
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ನರಸಿಂಹಗಿರಿ ಗ್ರಾಮದಲ್ಲಿ ಇಂದು ಮಹಿಳಾ ದಿನಾಚರಣೆ ಅಂಗವಾಗಿ ಗುಡೆಕೋಟೆ ಹೋಬಳಿಯ ಗರ್ಭಿಣಿ ತಾಯಿಯಂದರಿಗೆ ಇಂದು ಮಾನ್ಯ ಕೂಡ್ಲಿಗಿ ಜನಪ್ರಿಯ ಶಾಸಕರಾದಂತಹ ಡಾಕ್ಟರ್ ಎನ್ ಟಿ ಶ್ರೀನಿವಾಸ್ ಅವರ ಹುಟ್ಟೂರಲ್ಲಿಯೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕೂಡ್ಲಿಗಿ ಕ್ಷೇತ್ರದ ಹೆಸರಾಂತ ನಾಯಕರಾದ ಮಾಜಿ ಶಾಸಕರಾದ ದಿವಂಗತ ಎನ್ ಟಿ ಬೊಮ್ಮಣ್ಣನವರ ಧರ್ಮ ಪತ್ನಿ ಶ್ರೀಮತಿ ಓಬಮ್ಮ ಅವರೊಂದಿಗೆ ಇಂದು ಗುಡೆಕೋಟೆ ಹೋಬಳಿಯ ವ್ಯಾಪ್ತಿಯ ಗರ್ಭಿಣಿ ತಾಯಿಯಂದಿರಿಗೆ ಸೀಮಂತ ಕಾರ್ಯಕ್ರಮ ಹಾಗೂ ಆಶಾ ಕಾರ್ಯಕರ್ತರಿಗೆ ಚಿಕ್ಕದಾಗಿ ಚೊಕ್ಕವಾಗಿ ಒಂದು ಸನ್ಮಾನ ಕಾರ್ಯಕ್ರಮವನ್ನು ಪರಮಪೂಜ್ಯ ಹಿರೇಮಠ ಪ್ರಶಾಂತ್ ಸಾಗರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಇಂದು ಹಮ್ಮಿಕೊಂಡಿದ್ದರು ಜನಪ್ರಿಯ ಶಾಸಕರಾದಂತಹ ಡಾಕ್ಟರ್ ಎನ್ ಟಿ ಶ್ರೀನಿವಾಸ್ ಅವರೊಂದಿಗೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಕೊಡಲಾಯಿತು. ಶ್ರೀನಿವಾಸ್ ಸರ್ ಮಾತನಾಡುತ್ತಾ “ತಾಯ್ತನ ಎಂಬುದು ಹೆಣ್ಣಿಗೊಲಿದ ಅದೃಷ್ಟ ” ಅದೃಷ್ಟವನ್ನು ಸಂಭ್ರಮಿಸುವುದೇ ಸೀಮಂತ ಕಾರ್ಯ ಸೀಮಂತವೆಂದರೆ ಸಂಭ್ರಮ ಆಚರಣೆಯಲ್ಲ ಇದೊಂದು ಸಂಸ್ಕಾರ, ಗರ್ಭವತಿಯಾದ ಹೆಣ್ಣು ಮಗಳು ಮತ್ತು ಆಕೆಯ ಕರುಳುಕುಡಿಗೆ ಸರ್ವವೂ ಶುಭವಾಗಲಿ ಎಂದು ಹರಸುವ ಸಂಪ್ರದಾಯ ಬದ್ಧ ಶಾಸ್ತ್ರವಾಗಿದೆ ಎಂದು ತನ್ನ ಹೆಣ್ಣು ಹಾಗೂ ಕರುಳು ಕುಡಿಯನ್ನು ಶಾಸಕರು ಮನಕಟ್ಟುವಂತೆ ವ್ಯಕ್ತಪಡಿಸಿದರು ಹಾಗೂ ಗರ್ಭಿಣಿ ಅಂತ ಹೆಣ್ಣು ಮಕ್ಕಳಿಗೆ ಅವರಿಗೆ ಚುಚ್ಚುಮದ್ದು ಹಾಗೂ ಇನ್ನೂ ಅನೇಕ ಸಮಸ್ಯೆಗಳನ್ನು ಆಲಿಸಿ ಗರ್ಭಿಣಿ ಅಂತ ಹೆಣ್ಣು ಮಕ್ಕಳಿಗೆ ಸಹಕರಿಸಿವ ಆಶಾ ಕಾರ್ಯಕರ್ತರಿಗೆ ಒಂದು ಚಿಕ್ಕದಾಗಿ ಚೊಕ್ಕವಾಗಿ ಸನ್ಮಾನ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದ್ದರು.
ಸಂದರ್ಭದಲ್ಲಿ ಮಾಜಿ ಶಾಸಕರಾದ ದಿವಂಗತ ಎನ್ ಟಿ ಬೊಮ್ಮಣ್ಣನವರ ಧರ್ಮಪತ್ನಿಯಾದ ಶ್ರೀಮತಿ ಓಬಮ್ಮ, ಪ್ರಾಧ್ಯಾಪಕರಾದ ಪ್ರೊಫೆಸರ್ ಎಲ್ ಟಿ ಗಂಗಮ್ಮ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಎಸ್ ವೆಂಕಟೇಶ್, ಕಾಂಗ್ರೆಸ್ ಪಕ್ಷದ ಮುಖಂಡರು ಸಮಾಜ ಸೇವಕರಾದ ಎನ್ಟಿ ತಮ್ಮಣ್ಣ, ಕೂಡ್ಲಿಗಿ ತಾಲೂಕಿನ ಸರಕಾರಿ ಆಸ್ಪತ್ರೆಯ ವೈದ್ಯಧಿಕಾರಿಗಳಾದ ಎಸ್ ಪಿ ಪ್ರದೀಪ್ ಸರ್ ಅವರು ತಾಲೂಕಿನ ಸಮಸ್ತ ಆಶಾ ಕಾರ್ಯಕರ್ತೆಯರು, ಗರ್ಭಿಣಿ ಮಹಿಳೆಯರು ಹಾಗೂ ಕಾಂಗ್ರೆಸ್ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
