ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಮತಿಘಟ್ಟ ರವಿಗೆ ಸುವರ್ಣ ಕರ್ನಾಟಕ ಸಮಾಜ ಸೇವಾ ರತ್ನ ಪ್ರಶಸ್ತಿ ಲಭಿಸಿದೆ.
ಎವರ್ ಗ್ರೀನ್ ಕಲ್ಚರಲ್ ಅಕಾಡೆಮಿ, ಡಾ. ಪುನೀತ್ ರಾಜ್ ಕುಮಾರ್ ಜನ್ಮ ದಿನೋತ್ಸವದ ಅಂಗವಾಗಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಮಾರ್ಚ್ 31ರಂದು ನಡೆದ ಸಮಾರಂಭದಲ್ಲಿ ರವಿಗೆ ಶಿಕ್ಷಣ ಕ್ಷೇತ್ರದ ಸೇವೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀಯುತ ರವಿ ಅವರು ಬಿಸಲೆರೆ ಶ್ರೀ ಬನಶಂಕರಿ ಪ್ರೌಢಶಾಲೆಯಲ್ಲಿ ಎಸ್. ಡಿ. ಎ. ಆಗಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಯುತರನ್ನು ಸಂಸ್ಥೆಯ ಸಂಘಟಕ ಡಾ. ಟಿ. ಕೃಷ್ಣಮೂರ್ತಿ, ಡಾ. ಪಂಡಿತ್ ಬಿ. ಡಿ. ಶಾಸ್ತ್ರಿ, ಕನ್ನಡ ರತ್ನ ಡಾ. ಹಿರೇನಲ್ಲೂರು ಶಿವು ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.
ವರದಿ ಮಲ್ಲಿದೇವಿಹಳ್ಳಿ ಶ್ರೀನಿವಾಸ್
