ಯಾದಗಿರಿ/ಗುರುಮಠಕಲ್:
ಪ್ರಭು ಶ್ರೀರಾಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕ – ನಿತಿನ್ ತಿವಾರಿ.
ವಿಶೇಷ ಪೂಜೆ ಅಲಂಕಾರದೊಂದಿಗೆ ಪ್ರಭು ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ, ಹನುಮಂತರ ಉತ್ಸವ ಮೂರ್ತಿಗಳಿಗೆ ನಗರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪಾದಯಾತ್ರೆ ಜೈಕಾರಗಳ ಮೂಲಕ ಅಂಬಿಗರ ಚೌಡಯ್ಯ ವೃತ್ತಕ್ಕೆ ತಲುಪಿತು,
ರಾಮನವಮಿ ಕುರಿತಾದ ವಿಶೇಷ ಉಪನ್ಯಾಸವನ್ನು ಶ್ರೀ ನಿತಿನ್ ತಿವಾರಿ ವಕ್ತಾರರು ಸೈದಾಪುರ ನೀಡಿದರು.
ಪ್ರಭು ಶ್ರೀರಾಮರು ಪ್ರಪಂಚಕ್ಕೆ ನಾವು ಹೇಗೆ ಬದುಕನ್ನು ಸಾರ್ಥಕತೆ ಮಾಡಿಕೊಳ್ಳಬೇಕು ಎಂದು 16 ಆದರ್ಶ ಗುಣಗಳನ್ನು ತಿಳಿಸಿದ್ದಾರೆ, ಪಿತೃ ವಾಕ್ಯ ಪರಿಪಾಲಕನಾಗಿ, ಧರ್ಮ ರಕ್ಷಕನಾಗಿ, ಏಕ ಪತ್ನಿ ವ್ರತಸ್ತನಾಗಿ,ಒಳ್ಳೆಯ ಸಹೋದರಾನಾಗಿ, ಸಕಲ ಜೀವ ಜಲಚರಗಳಿಗೂ ಪರಿಪೂರ್ಣ ಆಡಳಿತ ಕೊಟ್ಟ ರಾಜನಾಗಿ, ಹೀಗೆ ಸಾಕಷ್ಟು ಗುಣಗಳನ್ನು ನಾವು ಸಹಿತ ಅವರ ಆದರ್ಶ ಜೀವನದಲ್ಲಿ ಅಳವಡಿಕೊಂಡಾಗ ಮಾತ್ರ ಜೀವನ ಸಾರ್ಥಕ ಎಂದು ಹೇಳಿದರು, ಹಾಗೆ ನಾಗರಿಕ ಸಮಾಜ ಪಂಚತತ್ವಗಳಾದ ಕುಟುಂಬ ಪ್ರಭೋದನ, ನಾಗರಿಕ ಕರ್ತವ್ಯ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಜಾಗರಣ ಕುರಿತಾಗಿ ಜಾಗೃತಿ ಮೂಡಿಸಿದರು.
ಹಿಂದೂ ಯುವ ಘರ್ಜನೆ ಕಾರ್ಯಕರ್ತರು ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಿದ್ದರು, ಕಾರ್ಯಕ್ರಮದಲ್ಲಿ ವೆಂಕಟೇಶ್ ಮುದಿರಾಜ, ರಮೇಶ್ ಹೂಗಾರ, ನರಸಪ್ಪ ಗಂಗನೊಳ, ಬನ್ನಪ್ಪ ಮುದಿರಾಜ್, ರಮೇಶ್ ಚೌವ್ಹಣ, ವೆಂಕಟ ಚಿಟಕೆನ ಪಲ್ಲಿ, ಶಂಕರ ನಾಗವೋಳ, ಹನಮಂತು ಮಜ್ಜಿಗೆ, ರಮೇಶ್ ಮನ್ನೇ, ಶ್ರೀಹರಿ, ಸಾಬಣ್ಣ, ಮುಕುಂದ , ನರಸಪ್ಪ ಯಾದವ್, ಭೀಮಶಂಕರ ಮಜ್ಜಿಗೆ, ಅಂಜಪ್ಪ ಮಜ್ಜಿಗೆ, ಅಂಜಪ್ಪ ನಾಗವೋಳ, ನರೇಶ್ ಬಜರಂಗಿ ಎಲ್ಲಾ ರಾಜಕೀಯ ಮುಖಂಡರು ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರು ,ಸಾರ್ವಜನಿಕರು ಭಾಗವಹಿಸಿದ್ದರು.
ವರದಿ: ಜಗದೀಶ್ ಕುಮಾರ್
