ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಅಮರದೇವರಗುಡ್ಡ, ಕೆರೆಯಲ್ಲಿ ಹಲವು ದಿನಗಳಿಂದ ಪ್ರತಿದಿನವೂ ಸಾವಿರಾರು ಮೀನುಗಳು ಸಾವನ್ನಪ್ಪಿ ದಡ ಸೇರುಯತ್ತಿವೆ. ನಿಖರ ಕಾರಣ ತಿಳಿಯದಾಗಿದ್ದು ನಿಗೂಢವಾಗಿದೆ , ಕೆರೆಯಲ್ಲಿ ಮೀನುಗಾರಿಕೆ ಮಾಡಲು ಗುತ್ತಿಗೆ ಪಡೆದವರು ಹೇಳುವ ಪ್ರಕಾರ ತಮಗಾಗದವರು ಯಾರೋ..ಕೆರೆಯಲ್ಲಿ ವಿಷಮಿಶ್ರಣ ಮಾಡಿರುವ ಸಾಧ್ಯತೆ ಇದ್ದು ಈ ಕಾರಣಕ್ಕಾಗಿ ಈ ರೀತಿ ಮೀನುಗಳು ಮರಣವನ್ನಪ್ಪುತ್ತಿವೆ, ಪರಿಣಾಮ ಸುಮಾರು ಮೂವತ್ತು (30.00,000ರೂ) ಲಕ್ಷಕ್ಕೂ ಅಧಿಕ ಬೆಲೆಯ ಮೀನುಗಳು ಮರಣವನ್ನಪ್ಪಿವೆ ಎಂದು ಮೀನುಗಾರಿಕೆ ಗುತ್ತಿಗೆದಾರರಾದ ಭೋವಿ ರಮೇಶ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಳೆದ ವರ್ಷದ ಹಿಂದೆ ಇದೇ ರೀತಿ ನಷ್ಟ ಅನುಭವಿಸಿದ್ದು, ಅದೇ ರೀತಿ ಈ ಭಾರಿಯೂ ಜರುಗಿದೆ ಯಾರೋ ಕಿಡಿಗೇಡಿಗಳು ಕೆರೆಯ ನೀರಿಗೆ ವಿಷ ಬೆರೆಸಿದ್ದಾರೆಂಬ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದ ಇಲಾಖೆಗಳು ತಮಗಾದ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಅವರು ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಿದ್ದಾರೆ.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ.
