ಬಳ್ಳಾರಿ / ಕಂಪ್ಲಿ : ಮಕ್ಕಳಿಗೆ ಬಾಲ್ಯದಲ್ಲಿಯೆ ಬಯಲಾಟ ಕಲೆ ಕಲಿಸುವ ಮೂಲಕ ಗ್ರಾಮೀಣ ಭಾಗದ ಕಲೆ ಉಳಿವಿಕೆಗೆ ಸರ್ಕಾರ ಮುತುವರ್ಜಿವಹಿಸಬೇಕೆಂದು ಎಂದು ಮನ್ಮಥ ಪಾತ್ರದಾರಿ ಹಾಗೂ ಬಾಲಕರ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಜೀರು ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ದೇವಮಾಂಭ ಕೃಪಾ ಪೋಷಿತ ಬಯಲಾಟ ನಾಟಕ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಾಲಿ ವೆಂಕೋಬಣ್ಣ ವಿರಚಿತ ಗಿರಿಜಾ ಕಲ್ಯಾಣ ಅರ್ಥಾತ್ ತಾರಕಸುರನ ವಧಾ ಪೌರಾಣಿಕ ಬಯಲಾಟದಲ್ಲಿ ಮಾತನಾಡಿ, ಇತ್ತೀಚಿನ ದಿನಮಾನದಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ಸಿಲುಕಿ ಬಯಲಾಟ ಕಲೆಯು ಕಣ್ಮರೆಯಾಗುತ್ತಿದೆ. ಗ್ರಾಮೀಣ ಬಯಲಾಟವು ಪ್ರತಿಯೊಂದು ಕಥೆ, ಸನ್ನಿವೇಶಗಳನ್ನು ಸೂಚಿಸುವ ನಾಟಕವಾಗಿದೆ. ಇಂತಹ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಲೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ವಿನಾಯಕ, ಪಾರ್ವತೀಶ್ ಹೂಗಾರ (ಬಾಲಕೃಷ್ಣ ಪಾತ್ರಧಾರಿ), ಬಳ್ಳಾರಿ ನಾಗರಾಜ(ಕೃಷ್ಣ), ಜಡೆ ದೊಡ್ಡಬಸಪ್ಪ (ಬೃಹಸ್ಪತಿ), ಉಪ್ಪಾರ ದೊಡ್ಡಬಸಪ್ಪ (ನಾರದ), ಜಡೆ ಮಹಾದೇವಪ್ಪ ಯಾದವ್ (ಹೇಮಾಂತರಾಜ), ಸೋಮಶೇಖರ (ಪರಮೇಶ್ವರ), ಉಪ್ಪಾರ ರಾಜಶೇಖರ (ನಂದೀಶ್ವರ), ಮುದ್ರಿಕಾರ ಭೀಮಪ್ಪ (ತಾರಕಸೂರ), ಚೌಕಳಿ ರಾಮ (ವಜ್ರದೂಷ್ಟ), ಬಳ್ಳಾರಿ ಪುರುಷೋತ್ತಮ(ಕಂಠೀರವ), ದಾಸರ ಹನುಮಂತಪ್ಪ(ದೇವೇಂದ್ರ), ಪವಿತ್ರ ಗೊಳ್ಳರಹಳ್ಳಿ(ಶಚಿರುಕ್ಮಿಣಿ), ಜೀರ್ ಅಂಜಿಲಿ(ಪಾರ್ವತಿ ಪಾತ್ರ), ನಾಗರತ್ನ ವಿರುಪಾಪುರ(ಮೇನಕ/ರಥಿದೇವಿ) ಇವರು ವಿವಿಧ ಪಾತ್ರಧಾರಿಗಳಾಗಿ ಅಭಿನಯಿಸಿ, ಪ್ರೇಕ್ಷಕರ ಗಮನ ಸೆಳೆದರು.
ಹೆಚ್.ಶಿವರುದ್ರಪ್ಪ, ಹೆಚ್.ತಿಪ್ಪೇಸ್ವಾಮಿ ಇವರು ಹಾರ್ಮೋನಿಯಂ ನುಡಿಸಿದರು. ವಿ.ನಾರಾಯಣಪ್ಪ ಇವರು ಕಥಾ ನಾಯಕರಾಗಿ, ಕುಂಟೋಜಿ ಶಿವುರಾಜ ಸಾರಥಿ, ದಳವಾಯಿ ಗಂಗಪ್ಪ ಮತ್ತು ಅಗಸರ ಮಡಿವಾಳಪ್ಪ ವಸ್ತಾಲಂಕಾರ, ಕುಡತಿನಿ ತಿಪ್ಪೇಸ್ವಾಮಿ ಇವರು ತಬಲಾಕ್ಕೆ ಸಾಥ್ ನೀಡಿದರು. ಮತ್ತು ರಾಜಸಬ್ ಇವರು ರಂಗಸಜ್ಜಿಕೆ ನಿರ್ವಹಿಸಿದರು.
ಮಹಿಳೆಯರು, ವೃದ್ಧರು ಸೇರಿ ಸಾರ್ವಜನಿಕರು ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರು ಆಗಮಿಸಿ, ಬಯಲಾಟವನ್ನು ವೀಕ್ಷಿಸಿ, ಚಪ್ಪಾಳೆ, ಶಿಳ್ಳೆ ಹೊಡೆದು, ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
