ಬೆಂಗಳೂರು: ಇದೇ ಬರುವ ಶನಿವಾರ 12 -4- 2025 ರಂದು ಆನಂದ್ ರಾವ್ ವೃತ್ತದ ಬಳಿ ಇರುವ ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ಬೆಳಿಗ್ಗೆ 10.30 ರಿಂದ 11:30 ರವರೆಗೆ
“ಪತ್ರಕರ್ತರಾಗಿ ಗಾಂಧೀಜಿ” ವಿಷಯದ ಕುರಿತು ಉಪನ್ಯಾಸ ಜರುಗಲಿದೆ.
ಉಪನ್ಯಾಸಕರು: ಎನ್ ಆರ್ ವಿಶುಕುಮಾರ್, ವಿಶ್ರಾಂತ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು.
11:30 ರಿಂದ 12:30 ರ ವರೆಗೆ ಮಲಯಾಳಂ ಭಾಷೆಯಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಮಲೆಯಾಳಂ ಭಾಷೆಗೆ ಹಲವಾರು ಸಾಹಿತ್ಯ ಕೃತಿಗಳನ್ನು ಅನುವಾದ ಮಾಡಿದ ಹಾಗೂ ಅನೇಕ ಸ್ವತಂತ್ರ ಕೃತಿಗಳನ್ನು ರಚಿಸಿದ ನಮ್ಮ ಕೆಪಿಟಿಸಿಎಲ್ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಭಾಕರನ್ ಹಾಗೂ ನಮ್ಮ ಕೆಪಿಟಿಸಿಎಲ್ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಾಹಿತಿ, ಪ್ರಸಿದ್ಧ ಕಾರ್ಟೂನಿಸ್ಟ್ ಶ್ರೀ ಕೆ ಆರ್ ಸ್ವಾಮಿ ಅವರಿಗೆ ಸನ್ಮಾನ.
ಕಾರ್ಯಕ್ರಮದ ಆರಂಭದಲ್ಲಿ ಹಾಗೂ ಉಪನ್ಯಾಸದ ನಂತರ ನಮ್ಮ ಕೆಪಿಟಿಸಿಎಲ್ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ ಜಿ ಕೂರ್ಸೆ ಅವರ ಮೊಮ್ಮಗಳಾದ ಕುಮಾರಿ ನೇಹಾ ವಿನಯ ಕೂರ್ಸೆ ಅವಳಿಂದ ಭರತನಾಟ್ಯ ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಅವಳಿಂದ ಯೋಗ ನೃತ್ಯ ಪ್ರದರ್ಶನವಿದೆ.
ಖ್ಯಾತ ಸಾಹಿತಿ, ಕೆಪಿಟಿಸಿಎಲ್ ನಿವೃತ್ತ ಅಧೀಕ್ಷಕ ಇಂಜಿನಿಯರ್, ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಖ್ಯಾತಿಯ, ಖ್ಯಾತ ಸಾಹಿತಿ ಗಜಾನನ ಶರ್ಮ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಳಗ್ಗೆ 9:00 ರಿಂದ ಮಧ್ಯಾಹ್ನ 3:00 ಘಂಟೆಯವರೆಗೆ ಶ್ರೀ ಕೆ ಆರ್ ಸ್ವಾಮಿಯವರ ಕಾರ್ಟೂನ್ ಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
