ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಕೋಟೆ ಭಾಗದ ಯುವಕರು ವೀರಭದ್ರೇಶ್ವರ ದೇವಾಸ್ಥಾನ ಮುಂಭಾಗದಲ್ಲಿ ರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ವಿಜೃಂಭಣೆಯಿಂದ ಶ್ರೀ ರಾಮನವಮಿ ಜಯಂತಿ ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಶಿವಕುಮಾರಗೌಡ್ರು ಮಾತನಾಡಿ, ರಾಮನು ಭಾರತದ ನಂಬಿಕೆ, ಘನತೆ ಮತ್ತು ತತ್ವಶಾಸ್ತ್ರದಲ್ಲಿದ್ದಾನೆ, ರಾಮನು ಭಾರತದ ವೈವಿಧ್ಯತೆಯಲ್ಲಿ ಏಕತೆಯ ಸೂತ್ರ, ಜನರ ನಂಬಿಕೆಯ ಕೇಂದ್ರವಾದ ಭಗವಾನ್ ರಾಮನ ಕೃಪೆಯು ವಿಶ್ವದ ಮೇಲೆ ಇರಲಿ ಎಲ್ಲರೂ ಚೆನ್ನಾಗಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಶ್ರೀ ರಾಮ ನವಮಿಯ ಈ ಪವಿತ್ರ ಹಬ್ಬವು ಗೌರವಾನ್ವಿತ ಪುರುಷೋತ್ತಮ ಭಗವಾನ್ ಶ್ರೀ ರಾಮನ ಬೋಧನೆಗಳು ಮತ್ತು ಆದರ್ಶಗಳನ್ನು ನಮ್ಮ ವ್ಯಕ್ತಿತ್ವಕ್ಕೆ ಭಾಷಾಂತರಿಸಲು ಸಂಕಲ್ಪ ಮಾಡುವ ಅವಕಾಶವಾಗಿದೆ ಶ್ರೀ ರಾಮನಿಗೆ ನಮಸ್ಕಾರ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಸಿದ್ದನಗೌಡ್ರು , ಕನ್ನಳ್ಳಿ ರಾಜಪ್ಪ, ಅರ್ ಎಮ್ ಗುರು ಪ್ರಸಾದ , ಪಿ ಎಮ್ ಈಶ್ವರ್, ಬಣಕಾರ ಬಸವರಾಜ, ಆರ್ ಎಮ್ ಕೊಟ್ರಯ್ಯ, ಸೋಮು,ಉಮೇಶ್, ಬಣಕಾರ್ ಸಿದ್ದು ಪಿ ಎಮ್ ಅನಂದ್ ಕಾರ್ತಿಕ್,ಅವಿನಾಶ್,ವೀರಭದ್ರ, ದರ್ಶನ,ಮನು, ಪ್ರದೀಪ್, ಪ್ರಶಾಂತ, ಹಳ್ಳಿ ವೀರಭದ್ರ, ಚೆನ್ನಬಸವ, ಇದ್ದರು ಕೋಟೆ ಭಾಗದ ಯುವಕರ ಬಳಗ ಉಪಸ್ಥಿತರಿದ್ದರು.
- ಕರುನಾಡ ಕಂದ
