ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುರುಕುಂದ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮರಿಯಮ್ಮ ದೇವಿಯ ಉತ್ಸವವನ್ನು ಏಪ್ರಿಲ್ 8 ಮಂಗಳವಾರದಂದು ನಡೆಯಲಿದ್ದು ಶ್ರೀ ಮರಿಯಮ್ಮ ದೇವಿ ಹಾಗೂ ರಗಡಪ್ಪ ಅವರ ಮೂರ್ತಿಯನ್ನು ಡೊಳ್ಳು ಹಲಗೆಯೊಂದಿಗೆ ಮೆರವಣಿಗೆ ಮುಖಾಂತರ ಸಂಜೆ 5 ಗಂಟೆಗೆ ಸಿಹಿ ನೀರು ಬಾಯಿಗೆ ಗಂಗಾ ಸ್ನಾನಕ್ಕೆ ತೆರಳಿ ಸದರಿ ದೇವಿಗೆ ಗಂಗಾ ಸ್ನಾನ ಮಾಡಿಸಿ ನಂತರ ಅರ್ಚಕ ಶರಣಪ್ಪ ಪೂಜಾರಿ ಮಳಗಿ ಅವರು ಶ್ರೀ ಮರಿಯಮ್ಮ ದೇವಿ ಹಾಗೂ ರಗಡಪ್ಪ ಅವರಿಗೆ ಅಲಂಕಾರ ಶೃಂಗಾರ ಮಾಡಿ ಪೂಜೆ ನೆರವೇರಿಸಿ ಅಲ್ಲಿಂದ ಮರಳಿ ತಾಯಿಯ ಗುಡಿಗೆ ಮೆರವಣಿಗೆ ಮುಖಾಂತರ ಬಂದು ಸದರಿ ದೇವಿಯು ಸ್ಥಾನಕ್ಕೆ ಮುಟ್ಟಿದ ನಂತರ ರಾತ್ರಿ 8 ಗಂಟೆಗೆ ಪೂಜಾ ಪುರಸ್ಕಾರ ಮಾಡಿ ಎಲ್ಲರೂ ತಾಯಿಗೆ ನೈವೇದ್ಯ, ಕಾಯಿ, ಕರ್ಪೂರ ಅರ್ಪಿಸುವರು ಮತ್ತು ಏಪ್ರಿಲ್ 9 ರಂದು ಮುಂಜಾನೆ 11 ಗಂಟೆಯಿಂದ ಸಂಜೆ 5 ರ ವರೆಗೆ ಊಟದ ವ್ಯವಸ್ಥೆ ಇರುತ್ತದೆ ಈ ಸಂಬಂಧ ಸುತ್ತಮುತ್ತ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಾಯಿ ಆಶೀರ್ವಾದ ಪಡೆಯಬೇಕೆಂದು ದೇವಿ ಸಮಿತಿ ಮನವಿ ಮಾಡಿದೆ.
- ಕರುನಾಡ ಕಂದ
