ಇಂದು ಪದವಿ ಮಹಾವಿದ್ಯಾಲಯದಲ್ಲಿ ಸಾರ್ವಜನಿಕ ಗ್ರಂಥಾಲಯ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಸಾರ್ವಜನಿಕ ಗ್ರಂಥಾಲಯ ವತಿಯಿಂದ
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಪಟ್ಟಣದ ಶಿರಿಬಿ ರಸ್ತೆಯಲ್ಲಿ ಇರುವ ಇಂದು ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿತ್ತು.
ಸಮಾಜದಲ್ಲಿ ತಮ್ಮ ವ್ಯಕ್ತಿತ್ವ ಹೆಚ್ಚಿಸಿಕೊಳ್ಳಬೇಕೆಂದರೆ ಗ್ರಂಥಾಲಯದಲ್ಲಿ ಪ್ರತಿದಿನ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುತ್ತಿರಬೇಕೆಂದು ಡಾಕ್ಟರ್ ಪಿ ಎಂ ವಾಗೀಶಯ್ಯ ಪ್ರಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಬಹಳ ಸುಲಭವಾಗಿ ಪರೀಕ್ಷೆ ಎದುರಿಸಲು ಹಲವಾರು ಮಾರ್ಗೋಪಾಯಗಳನ್ನು ನೀಡಿದರು. ಶೈಕ್ಷಣಿಕ ಮನೋವಿಜ್ಞಾನ, ಮೆಂಟಲ್ ಎಬಿಲಿಟಿ ,ಅರ್ಥಶಾಸ್ತ್ರ ಗಣಿತಶಾಸ್ತ್ರ ವಿಜ್ಞಾನ, ಭೂಗೋಳಶಾಸ್ತ್ರ, ಸ್ಪರ್ಧಾತ್ಮಕ ಪರೀಕ್ಷೆಗೆ ಪುಸ್ತಕಗಳಷ್ಟೇ ಪತ್ರಿಕೆಗಳು ಬಹಳ ಉಪಯುಕ್ತವಾಗಿವೆ. ಇತ್ಯಾದಿ ವಿಷಯಗಳ ಬಗ್ಗೆ ಸವಿವರವಾಗಿ ಶ್ರೀ ಸಿದ್ದೇಶ್ ಗೌಡ ಎಚ್ ಬಿ ಶಿಕ್ಷಕರು ಉಪನ್ಯಾಸ ನೀಡಿದರು.
ಜಗತ್ತಿನಲ್ಲಿ ಎಲ್ಲೂ ಸಿಗದ ನೆಮ್ಮದಿ ಗ್ರಂಥಾಲಯಗಳಲ್ಲಿ ಸಿಗುತ್ತದೆ ಎಂದು ಶ್ರೀ ದೇವರಾಜ್ ಉಪನ್ಯಾಸಕರು ಅತಿಥಿಗಳಾಗಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ಗ್ರಂಥಾಲಯ ಸದಸ್ಯತ್ವ ಪಡೆದುಕೊಂಡು ನಿರಂತರ ಓದುತ್ತಿರಬೇಕು ಎಂದರು.
ಪ್ರಾಸ್ತವಿಕವಾಗಿ ಮಲ್ಲಪ್ಪ ಗುಡ್ಡಾನೂರ್ ಶಾಖಾ ಗ್ರಂಥಾಲಯ ಅಧಿಕಾರಿ ಮಾತನಾಡಿದರು.
ಹೇಮಂತ ಉಪನ್ಯಾಸಕರು ರುದ್ರಮುನಿ ಸ್ವಾಮಿ ಉಪನ್ಯಾಸಕರು ಅತಿಥಿಗಳಾಗಿದ್ದರು.
ವೀರೇಶ್ ಉಪನ್ಯಾಸಕರು ಸ್ವಾಗತಿಸಿದರು.
ಕುಮಾರಿ ಸ್ವಾತಿ ಪ್ರಾರ್ಥಿಸಿದರು.
ಮಲ್ಲಿಕಾರ್ಜುನ ಎಂ ಉಪನ್ಯಾಸಕರು ನಿರೂಪಿಸಿ, ವಂದಿಸಿದರು.
- ಕರುನಾಡ ಕಂದ
