
ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಶ್ರೀ ಕ್ಷೇತ್ರ ಭೀಮಾನದಿ ತೀರದ ಹಳೆ ಕಣ್ಣೀ ಭೋಗಲಿಂಗೇಶ್ವರರ ಪಲ್ಲಕ್ಕಿ ಮೆರವಣಿಗೆ ಜರುಗಿತು.
ಆಲಮೇಲ ತಾಲೂಕಿನ ಕಡಣಿ ಗ್ರಾಮದ ಗ್ರಾಮ ದೇವರಾದ ಶ್ರೀ ಭೋಗಲಿಂಗೇಶ್ವರರ ಪಲ್ಲಕ್ಕಿ ಮೆರವಣಿಗೆಯು ದಿನಾಂಕ 5/4/2025 ರಂದು ರಾತ್ರಿ ಹತ್ತು ಗಂಟೆಗೆ ಭಜನೆ, ಡೊಳ್ಳು ಕುಣಿತ,ಪುರವಂತರ ಕುಣಿತದೊಂದಿಗೆ ತರ ತರಹದ ಮದ್ದು ಸುಡುತ್ತಾ ಜಗಮಗಿಸುವ ವಿದ್ಯುತ್ ಅಲಂಕಾರಿತ ಬೆಳಕಿನಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಪಲ್ಲಕಿ ಹಿಂದೆ ಸುಮಂಗಲಿಯರು ಆರತಿ ಹಿಡಿದು ಸಾಗಿದರು. ಈ ಪಲ್ಲಕ್ಕಿ ಮೆರವಣಿಗೆಯಲ್ಲಿ ಕಡಣಿ ಹಾಗೂ ಸುತ್ತಮುತ್ತಲಿನ ಗ್ರಾಮದ ಶ್ರೀ ಭೋಗಲಿಂಗೇಶ್ವರ ಭಕ್ತಾದಿಗಳು ಭಾಗಿಯಾಗಿದ್ದರು.
ವರದಿ. ಹಣಮಂತ ಚ. ಕಟಬರ್
