
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸುಕ್ಷೇತ್ರ ಕಡಣಿ ಗ್ರಾಮದಲ್ಲಿ ಶ್ರೀ ಭೋಗಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ 5/4/2025 ರಂದು ಸಾಯಂಕಾಲ ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರ ಭಗವತ್ವಾದರ ಕಾಶಿ ಮಹಾಪೀಠದೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ ಬಹಳ ವಿಜೃಂಭಣೆಯಿಂದ ಜಗಮಗಿಸುವ ವಿದ್ಯುತ್ ಅಲಂಕಾರದ ಬೆಳಕಿನ ಮಧ್ಯೆ ಡೊಳ್ಳು ಕುಣಿತದೊಂದಿಗೆ ಸುಮಂಗಲಿಯರು ಆರತಿ ಹಿಡಿದು ಕುಂಭ ಹೊತ್ತು ಬರುವ ದೃಶ್ಯ ನೋಡಲು ಕಡಣಿ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಮತ್ತು ಕರ್ನಾಟಕ ಮಹಾರಾಷ್ಟ್ರದ ಮಠಾಧೀಶರು ಶಿವಶರಣರು ರಾಜಕೀಯ ಮುಖಂಡರು ಶ್ರೀ ಭೋಗಲಿಂಗೇಶ್ವರ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಭಾಗಿಯಾಗಿದ್ದು ಕಾಶಿ ಜಗದ್ಗುರುಗಳ ಹಾಗೂ ಮಠಾಧೀಶರ ಪಾದಕ್ಕೆ ಹಣೆ ಮಣಿಸಿ ನಮಸ್ಕರಿಸಿ ಆಶೀರ್ವಾದ ಪಡೆದು ಶ್ರೀ ಭೋಗಲಿಂಗೇಶ್ವರ ಪುರಾಣ ಮಹಾಮಂಗಲ ಕಾರ್ಯಕ್ರಮದಲ್ಲಿ ಭಾಗಿಯಾದರು.
ವರದಿ ಹಣಮಂತ ಚ. ಕಟಬರ್
