ಯಾದಗಿರಿ/ಗುರುಮಠಕಲ್: ಇದೇ ಮೊದಲ ಬಾರಿಗೆ ಇಂದು ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ ಮತ್ತು ರಾಮ ಭಂಟ ಹನುಮಂತನ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸುವದರೊಂದಿಗೆ ರಾಮ ನವಮಿ ಪ್ರಯುಕ್ತ ಎಸ್, ಎಸ್, ಕೆ ವೃತ್ತದಲ್ಲಿ ಆಚರಣೆ ಮಾಡಲಾಯಿತು.
ರಾಮ ನವಮಿ ಉತ್ಸವದಲ್ಲಿ ಪಾಲ್ಗೊಂಡಿರುವ ಸಕಲ ಸಧ್ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು, ವಿಶೇಷ ಆಕರ್ಷಣೆ ಎಂಬಂತೆ ಎಲ್ಲಾ ಸಮಾಜದವರು, ಬಡಾವಣೆಯ ನಿವಾಸಿಗಳು ಭಾಗಿಯಾಗಿ ಕಾರ್ಯಕ್ರಮಕ್ಕೆ ಹೆಚ್ಚಿನ ಶೋಭೆ ತಂದುಕೊಟ್ಟರು.
ಕಾರ್ಯಕ್ರಮದಲ್ಲಿ ಮೋಹನ್ ಬುರಬುರೇ , ರಾಮು ಶಿಕ್ಷಕರು, ಚಂದೂಲಾಲ್ ಚೌದರಿ, ಅಂಬಾದಾಸ ಜೀತ್ರೀ, ಹೀರಲಾಲ ಬಸೂದೇ, ನರಸಿಮುಲು ಗಂಗನೋಳ, ದೇವಪ್ಪ ಬೈಂನ್ಡ್ಲಾ , ತಿಪ್ಪಣ್ಣ ಬೈಂನ್ಡ್ಲಾ, ಹಣಮಂತ ರಾವ್ ರಂಗಪೂರಿ,ಲಕ್ಷ್ಮಪ್ಪ ಮಡಿವಾಳ, ತುಳಸಿ ಚೌಧರಿ, ಬಾಲಾಜಿ ಟಿ, ತುಕಾರಾಮ ದಡಂಗೆ,ರೂಪೇಶ ಬಸುದೆ,ಕಿಶನ್ ಚೌಧರಿ, ಲಾಲಪ್ಪ, ಭೀಮಶಂಕರ ಹಾಜರಿದ್ದರು.
ವರದಿ: ಜಗದೀಶ್ ಕುಮಾರ
