
ಕೊಪ್ಪಳ : ಅಕ್ಕಮಹಾದೇವಿಯವರ ವಿಚಾರಗಳು ಅವರ ಸಾಮಾಜಿಕ ಬದ್ಧತೆ ಲಿಂಗ ಸಮಾನತೆಯ ವಿಚಾರಗಳನ್ನು ಅವರ ವಚನಗಳ ಮೂಲಕ ಅರ್ಥೈಸಿಕೊಂಡು ಪ್ರಸ್ತುತ ಇಂದಿನ ಮಹಿಳೆಯರು ಅವರ ರೀತಿ ಬದುಕುವಂತಹ ದಾರಿಯಲ್ಲಿ ಸಾಗಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಸರ್ಕಾರ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಲಮಾಣಿ ಅವರು ಹೇಳಿದರು.
ಇಂದು ನಗರದ ಸರ್ಕಾರ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅಕ್ಕಮಹಾದೇವಿ ಜಯಂತಿ ಪ್ರಯುಕ್ತ ಕನ್ನಡ ಕ್ರಿಯಾ ವೇದಿಕೆ ಅಡಿ ಅನುಭವ ಮಂಟಪದಲ್ಲಿ ಶರಣರ ನುಡಿ ಎನ್ನುವ ವಿಚಾರಮಂಥನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಂದ ಶರಣರ ನುಡಿಗಳನ್ನು ವಾಚನ ಮಾಡುವ ಮೂಲಕ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹುಲಿಗೆಮ್ಮ ಬಿ ಅವರು ಮಾತನಾಡಿ, ಅನುಭವ ಮಂಟಪ ಎನ್ನುವುದು ಅಂದಿನ ಮೊದಲ ಪ್ರಜಾ ಸಂಸತ್ತು ಆಗಿತ್ತು ಆ ಮೂಲಕ ಯಾವುದೇ ಜಾತಿ, ಮತ, ಲಿಂಗ ಭೇದವಿಲ್ಲದೆ ಸಮಾನತೆಯ ಸಂದೇಶವನ್ನು ಕೊಡುವಂತಹ ವಿಶೇಷವಾದ ಸಾಮೂಹಿಕ ಸಂದೇಶ ನೀಡುವ ಸ್ಥಳವಾಗಿ ಅನುಭವ ಮಂಟಪ ಪರಿಕಲ್ಪನೆಯನ್ನು ಶರಣರು ನೀಡಿದ್ದು ಇಂದಿಗೂ ಅದರ ಮಾದರಿ ರಾಜಕೀಯವಾಗಿ ನಾವು ಕಾಣಬಹುದಾಗಿದೆ ಎಂದು ತಿಳಿಸಿದರು.
ಕನ್ನಡ ಉಪನ್ಯಾಸಕ ಡಾ. ಮಂಜು ಕುರ್ಕಿ ಅವರು ಮಾತನಾಡಿ, 12ನೇ ಶತಮಾನದ ಶರಣರ ನುಡಿಗಳು ಅನುಭಾವಿಕ ವಿಚಾರಗಳಾಗಿದ್ದು, ತಮ್ಮ ವಿಚಾರಗಳನ್ನು ವಚನಗಳ ಮೂಲಕ ತಿಳಿಸುವುದರೊಂದಿಗೆ ಸರಳ ಜೀವನ ವೈಚಾರಿಕ ಅರಿವು ಮೌಢ್ಯ ಆಚರಣೆಗಳ ವಿಡಂಬನೆಗಳನ್ನು ವಚನಗಳ ಮೂಲಕ ತಿಳಿಸುವುದರೊಂದಿಗೆ ಸಾಮಾಜಿಕ ಸುಸ್ಥಿರತೆಯನ್ನು ಕಾಪಾಡುವಲ್ಲಿ ಶರಣರ ಪಾತ್ರವು ಬಹು ಮುಖ್ಯವಾಗಿದೆ ಅದರಲ್ಲೂ ಲಿಂಗ ಭೇದ ಇಲ್ಲದೆ ಸಮಾನ ದೃಷ್ಟಿಯಿಂದ ಸಮ ಸಮಾಜದ ನಿರ್ಮಾಣಕ್ಕೆ ಅಕ್ಕಮಹಾದೇವಿಯ ವಿಚಾರಗಳು ಇಂದಿಗೂ ಆದರ್ಶವಾಗಬೇಕು ಎನ್ನುವ ಸಂದೇಶವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿವಶರಣರ ಪಾತ್ರಧಾರಿಗಳಾಗಿ ಅಕ್ಕಮಹಾದೇವಿ ಪಾತ್ರ – ಅಕ್ಕಮಹಾದೇವಿ ಪ್ರಥಮ ಬಿಎ ವಿದ್ಯಾರ್ಥಿನಿ,
ಅಲ್ಲಮಪ್ರಭು ಪಾತ್ರ – ಶ್ರೀದೇವಿ ಪ್ರಥಮ ಬಿಎ ವಿದ್ಯಾರ್ಥಿನಿ,
ಬಸವಣ್ಣನ ಪಾತ್ರ – ಶಾಹೀನ ದ್ವಿತೀಯ ಬಿಎ ವಿದ್ಯಾರ್ಥಿನಿ,
ಗಂಗಾಂಬಿಕೆ ಪಾತ್ರ – ಕೌಸರ್ ಬಾನು ಪ್ರಥಮ ಬಿಎ ವಿದ್ಯಾರ್ಥಿನಿ,
ನೀಲಾಂಬಿಕೆ ಪಾತ್ರ – ರಾಜೇಶ್ವರಿ ಪ್ರಥಮ ಬಿಎ ವಿದ್ಯಾರ್ಥಿನಿ,
ಆಯ್ದಕ್ಕಿ ಲಕ್ಕಮ್ಮ ಪಾತ್ರ – ಲಕ್ಷ್ಮವ್ವ ಪ್ರಥಮ ಬಿಎ ವಿದ್ಯಾರ್ಥಿನಿ, ಇವರುಗಳು ಶಿವಶರಣರ ಪಾತ್ರಗಳನ್ನು ನಿರ್ವಹಿಸಿದರು.
ಕಾರ್ಯಕ್ರಮ ನಿರೂಪಣೆ ಭೂಮಿಕಾ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿನಿ ನಿರ್ವಹಿಸಿ, ಪ್ರಾಸ್ತಾವಿಕ ನುಡಿ ವೈಷ್ಣವಿ ರಾಥೋಡ್ ಬಿಎ ದ್ವಿತೀಯ ವಿದ್ಯಾರ್ಥಿ, ಅನ್ನಪೂರ್ಣ ಸ್ವಾಗತಿಸಿ, ನೇತ್ರ ವಂದನಾರ್ಪಣೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಡಾ. ನರಸಿಂಹ,ಡಾ. ಮಲ್ಲಿಕಾರ್ಜುನ, ಡಾ. ಅಶೋಕ್ ಕುಮಾರ್, ಡಾ. ಪ್ರದೀಪ್ ಕುಮಾರ್. ಸುಮಿತ್ರ ಎಸ್ ವಿ, ಕನ್ನಡ ವಿಭಾಗದ ಉಪನ್ಯಾಸಕರಾದ ಶಿವಪ್ರಸಾದ ಹಾದಿಮನಿ, ಡಾ. ಸೂರಪ್ಪ ವೈ.ಪಿ. ಭೂಗೋಳಶಾಸ್ತ್ರ ವಿಭಾಗದ ಶ್ರೀಕಾಂತ್ ಸಿಂಗಾಪುರ, ಶಿಕಾ ಬಡಿಗೇರ ಹಾಗೂ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.
- ಕರುನಾಡ ಕಂದ
