
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವವು ಇಂದು ಶ್ರೀ ರಾಮಲಿಂಗಾ ರೆಡ್ಡಿ ದೇಶಮುಖ ಅವರ ಮನೆಯಿಂದ ಪಲ್ಲಕ್ಕಿಯಲ್ಲಿ ಶ್ರೀ ರಾಮಲಿಂಗೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ತನಾರತಿ, ಕಳಸ, ಪುರವಂತರೊಂದಿಗೆ ದಿ. 07-04-2025 ರಂದು ಸೋಮವಾರ ಸಾಯಂಕಾಲ 6.30 ಗಂಟೆಗೆ ಪೂಜ್ಯ ಶ್ರೀ ಷ. ಬ್ರ.ಬಸವಲಿಂಗ ಶಿವಾಚಾರ್ಯರು ಹಿರೇಮಠ ಕೋಡ್ಲಿ ಇವರ ಸನ್ನಿಧಿಯಲ್ಲಿ ಉಚ್ಚಾಯಿ ಮೆರವಣಿಗೆ ಬಾಜಿ,
ಹಲಗೆಯೊಂದಿಗೆ ಶ್ರೀ ರಾಮಲಿಂಗೇಶ್ವರ ಬೆಟ್ಟದ ಮೇಲೆ ರಥೋತ್ಸವು ಜರುಗುವುದು. ದಿ. 07. 04.2025 ರಿಂದ 11. 04.2025 ರ ವರೆಗೆ ಪಲ್ಲಕ್ಕಿ ಮೆರವಣಿಗೆ ಶ್ರೀ ರಾಮಲಿಂಗ ರೆಡ್ಡಿ ದೇಶಮುಖ ಅವರ ಮನೆಯಿಂದ ಪ್ರತಿದಿನ ರಾತ್ರಿ 8:00 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ಒಂದೊಂದು ಓಣಿಗೆ ಹೋಗುವುದು, ದಿನಾಂಕ 11.04.2025 ರಂದು ಶುಕ್ರವಾರ ರಾತ್ರಿ 10.30 ಗಂಟೆಯಿಂದ ಬೆಳಿಗ್ಗೆ 5:30 ರ ವರೆಗೆ ವಿಶೇಷ ಪಲ್ಲಕ್ಕಿ ಮೆರವಣಿಗೆ ಜರುಗುವುದು. ದಿನಾಂಕ 12- 04 -2025 ರಂದು ಶನಿವಾರ ಸಾಯಂಕಾಲ 6:30 ಗಂಟೆಗೆ ಪೂಜ್ಯ ಶ್ರೀ ಮ. ನಿ. ಪ್ರ. ಚಿಕ್ಕ ಗುರು ನಂಜೇಶ್ವರ ಮಹಾಸ್ವಾಮಿಗಳು ಭರತ ನೂರು ಮತ್ತು ಪೂಜ್ಯ ಶ್ರೀ ಷ. ಬ್ರ. ಬಸವಲಿಂಗ ಶಿವಾಚಾರ್ಯರು ಹಿರೇಮಠ ಕೋಡ್ಲಿ ಇವರುಗಳ ಸನ್ನಿಧಾನದಲ್ಲಿ ವೈಭವದ ರಥೋತ್ಸವ ಜರುಗುವುದು. ದಿ. 13.04.2025 ರಂದು ಸಾಯಂಕಾಲ 4:00ಗೆ ಜಂಗಿ ಪೈಲವಾನರ ಕುಸ್ತಿ ಜರುಗುವುದು. ಕಾರಣ ಸಕಲ ಸದ್ಭಕ್ತರು ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ರಾಮಲಿಂಗೇಶ್ವರ ದರ್ಶನಾಶೀರ್ವಾದ ಪಡೆದು ಪುನೀತರಾಗಬೇಕೆಂದು ಶ್ರೀ ರಾಮಲಿಂಗಾ ರೆಡ್ಡಿ ದೇಶಮುಖ ಅಧ್ಯಕ್ಷರು ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಸಮಿತಿ ಕೋಡ್ಲಿ ಮತ್ತು ಸಕಲ ಸದ್ಬಕ್ತರು ವಿನಂತಿಸಿಕೊಂಡರು.
ವರದಿ: ಶ್ರೀ ಚಂದ್ರಶೇಖರ್ ಆರ್ ಪಾಟೀಲ್
