ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಟಿ ಕಲ್ಲಹಳ್ಳಿ ಗ್ರಾಮದಲ್ಲಿ ಬಾಬು ಜಗಜೀವನ್ ರಾವ್ ಅವರ ಜಯಂತಿ ಆಚರಣೆ ಸಂದರ್ಭದಲ್ಲಿ ಮಾಜಿ ಉಪ ಪ್ರಧಾನಿ, ದಲಿತರ ನಾಯಕ, ಹಸಿರು ಕ್ರಾಂತಿಯ ಒಡೆಯ ಎಂದು ಕರೆಯುವ ಬಾಬು ಜಗಜೀವನ್ ರಾವ್ ಅವರ 118 ನಯ ಜಯಂತಿಯನ್ನು ಇಂದು ಟಿ ಕಲ್ಲಹಳ್ಳಿಯಲ್ಲಿ ಸರಳತೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಸಹಾಯಕ ತಿಪ್ಪೇಸ್ವಾಮಿ ಅವರು ಮಾತನಡುತ್ತಾ ಬಾಬು ಜಗಜೀವನ್ ರಾಮ್ ದಲಿತರ ಏಳಿಗೆಗಾಗಿ ಸಂವಿಧಾನ ರಚನಾ ಸಭೆಯಲ್ಲಿ ಅವರು ದಲಿತರ ಹಕ್ಕುಗಳಿಗಾಗಿ ಪ್ರತಿಪಾದಿಸಿದರು, ಹಾಗೂ ಗುರುಮೂರ್ತಿ ಶಿಕ್ಷಕರು ಅವರು ಮಾತನಾಡುತ್ತ ಬಾಬು ಜಗಜೀವನ್ ರಾಮ್ ಅವರು ಅವರ ಸೃಷ್ಟಿಸಿದ “ಹಸಿರು ಕ್ರಾಂತಿ “ಯಿಂದ ದೇಶದಲ್ಲಿ ಬಡವರಿಗೆ ಆಹಾರದ ಕೊರತೆ ದೂರವಾಯಿತು, ಹಸಿರು ಕ್ರಾಂತಿಯ ಹರಿಕಾರ ಬಾಬೂಜಿ ಯವರು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಜೀವನಕ್ಕೂ ಆದ್ಯತೆ ಕೊಟ್ಟಿರುವುದರಿಂದ ಇಂದು ಸಮಾಜದಲ್ಲಿ ಆಹಾರ ಪದಾರ್ಥಗಳ ಕೊರತೆ ಇಲ್ಲ ಎಂದು ಹೇಳಿದರು, ಮೂರು ದಶಕಗಳ ಕಾಲ ಕೇಂದ್ರ ಮಂತ್ರಿಮಂಡಲದ ಸದಸ್ಯರಾಗಿ ಅಪಾರ ಆಡಳಿತ ಅನುಭವವನ್ನು ಪಡೆದರು ಎಂದು ಬಾಬೂಜಿಯವರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಕೋರಿ ಈರಣ್ಣ, ಪಾಪಮ್ಮ ಗುರುಮೂರ್ತಿ, ಜೋಗಮರ್ ತಿಪ್ಪೇಸ್ವಾಮಿ, ಕೆ ಟಿ ರಾಜಣ್ಣ, ಸಿದ್ದನಗೌಡರು, ಊರಿನ ಮುಖಂಡರಾದಂತ ಗೌಡ್ರು ಮುತ್ಯಪ್ಪ ಈರಣ್ಣ, ನಿರಂಜನ್ ಗೌಡ್ರು ಹಾಲೇಶಪ್ಪ ಹಾಗೂ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಸಿ ಮಾಂತೇಶ್ ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷ ಶಿವಣ್ಣ ಹಾಗೂ ದಲಿತ ಕೇರಿಯ ಮುಖಂಡರು ಡಿಎಸ್ಎಸ್ ಖಜಾನ್ಸಿ ಡಿ ಬಸವರಾಜ್ ,ಸಿದ್ದೇಶ್ ಬಿ ಸಣ್ಣಬಸಪ್ಪ, ಕೆಂಗಬಸಪ್ಪ, ರುದ್ರಮುನಿ,ಕೆಂಚಪ್ಪ ಹಾಗೂ ಗ್ರಾಮ ಸಹಾಯಕ ತಿಪ್ಪೇಸ್ವಾಮಿ, ಸಿಡ್ಲಾಜ್ಜರು ಶಿವಣ್ಣ, ಮುರಿಗೆ ಬಸವರಾಜ್, ಜೆಡಿಎಸ್ ಮುಖಂಡ ತಿಪ್ಪೇಸ್ವಾಮಿ, ಗೌಡಗೆರೆ ಲಕ್ಷ್ಮಣ ಹಾಗೂ ಬಸಜ್ಜ ಇನ್ನೂ ಊರಿನ ಮುಖಂಡರು ಹಾಗೂ ಯುವಕರು ಸೇರಿದ್ದರು.
ವರದಿ: ಗುರುರಾಜ್ ಎಲ್, ಕಲ್ಲಹಳ್ಳಿ ಟಿ
