ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ , ಡಾ.ಬಾಬು ಜಗಜೀವನ ರಾಂ ರವರ 118 ನೇ ಜನ್ಮ ದಿನಾಚರಣೆಯ ಅಂಗವಾಗಿರವರ ಭಾವಚಿತ್ರಕ್ಕೆ ಶಾಸಕ ಎಂ ಆರ್ ಮಂಜುನಾಥ್ ಪುಷ್ಪಾರ್ಚನೆ ಮಾಡಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು.
ಬಾಬೂಜಿ ಅವರು ಹಸಿರು ಕ್ರಾಂತಿಯ ಹರಿಕಾರರಾಗಿ ಬಡವರ ಹಸಿವು ನೀಗಿಸಿದ್ದ ಧೀಮಂತ ನಾಯಕರಾಗಿದ್ದಾರೆ. ಇವರು ದೇಶದ ಸ್ವಾತಂತ್ರ್ಯ ಹೋರಾಟಗಾರರಾಗಿ, ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಹಾಗೂ ಪ್ರಥಮ ಉಪ ಪ್ರಧಾನಿಯಾಗಿ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದರು.
ದೇಶದಲ್ಲಿದ್ದ ಜಾತಿ ಪದ್ಧತಿ, ಅಸ್ಪೃಶ್ಯತೆ ತೊಡೆದು ಹಾಕಲು ಹೋರಾಡಿದರು. ಬಾಬೂಜಿ 1946ರಲ್ಲಿ ಜವಹರಲಾಲ್ ನೆಹರು ಅವರ ನೇತೃತ್ವದ ಸರ್ಕಾರದಲ್ಲಿ ಅತ್ಯಂತ ಕಿರಿಯ ಸಚಿವರಾಗಿದ್ದರು. ಆ ನಂತರ ಹಲವು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ ಹಲವು ಹೊಸ ಕಾಯ್ದೆಗಳನ್ನು ಜಾರಿಗೆ ತಂದರು. ಅಲ್ಲದೇ ಕಾರ್ಮಿಕ ಸಚಿವರಾಗಿದ್ದಾಗ ವಿಶೇಷ ಕಾನೂನುಗಳನ್ನು ಜಾರಿಗೆ ತಂದರು ಎಂದು ತಿಳಿಸಿದರು.
ತಹಶೀಲ್ದಾರ್ ವೈ. ಕೆ. ಗುರುಪ್ರಸಾದ್, ಬಿಇಓ ಗುರುಲಿಂಗಯ್ಯ, ಪರಿಶಿಷ್ಟ ಪಂಗಡ ಇಲಾಖೆ ರಾಜೇಶ್, ಕೆಸಿಪ್ ಎಇಇ ಅವಿನಾಶ್, ವಿಎ ಶೇಷಣ್ಣ,ಹಾಗೂ ಮುಖಂಡರುಗಳಾದ ಸಿದ್ದರಾಜು, ರಾಜೂಗೌಡ, ಕಿರಣ್ ದಲಿತ್, ಸೌಕಯ್ಯ,ಗೋವಿಂದ್, ಕೆಂಪನಯ್ಯನಟ್ಟಿ ರವಿ, ರಾಜ್, ಗೋವಿಂದ್, ವೆಂಕಟೇಶ್, ರವಿ, ಮಹಾಲಿಂಗಯ್ಯ, ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ರಾಚಪ್ಪ, ಲೋಕೇಶ್, ಗುರುಸ್ವಾಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್.
