ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜಿಗೆ ಶೇಕಡಾ 98.46ರಷ್ಟು ಫಲಿತಾಂಶ – ಸಾರ್ಥಕತೆಯಲ್ಲಿ ಗುರು ವೃಂದ

ಬೀದರ್: ಬೀದರ್‌ನ ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೆ ಹೆಸರುವಾಸಿಯಾದ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜು, 2025ರ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ನಿಜಕ್ಕೂ ಸಾಧನೆ ಮೆರೆದಿದೆ. ಶೇಕಡಾ 98.46% ಉನ್ನತ ಫಲಿತಾಂಶವನ್ನು ದಾಖಲಿಸಿ, ಮತ್ತೊಮ್ಮೆ ತನ್ನ ಶೈಕ್ಷಣಿಕ ಶ್ರೇಷ್ಠತೆಯ ಮೆರವಣಿಗೆ ಮುಂದುವರಿಸಿದೆ.

ಈ ವರ್ಷ ಪರೀಕ್ಷೆಗೆ ಹಾಜರಾದ 196 ವಿದ್ಯಾರ್ಥಿಗಳ ಪೈಕಿ 35 ಮಂದಿ ಅಗ್ರ ಶ್ರೇಣಿಯಲ್ಲಿ ಮತ್ತು 138 ಮಂದಿ ಪ್ರಥಮ ಶ್ರೇಣಿಯಲ್ಲಿ ಹಾಗೂ 20 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಇದು ಕಾಲೇಜಿನ ಶಿಕ್ಷಣ ಮಟ್ಟ ಹಾಗೂ ಶ್ರದ್ಧಾಪೂರ್ವಕ ಮಾರ್ಗದರ್ಶನವನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ಕೆಲ ಪ್ರತಿಭಾಶಾಲಿ ವಿದ್ಯಾರ್ಥಿಗಳು ತಮ್ಮ ದಿಟ್ಟ ಸಾಧನೆಗಳಿಂದ ಕಾಲೇಜಿಗೆ ಕೀರ್ತಿ ತಂದಿದ್ದಾರೆ:

ವೈಷ್ಣವಿ ತಂದೆ ನಾಗಶೆಟ್ಟಿ – 95.16%

ಭುವನೇಶ್ವರಿ ತಂದೆ ಪ್ರಭು – 93.33%

ನಿಶ್ಚಿತ ತಂದೆ ಶಾಂತಕುಮಾರ್ – 93%

ಭಾಗ್ಯಶ್ರೀ ತಂದೆ ಗಣಪತಿ – 92.33%

ದೀಪಿಕಾ ತಂದೆ ಧರ್ಮಣ್ಣ-91.16%,

ಪೃಥ್ವಿರಾಜ್ ತಂದೆ ಕೈಲಾಸ-91.16%,

ಅಭಿಷೇಕ್ ತಂದೆ ದತ್ತಾತ್ರಿ- 91%,

ಐಶ್ವರ್ಯ ತಂದೆ ಸುನಿಲ್ – 91%,

ಶಿವನಂದಾ ತಂದೆ ಬಸಪ್ಪ – 90.16%,

ಸುದರ್ಶನ್ ತಂದೆ ಸುರೇಶ 90% ರಷ್ಟು
ಎಲ್ಲರೂ 90% ಕ್ಕಿಂತ ಮೇಲ್ಪಟ್ಟ ಅಂಕಗಳನ್ನು ಪಡೆದು ಕಾಲೇಜಿಗೆ ಗೌರವ ತಂದಿದ್ದಾರೆ.

ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳಲ್ಲಿ ಹಲವರು ನೂರಕ್ಕೆ ನೂರು ಅಂಕಗಳು ಗಳಿಸಿದ್ದು, ಉಪನ್ಯಾಸಕರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಶ್ರಮದ ಸಾರ್ಥಕತೆ ಬಿಂಬಿಸುತ್ತದೆ.

ಶ್ರದ್ಧೆಗೂ ಶ್ಲಾಘನೆಗೂ ಹಬ್ಬದ ಸಂಭ್ರಮ ಕಾಲೇಜಿನ ಪ್ರಾಚಾರ್ಯ ಗೋವಿಂದ್ ಡಿ. ತಾಂದಳೆ ನೇತೃತ್ವದಲ್ಲಿ ಆಡಳಿತ ಮಂಡಳಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಈ ವಿಜೃಂಭಣೆಯ ಯಶಸ್ಸನ್ನು ಆಚರಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ್ ಡಿ. ತಾಂದಳೆ, ಕಾರ್ಯದರ್ಶಿ ಗೋಪಾಲ್ ಡಿ. ತಾಂದಳೆ, ಸಪ್ತಗಿರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯಗುರುಗಳು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.

ಈ ಮಹತ್ವಪೂರ್ಣ ಸಾಧನೆ ಹಿಂದೆ ನಿಷ್ಠಾವಂತ, ತಾಂತ್ರಿಕವಾಗಿ ಪ್ರಬುದ್ಧ ಹಾಗೂ ಪ್ರೇರಣಾದಾಯಕ ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ಉಪನ್ಯಾಸಕರ ತಂಡವಿದೆ. ಗಣಿತ ಉಪನ್ಯಾಸಕರಾದ ಶ್ರೀ ಸಲಾಉದ್ದೀನ, ಕನ್ನಡ ಉಪನ್ಯಾಸಕರಾದ ಶ್ರೀ ಬೀರೇಶ ಯಾತನೂ‌ರ, ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀ ಅನಿಲಕುಮಾರ ಜಾದವ, ಶ್ರೀ ಡಾ|| ಆಸಿಫ್, ಆಂಗ್ಲ ಉಪನ್ಯಾಸಕರಾದ ಶ್ರೀ ಸಾಗರ ಪಡಸಲೆ, ಗಣಿತ ಉಪನ್ಯಾಸಕರಾದ ಶ್ರೀ ಚಂದ್ರಕಾಂತ ಝಬಾಡೆ, ರಾಸಾಯನ ಶಾಸ್ತ್ರ ಉಪನ್ಯಾಸಕಿಯರಾದ ಕು. ಪ್ರಾಜಕ್ತಾ, ಕನ್ನಡ ಉಪನ್ಯಾಸಕಿಯರಾದ ಶ್ರೀಮತಿ ಮಮತಾ, ಶ್ರೀ ಮಾಧವ ಟಿ, ಕು. ಏಂಜಲ್ ಅನುಷಾ, ಶ್ರೀ ಬಸವಕಿರಣ, ಶ್ರೀ ಗಣೇಶ , ಶ್ರೀ ನಾಗರಾಜ , ಶ್ರೀ ಪ್ರೇಮಕುಮಾರ, ಡಾ|| ರಮೇಶ, ಕು.ದಿವ್ಯ, ಕು. ಸಿಮಾ, ಕು.ಶಿವಲಿಲಾ, ಕು.ಪಲ್ಲವಿ, ಕು.ಅಶ್ವಿನಿ, ಕು. ಸುಜಾತ, ಕು. ನಾಗರತ್ನ, ಶ್ರೀ ರಾಹುಲ, ಶ್ರೀ ರಜನಿಕಾಂತ, ಶ್ರೀ ಶಿದ್ದಲಿಂಗ, ಇತರ ಉಪನ್ಯಾಸಕರ ಪರಿಶ್ರಮ ವಿದ್ಯಾರ್ಥಿಗಳ ಸಾಧನೆಗೆ ಬಲವಾಗಿವೆ.

ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜು ಈ ಫಲಿತಾಂಶದ ಮೂಲಕ ಕೇವಲ ಶೇಕಡಾ ಪ್ರಮಾಣವಷ್ಟೇ ಅಲ್ಲ, ಶೈಕ್ಷಣಿಕ ಮೌಲ್ಯ, ಶ್ರದ್ಧೆ, ಶಿಸ್ತಿನ ಪರಿಪಾಠ ಮತ್ತು ಪ್ರಗತಿ ಪಥದ ಪಾಠವನ್ನು ಸಮಾಜಕ್ಕೆ ನೀಡಿದೆ.

ವರದಿ: ಸಾಗರ್ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ