ವಿಜಯನಗರ / ಕೊಟ್ಟೂರು: ಅಭಿಮಾನಿಗಳ ಅಭಿಮಾನಕ್ಕಿಂತ ದೊಡ್ಡ ಪ್ರಶಸ್ತಿಗಳಿಲ್ಲ ಎನ್ನುವ ನಮ್ಮ ಹೆಮ್ಮೆಯ ಕೊಟ್ಟೂರಿನ ಸಾಹಿತಿ ಕುಂಬಾರ ವೀರಭದ್ರಪ್ಪ ನವರ ಪ್ರಶಸ್ತಿಗಳ ಬತ್ತಳಿಕೆಗೆ ಈಗ ಪ್ರತಿಷ್ಠಿತ ನಾಡೋಜ ಪ್ರಶಸ್ತಿಯು ಸೇರ್ಪಡೆಯಾಯಿತು,
ಹಂಪಿ ಕನ್ನಡ ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರಗಳಲ್ಲಿ ಅವರ ಕೊಡುಗೆಗಾಗಿ ಪ್ರತಿಷ್ಠಿತ ವ್ಯಕ್ತಿಗಳಿಗೆ ವಾರ್ಷಿಕವಾಗಿ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. “ನಾಡೋಜ” ಪದವು ಆದಿಕವಿ ಪಂಪನಿಗೆ ಸೇರಿದ್ದು, ಇದರರ್ಥ `ಭೂಮಿಗೆ ಶಿಕ್ಷಕ.
ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನದಲ್ಲಿ ನೀಡಲಾಗುತ್ತಿರುವ ದೇಶಿಕೋತ್ತಮ ಪದವಿಯ ಪ್ರೇರಣೆಯಿಂದ ಕನ್ನಡ ವಿವಿ ನಾಡೋಜ ಪದವಿ ನೀಡುತ್ತಿದೆ. ನಾಡೋಜ ಗೌರವ ಪದವಿಯು ಶಾಲು, ಸರಸ್ವತಿ ವಿಗ್ರಹ, ಪ್ರಮಾಣ ಪತ್ರ, ಪ್ರಶಸ್ತಿ ಫಲಕ ಒಳಗೊಂಡಿದೆ. ಈ ಬಾರಿಯ ಹಂಪಿಯ ಘಟಿಕೋತ್ಸವದಲ್ಲಿ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಕುಂಬಾರ ವೀರಭದ್ರಪ್ಪ, ಖ್ಯಾತ ಗಾಯಕ ವೆಂಕಟೇಶ್ ಕುಮಾರ್, ನಾಡೋಜವನ್ನು ಸ್ವೀಕರಿಸುತ್ತಾರೆ, ಈ ಮೂವರು ದಿಗ್ಗಜರು ಅವರವರ ಕ್ಷೇತ್ರದಲ್ಲಿ ತುಂಬಾ ಕೆಲಸವನ್ನು ಮಾಡಿದ್ದಾರೆ, ಈ ಬಾರಿ ನಾಡೋಜ ಪ್ರಶಸ್ತಿಗೆ ಒಂದು ಕಳೆ ಕಟ್ಟಿದೆ, ಎಂದು ನಮ್ಮ ಕೆರೆ ನಮ್ಮ ಹಕ್ಕು ವಿನ ಅಧ್ಯಕ್ಷ ಅಂಚೆ ಕೊಟ್ರೇಶ್ ಅವರು ಪತ್ರಿಕೆಗೆ ತಿಳಿಸಿದರು.
ಕುಂ. ವೀ. ಸರ್ ಅವರಿಗೆ ಒಲಿದು ಬಂದ ಪ್ರಶಸ್ತಿಗಳು
ತುಮಕೂರಿನ ವೀಚಿ ಪ್ರತಿಷ್ಠಾನ ಪ್ರಶಸ್ತಿ ರಾಣೆಬೆನ್ನೂರಿನ ಲದ್ವಾ ಪ್ರತಿಷ್ಠಾನ ಪ್ರಶಸ್ತಿ
ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
ಸಂದೇಶ ಪ್ರಶಸ್ತಿ
ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ
ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ೧೯೮೬, ೨೦೦೦
ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ
ವರ್ಧಮಾನ ಪ್ರಶಸ್ತಿ ೧೯೮೮
ಲಂಕೇಶ ಪ್ರತಿಷ್ಠಾನ ಪ್ರಶಸ್ತಿ ೨೦೦೬
ಅರಮನೆ (ಕಾದಂಬರಿಗೆ) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೨೦೦೭
ಪ್ರೊ. ಕೆ. ಜಿ. ಕುಂದಣಗಾರ ಗಡಿನಾಡ ಸಾಹಿತ್ಯ.
- ಕರುನಾಡ ಕಂದ
- ಕರುನಾಡ ಕಂದ
