮಾರ, ವಕೀಲ ಭೈರಪ್ಪ, ಬಿ. ಹೊನ್ನೂರಪ್ಪ ಗೋನಳ್ಳಿ, ಕೆ. ಶಿವಪ್ರಕಾಶ್, ಹೆಚ್. ಅಯ್ಯನ ಗೌಡ, ಎಂ. ದೇವೇಂದ್ರಪ್ಪ, ಕೆ. ಶಿವಪ್ರಕಾಶ್, ನಾಗನಗೌಡ್ರು, ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
