ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆದರ್ಶ ಶಿಕ್ಷಕ ಸಮಾಜ ಸೇವಕ ಬಾಬುರಾವ ದಾನಿ

ಒಬ್ಬ ಆದರ್ಶ ಶಿಕ್ಷಕನಾದವನು ಶಿಕ್ಷಣ ಎನ್ನುವ ಪ್ರಪಂಚದಲ್ಲಿ ಜ್ಞಾನ ನೀಡುವ ಬೆಳಕಿನ ದೀಪವಾಗಿ ವಿದ್ಯಾರ್ಥಿ ಗಳಿಗೆ ಸದಾಕಾಲ ಮಾರ್ಗದರ್ಶಿಯಾಗಿರುತ್ತಾನೆ. ದೇಶದ ಭವಿಷ್ಯದ ಪೀಳಿಗೆಯನ್ನು ತಮ್ಮ ಜ್ಞಾನದ ಮೂಲಕ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕನಿಗಿದೆ. ಅಂತಃ ಆದರ್ಶ ಶಿಕ್ಷಕರ ಸಾಲಿಗೆ ಸೇರಿದವರು ಶ್ರೀ ಬಾಬುರಾವ ದಾನಿಯವರು.

ಬಾಬುರಾವ ದಾನಿಯವರು ಧನ್ನೂರ ಗ್ರಾಮದವರು, ತಂದೆ ಚೆನ್ನಬಸಪ್ಪ ತಾಯಿ ಸಾವಿತ್ರಿಬಾಯಿ ದಂಪತಿಗಳ ಮಗನಾದ ಇವರು ೩೧. ೧೦. ೧೯೬೦ ರಂದು ಜನಿಸಿದರು.
ಪ್ರಾಥಮಿಕ ಶಿಕ್ಷಣವನ್ನು ಸ್ವಂತ ಊರು ಧನ್ನೂರ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಿಕ್ಷಣವನ್ನು ಪಕ್ಕದ ಊರಾದ ಹಲಬರ್ಗಾ ಮತ್ತು ಬೀದರನ ಕರ್ನಾಟಕ ಹೈಸ್ಕೂಲ್ ನಲ್ಲಿ ಮುಗಿಸಿದರು.
ಮುಂದೆ ಬಿ. ಎಸ್. ಸಿ. ಬಿ. ಎಡ್ ಪದವಿಯನ್ನು ಮುಗಿಸಿ, ೨೨. ೭. ೧೯೮೪ ರಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀ ಶರಣಬಸವೇಶ್ವರ ಪ್ರೌಢ ಶಾಲೆಯಲ್ಲಿ ಮುಖ್ಯ ಗುರುಗಳಾಗಿ, ವಿಜ್ಞಾನ ಶಿಕ್ಷಕರಾಗಿ ಸೇವೆಗೆ ಸೇರಿಕೊಂಡರು.
ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಅಪಾರ ಜ್ಞಾನವನ್ನು ಹೊಂದಿರುವ ಇವರು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರುವಂತೆ ನಿರಂತರ ವಿಜ್ಞಾನ ಪ್ರಯೋಗದಲ್ಲಿ ತೊಡಗುವಂತೆ ಮಾಡುವುದರ ಜೊತೆಗೆ ವಿದ್ಯಾರ್ಥಿಗಳು ಸತತವಾಗಿ ಜಿಲ್ಲಾಮಟ್ಟದ, ರಾಜ್ಯಮಟ್ಟದ ವಿಜ್ಞಾನ ಮತ್ತು ವಸ್ತು ಪ್ರದರ್ಶನದಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅನೇಕ ವಿಜ್ಞಾನ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಬಹುಮಾನ ಪಡೆದಿರುವುದು ಇವರ ವಿಷಯಾಸಕ್ತಿ ವಿಜ್ಞಾನ ವಿಷಯದ ಮೇಲಿನ ಮತ್ತು ಮಕ್ಕಳ ಮೇಲಿನ ಕಾಳಜಿ ಪ್ರೀತಿಯನ್ನು ತೋರಿಸುತ್ತದೆ.
ಅದೇ ರೀತಿ ಇದುವರೆಗೂ ರಾಜ್ಯದೆಲ್ಲೆಡೆ ವಿಜ್ಞಾನ ಸಮ್ಮೇಳನ ಮತ್ತು ಇತರ ಶಾಲಾ ಕಾಲೇಜು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸುಮಾರು ಇನ್ನೂರಕ್ಕಿಂತಲೂ ಹೆಚ್ಚು ಉಪನ್ಯಾಸ ನೀಡಿರುವುದು, ಜನರಲ್ಲಿ ವಿಜ್ಞಾನದ ಕುರಿತು ಅರಿವು ಮೂಡಿಸುವುದು, ಜನರಲ್ಲಿ ಅದರಲ್ಲಿ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಓಡಾಡಿ ಗಟ್ಟಿ ಧ್ವನಿಯಲ್ಲಿ ಮಾತನಾಡಿ, ಮೂಢ ನಂಬಿಕೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದು ಪರಿಸರ ಜಾಗೃತಿ, ಭಾಷಾ ಜ್ಞಾನ ಮುಂತಾದ ಸಮಾಜ ಮುಖಿ ಚಟುವಟಿಕೆಗಳ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಮಾದರಿ ಕಾರ್ಯವಾಗಿದೆ.

ಲೇಖನಗಳ ಪ್ರಕಟಣೆ

ಶ್ರೀ ದಾನಿಯವರು ಕೇವಲ ಶಿಕ್ಷಕರಾಗಿ ಹಾಗೂ ಅನೇಕ ಸಮಾಜ ಮುಖಿ ಕೆಲಸ ಮಾಡುವ ಜೊತೆಗೆ ತಾವು ಒಬ್ಬ ಸೃಜನಶೀಲ ಬರಹಗಾರರು, ಸಾಹಿತಿಗಳು, ಕವಿಗಳು ಅನ್ನುವದನ್ನು ತಮ್ಮ ಬರಹದ ಮೂಲಕ ಸಾಬೀತು ಪಡಿಸಿದ್ದಾರೆ.

೧. ನೀರು ಸಂರಕ್ಷಣೆಯಲ್ಲಿ ಮರಗಳ ಪಾತ್ರ
೨. ಪರಿಸರ ಸಂರಕ್ಷಣೆ,
೩. ಬತ್ತಿದ ಬಾವಿ (ಕನ್ನಡಕ್ಕೆ ಅನುವಾದ ) ಮುಂತಾದ ಬಿಡಿ ಲೇಖನಗಳು ಪ್ರಕಟಿಸಿರುವುದು, ಹಲವಾರು ಲೇಖನಗಳು ಪ್ರಜಾವಾಣಿ, ವಿಜಯವಾಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದು ಸೇರಿದಂತೆ ಆಕಾಶವಾಣಿ ಕೇಂದ್ರದಲ್ಲಿ ಕೂಡಾ ಇವರ ಲೇಖನ ಗಳ ವರದಿ ಬಿತ್ತರ ಗೊಂಡಿರುತ್ತವೆ.

ಕಾರ್ಯಚಟುವಟಿಕೆ:

ಶ್ರೀ ಬಾಬುರಾವ ದಾನಿಯವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು , ಅನೇಕ ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆ ಉಸ್ತುವಾರಿಯನ್ನು ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.

೧:ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸದಸ್ಯರು,
೨:ಜಿಲ್ಲಾ ವಿಜ್ಞಾನ ಕೇಂದ್ರ ಬೀದರನ ಗೌರವ ಕಾರ್ಯದರ್ಶಿ,
೩:ಜಿಲ್ಲಾ ಪರಿಸರ ವಾಹಿನಿ ಸದಸ್ಯರು,
೪:ಜಿಲ್ಲಾ ಬರಹಗಾರರ ಮತ್ತು ಕಲಾವಿದದರ ಸಂಘದ ಗೌರವ ಸಲಹೆಗಾರರು,
೫:ಉಪಾಧ್ಯಕ್ಷರು :ಸ್ವದೇಶಿ ಆಂದೋಲನ ಸಮಿತಿ ಬೀದರ,
೬:ಪ್ರಧಾನ ಕಾರ್ಯದರ್ಶಿ ಗಳು :ಗಾನಯೋಗಿ ಪಂಚಾಕ್ಷರಿ ಸೇವಾಸಂಘ ಬೀದರ,
೭.ಸಂಯೋಜಕರು :
ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿ ಬೀದರ (ವಿಜ್ಞಾನ ವಿಭಾಗ )
೮:ಉಪಾಧ್ಯಕ್ಷರು: ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಬೀದರ
ಹೀಗೆ ಅನೇಕ ಕನ್ನಡ ಪರ ಸಂಘ ಸಂಸ್ಥೆ ಮತ್ತು ಇನ್ನಿತರ ಸರಕಾರೆತರ ಸಂಘ ಸಂಸ್ಥೆಗಳ ಮೂಲಕ ಸದಾ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಅಪಾರ ಸೇವೆಯನ್ನು ಗುರುತಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡ ಳಿತ ಸೇರಿದಂತೆ ಹಲವಾರು ಸಂಘಸಂಸ್ಥೆಗಳು ಪ್ರಶಸ್ತಿ/ ಪುರಸ್ಕಾರ ನೀಡಿ ಗೌರವಿಸಿವೆ.

ಪ್ರಶಸ್ತಿ ಮತ್ತು ಗೌರವ ಪುರಸ್ಕಾರ:

೧: ವಿಜ್ಞಾನ ಮತ್ತು ವಸ್ತು ಪ್ರದರ್ಶನ ಪ್ರಶಸ್ತಿ (ಸಾರ್ವಜನಿಕ ಶಿಕ್ಷಣ ಇಲಾಖೆ ಬೀದರ)
೨: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ(ಜಿಲ್ಲಾಡಳಿತ ಬೀದರ )
೩: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ.
೪:ಗಣರಾಜ್ಯೋತ್ಸವ ಪ್ರಶಸ್ತಿ (ಜಿಲ್ಲಾಡಳಿತ ಬೀದರ)
೫: ವಿಜ್ಞಾನ ಮಿತ್ರ ರಾಜ್ಯ ಶಿಕ್ಷಕ ಪ್ರಶಸ್ತಿ
೬: ಉತ್ತಮ ಸಂಘಟಕ ಪ್ರಶಸ್ತಿ
೭ ಅಖಿಲ ಭಾರತ ಸಾಹಿತ್ಯ ಸಮ್ಮೇಳನನದಲ್ಲಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಹೇಶ ಜೋಶಿಯವರಿಂದ ಗೌರವ ಸತ್ಕಾರ
೮: ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಹೀಗೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಶ್ರೀ ಬಾಬುರಾವ ದಾನಿಯವರು ಸರಳ, ಸ್ನೇಹಿ ಜೀವಿ. ಸದ್ಯ ನಿವೃತ್ತಿ ಜೀವನ ನಡೆಸುತ್ತಿರುವ ಇವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಸಕ್ರಿಯ ವಾಗಿದ್ದು ಅನೇಕ ಕನ್ನಡ ಕಾರ್ಯಕ್ರಮಗಳನ್ನು ನಡೆಸಲು ಮುಂಚೂಣಿಯಲ್ಲಿರುವ ಇವರ ಸೇವೆ ಹೀಗೆ ಮುಂದುವರಿಯಲೆಂದು ಹಾರೈಸುತ್ತೇನೆ.

  • ಓಂಕಾರ ಪಾಟೀಲ
    (ಕಾರ್ಯದರ್ಶಿಗಳು : ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಬೀದರ್)
    ಮೊ:೬೩೬೦೪೧೩೯೩೩.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ