ಯಾದಗಿರಿ/ಗುರುಮಠಕಲ್: ಕರ್ನಾಟಕದ ಕಾಂಗ್ರೇಸ್ ಸರಕಾರ ಬಡ ಜನರ ವಿರೋಧವಾಗಿ ಬೆಲೆ ಏರಿಕೆಯ ಹಸ್ತವನ್ನು ಬಳಸಿ ಜನರ ಜೀವನವನ್ನು ಅಸ್ತವ್ಯಸ್ತ ಮಾಡುತ್ತಿದ್ದಾರೆ. ಅದರಂತೆ, ರಾಜ್ಯದ ಕಾಂಗ್ರೇಸ್ ಸರಕಾರ ಹಲವು ಇಲಾಖೆಗಳಲ್ಲಿ ಸುಂಕವನ್ನು ಹೆಚ್ಚಿಸುತ್ತಿದ್ದು, ಉದಾಹರಣೆಗೆ ಅಬಕಾರಿ ಸುಂಕವನ್ನು ಶೇ.20% ಕ್ಕೆ ಹೆಚ್ಚಿಸಿ, ಬಸ್ ಮತ್ತು ಮೆಟ್ರೊ ರೈಲುಗಳ ಪ್ರಯಾಣ ದರ ಹೆಚ್ಚಿಸಿದ್ದು ಮತ್ತು ಅಸ್ತಿ ತೆರಿಗೆ, ಮುದ್ರಾಂಕ ಶುಲ್ಕ, ರಜಿಸ್ಟ್ರೇಷನ್ ನೋಂದಣಿ ಶುಲ್ಕ ಮತ್ತು ಹಾಲನ ಭರ ಶೇ. 9% ರಷ್ಟು ಹೆಚ್ಚಿಸಿರುವುದು ಕಡು ಬಡವರ ಮೇಲೆ ಅತ್ಯಂತ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದಾಗಿ ರಾಜ್ಯದ ಜನರ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಿರಿದದ ಬೇಲೆ ಏರಿಕೆಯನ್ನು ಹಿಂಪಡೆಯಲು ಆದೇಶಿಸಬೇಕೆಂದು ಮಾನ್ಯ ತಹಶೀಲ್ದಾರರ ಮೂಲಕ ಮಾನ್ಯ ಘನತೆವೆತ್ತ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು ಸಂದರ್ಭದಲ್ಲಿ ನರಸಿಂಹಲು ನೀರೆಟಿ ಬಿಜೆಪಿ ತಾಲೂಕ ಅಧ್ಯಕ್ಷರು ಚಂದು ಲಾಲ್ ಚೌದ್ರಿ, ರಮೇಶ್ ತಾಂಡುರಕರ್, ವೆಂಕಟಪ್ಪ ಅವಂಗಪುರ, ರವೀಂದ್ರ ರೆಡ್ಡಿ ಪೋತುಲು, ನಾರಾಯಣ ಮಜ್ಜಿಗೆ ಕಾರ್ಯಕರ್ತರು ಮುಖಂಡರು ಇದ್ದರು.
ವರದಿ:ಜಗದೀಶ್ ಕುಮಾರ್
