ಯಾದಗಿರಿ /ಗುರುಮಠಕಲ್: ಪುರಸಭೆ ಉಪಾಧ್ಯಕ್ಷರಾದ ಶ್ರೀಮತಿ ರೇಣುಕಾ ಪಡಿಗೆ ಅವರು ಭಗಾವಾನ್ ಮಹಾವೀರರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು, ಇನ್ನೂ ಜಯಂತಿಯ ಅಂಗವಾಗಿ FDC ಪರಶುರಾಮ್ ನರಿಬೋಳ ಮಾತನಾಡಿ ಅತ್ಯಂತ ಕಠಿಣ ವ್ರತಗಳಿಂದ ಜೈನ ಸಂಪ್ರದಾಯ ಸ್ಥಾಪಿಸಿದರು, ಅಂತಹ ಶ್ರೇಷ್ಠ ದೈವ ಆರಾಧನೆಯ ಜೈನ ಮತದ ಕೊನೆಯ ತೀರ್ಥಂಕರಾದ ಶ್ರೀ ಭಗವಾನ ಮಹಾವೀರರು ತ್ಯಾಗದ ಪ್ರತೀಕ, ಅಹಿಂಸೆಯ ಸಾಕಾರ ಮೂರ್ತಿ, ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎಂದು ಬೋಧಿಸಿದ ಭಗವಾನ್ ಮಹಾವೀರರನ್ನು ಸ್ಮರಿಸೋಣ ಎಂದು ಹೇಳಿದರು.
ಜಯಂತಿಯಲ್ಲಿ ಪುರಸಭೆ ಸದಸ್ಯರಾದ ಅಶೋಕ್ ಕಲಾಲ್, ಶರಣಪ್ಪ ಲಿಕ್ಕಿ, ಫಯಾಜ್ ಅಹಮದ್,JDS ಮುಖಂಡರಾದ ರಘುನಾಥ್ ರೆಡ್ಡಿ, ನಾಮ ನಿರ್ದೇಶಕ ಸದಸ್ಯರಾದ ಧರ್ಮವೀರ ವಾರದ,ವೆಂಕಟಪ್ಪ ನೀರೆಟಿ, ವ್ಯವಸ್ಥಾಪಕರಾದ ಮಲ್ಲಿಕಾರ್ಜುನ ಸುಂಗಲಕರ, ಸಮುದಾಯ ಸಂಘಟಕರಾದ ಮರಿಲಿಂಗಪ್ಪ ,ಕಿರಿಯ ಆರೋಗ್ಯ ನಿರೀಕ್ಷಕರು ಅಶೋಕ್, SDC ವೀರಭದ್ರಪ್ಪ, ಭೀಮ ಶಂಕರ, ವಿನೋದ್, ರಿಯಾಜ್, ಮಲ್ಲಿಕಾರ್ಜುನ, ರಾಮಕೃಷ್ಣ ಯಾದವ್ ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್
